ಮತದಾನ ಶಾಂತಿಯುತ ಅಂತ್ಯ

7

ಮತದಾನ ಶಾಂತಿಯುತ ಅಂತ್ಯ

Published:
Updated:
ಮತದಾನ ಶಾಂತಿಯುತ ಅಂತ್ಯ

ತಿರುವನಂತಪುರಂ/ಪುದುಚೇರಿ (ಐಎಎನ್ಎಸ್/ಪಿಟಿಐ): ತಮಿಳುನಾಡು , ಕೇರಳ ಹಾಗೂ ಪುದುಚೇರಿ ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಮತದಾನ ಶಾಂತಿಯುತವಾಗಿ ಅಂತ್ಯವಾಗಿದೆ.ಅತ್ಯಂತ ಬಿರುಸಿನಿಂದ ಕೇರಳದಲ್ಲಿ ನಡೆದ ಮತದಾನ ಶಾಂತಿಯುತವಾಗಿತ್ತು. ಎಲ್ಲೂ ಅಹಿತಕರ ಘಟನೆಗಳು ಸಂಭವಿಸಿದ ಬಗೆಗೆ ವರದಿಗಳು ಬಂದಿಲ್ಲ. ಮತದಾನ ಅಂತ್ಯವಾಗುವುದಕ್ಕೆ ಕೇವಲ 10 ನಿಮಿಷಕ್ಕೂ ಮುಂಚೆ ಶೇ. 73.40 ರಷ್ಟು ಮತದಾನವಾಗಿದೆ.ಕೋಯಿಕ್ಕೋಡ್ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು- ಶೇ. 78.50 ರಷ್ಟು ಮತದಾನವಾಗಿದ್ದರೆ, ರಾಜಧಾನಿ ತಿರುವನಂತಪುರಂನಲ್ಲಿ ಅತ್ಯಂತ ಕಡಿಮೆ ಅಂದರೆ ಶೇ. 67.30 ರಷ್ಟು ಮತದಾನವಾಗಿದೆ.ಅತ್ತ ಪುದುಚೇರಿಯಲ್ಲೂ ಅತ್ಯಂತ ಬಿರುಸಿನ ಹಾಗೂ ಶಾಂತಿಯುತ ಮತದಾನವಾದ ಬಗೆಗೆ ವರದಿಗಳು ಲಭ್ಯವಾಗಿವೆ. ಮತದಾನ ಅಂತ್ಯವಾಗುವುದಕ್ಕೆ ಕೇವಲ ಒಂದು ಗಂಟೆ ಬಾಕಿ ಇರುವಂತೆ ರಾಜ್ಯದಲ್ಲಿ ಶೇ. 78.86 ರಷ್ಟು ಮತದಾನವಾಗಿದೆ. ಯಾನಂ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಅಂದರೆ ಶೇ. 92ರಷ್ಟು ಮತದಾನವಾಗಿದೆ. ತಮಿಳುನಾಡಿನಲ್ಲೂ ಮತದಾನ ಬಿರುಸಾಗಿಯೇ ನಡೆದರೂ ದಿನದಂತ್ಯದ ವೇಳೆಗೆ ಶೇ. 65 ರಷ್ಟು ಮಾತ್ರ ಮತದಾನವಾದ ಬಗೆಗೆ ವರದಿಗಳು ಬಂದಿವೆ. ಇಲ್ಲೂ ಕೂಡ ಶಾಂತಿಯುತವಾಗಿಯೇ ಮತದಾನ ನಡೆದಿದೆ.ಮತದಾನದ ಶೇಕಡಾವಾರು ಅಂತಿಮ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry