ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಚುನಾವಣಾ ಪ್ರಚಾರದ ಬಿರುಸು ತೀವ್ರವಾಗಿದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಬಗೆಯ ಕಸರತ್ತುಗಳಿಗೆ ಕೈಹಾಕಿದ್ದಾರೆ. ಮತದಾರರ ಮನ ತಣಿಸಲು ಕೆಲವರು ಮದ್ಯ-ಮಾಂಸಗಳ ಮೊರೆ ಹೋದರೆ, ಇನ್ನು ಕೆಲವರು ಮಠಾಧೀಶರ ಮೂಲಕ ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನಕ್ಕೂ ಮುಂದಾಗಿದ್ದಾರೆ!

ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಪರಿಷತ್ತಿನ ಚುನಾವಣೆಯಲ್ಲಿ `ಆನ್ ರೆಕಾರ್ಡ್~ ಜಾತಿಯ ಪ್ರಭಾವ ಇಲ್ಲ. ಆದರೆ `ಆಫ್ ದಿ ರೆಕಾರ್ಡ್~ ಇಲ್ಲಿ ಜಾತಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತದೆ.

ಚುನಾವಣೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಯೊಬ್ಬರ ಪ್ರಕಾರ, `ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಮತ ಚಲಾಯಿಸುವ ಸಮುದಾಯದ ಒಂದು ಭಾಗವೇ ಕಸಾಪ ಚುನಾವಣೆಯಲ್ಲೂ ಮತದಾನ ಮಾಡುತ್ತದೆ. ಮತದಾರರ ಸಂಖ್ಯೆ ಇಲ್ಲಿ ಕಡಿಮೆ ಇರಬಹುದು, ಆದರೆ ಸರ್ವವ್ಯಾಪಿಯಾಗಿರುವ ಜಾತಿ ಇಲ್ಲಿ ಲೆಕ್ಕಕ್ಕಿಲ್ಲ ಅಂತ ಹೇಳುವುದು ಸಾಧ್ಯವೇ ಸ್ವಾಮಿ?!~

2008ರಲ್ಲಿ ಅಂದಾಜು 60 ಸಾವಿರ ಇದ್ದ ಕಸಾಪ ಮತದಾರರ ಸಂಖ್ಯೆ ಈ ಬಾರಿ 1.08 ಲಕ್ಷಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಸಹಜವಾಗಿಯೇ ಅಭ್ಯರ್ಥಿಗಳ ಚುನಾವಣಾ ವೆಚ್ಚ ಕೂಡ ಹೆಚ್ಚಾಗಿದೆ. ಈ ಬಾರಿ ಚುನಾವಣೆಯಲ್ಲಿ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಕನಿಷ್ಠ 10ರಿಂದ 15 ಲಕ್ಷ ರೂಪಾಯಿ ಖರ್ಚು ಮಾಡಬಹುದು ಎನ್ನಲಾಗಿದೆ.

ಕೆಲವು `ಗಟ್ಟಿ ಕುಳ~ಗಳು 25ರಿಂದ 30 ಲಕ್ಷ ರೂಪಾಯಿ ಖರ್ಚು ಮಾಡಿದರೂ ಆಶ್ಚರ್ಯಪಡಬೇಕಾಗಿಲ್ಲ ಎಂದು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಹೆಸರು ಬಹಿರಂಗ ಮಾಡಬಾರದು ಎಂಬ ಷರತ್ತಿನೊಂದಿಗೆ `ಪ್ರಜಾವಾಣಿ~ಗೆ ತಿಳಿಸಿದರು.

`ಸಾಹಿತ್ಯ ಪರಿಷತ್ತಿನ ಚುನಾವಣೆಗೂ 10ರಿಂದ 15 ಲಕ್ಷ ರೂಪಾಯಿ ಹಣ ಖರ್ಚು ಮಾಡಬೇಕಾ?~ ಎಂದು ಪ್ರಶ್ನಿಸುವವರಿಗೂ ಅವರಲ್ಲಿ ಉತ್ತರ ಇದೆ. `ಕಸಾಪ ಮತದಾರರ ಸಂಖ್ಯೆ ಲಕ್ಷ ಮೀರಿದೆ. ನಮ್ಮ ಉಮೇದುವಾರಿಕೆ ಬಗ್ಗೆ ಎಲ್ಲರಿಗೂ ತಿಳಿಯಬೇಕು ಅಂದರೆ, ಪ್ರತಿಯೊಬ್ಬರಿಗೂ ಅಂಚೆ ಮೂಲಕ ಪತ್ರ, ಪ್ರಣಾಳಿಕೆ ರವಾನಿಸಬೇಕು. ಇದಕ್ಕೇ ನಾಲ್ಕೂವರೆ ಲಕ್ಷ ರೂಪಾಯಿ ಬೇಕು. ಇನ್ನು ಪತ್ರ, ಪ್ರಣಾಳಿಕೆ, ಕರಪತ್ರ ಮುದ್ರಣಕ್ಕೆ ಅಂದಾಜು ಮೂರು ಲಕ್ಷ ರೂಪಾಯಿ ಬೇಕು~ ಎಂದು ಚುನಾವಣಾ ಅಖಾಡದಲ್ಲಿ ಮಗ್ನರಾಗಿರುವ ಅಭ್ಯರ್ಥಿಯೊಬ್ಬರು ತಿಳಿಸಿದರು.

ಚುನಾವಣಾ ಖರ್ಚು ಇಷ್ಟಕ್ಕೇ ಮುಗಿಯುವುದಿಲ್ಲ. ಅಭ್ಯರ್ಥಿ ರಾಜ್ಯದಾದ್ಯಂತ ಪ್ರವಾಸ ಮಾಡಬೇಕು. ಇದರ ಬಾಬ್ತು ಲಕ್ಷ ತಲುಪುತ್ತದೆ. ಇನ್ನು ಆಕಸ್ಮಿಕವಾಗಿ ಎದುರಾಗುವ ಸಣ್ಣ-ಪುಟ್ಟ ಖರ್ಚುಗಳನ್ನು ಸೇರಿಸಿದರೆ ಅಭ್ಯರ್ಥಿಯೊಬ್ಬ ಕನಿಷ್ಠ 10 ಲಕ್ಷ ರೂಪಾಯಿ ಖರ್ಚು ಮಾಡಲೇಬೇಕಾದ ಸ್ಥಿತಿ ಇದೆ. ಮತದಾರರ ಸಂಖ್ಯೆ ಕಡಿಮೆ ಇದ್ದ ಕಾರಣ, ಕಳೆದ ಬಾರಿಯ ಚುನಾವಣೆ ಖರ್ಚು ಅಂದಾಜು ರೂ ಐದರಿಂದ ಆರು ಲಕ್ಷದ ಆಸುಪಾಸಿನಲ್ಲಿ ಇತ್ತು ಎಂದು ಅವರು ಲೆಕ್ಕ ನೀಡಿದರು.

ಊಟ ಅಂದರೆ ಬಾಡೂಟ!: ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಕೆಲವು ಅಭ್ಯರ್ಥಿಗಳು ಭರ್ಜರಿ ಪಾರ್ಟಿಗಳನ್ನೂ ಆಯೋಜಿಸುತ್ತಿದ್ದಾರೆ. ರಾಜ್ಯದ ವಿವಿಧೆಡೆ ಆಯ್ದ ಹೋಟೆಲ್ಗಳಲ್ಲಿ ಮತದಾರರಿಗೆ ಪುಷ್ಕಳ ಭೋಜನ ಹಾಕಿಸುತ್ತಿದ್ದಾರೆ. ಊಟ ಅಂದ ಮೇಲೆ ಯಾವ ಊಟ ಅಂತ ಕೇಳುವಂತಿಲ್ಲ, ಅದು ಬಾಡೂಟವೇ! ಮಾಂಸ ಕೊಟ್ಟ ಮೇಲೆ ಮದಿರೆ ಇಲ್ಲದಿದ್ದರೆ ಆದೀತೇ? ಅದೂ ಯಥೇಚ್ಛವಾಗಿಯೇ ಹರಿಯುತ್ತಿದೆ ಎಂದು ಅಭ್ಯರ್ಥಿಯೊಬ್ಬರು `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

ಕಸಾಪ ಚುನಾವಣೆಗೆ ಸಂಬಂಧಿಸಿದ ಬಾಡೂಟದ ಪಾರ್ಟಿಗಳು ಆಯ್ದ ಕೆಲವರಿಗೆ, ನಿರ್ದಿಷ್ಟ ಹೋಟೆಲ್ಗಳಲ್ಲಿ ನಡೆಯುವುದರಿಂದ ಸಾರ್ವಜನಿಕರಿಗೆ ಗೊತ್ತಾಗುವುದಿಲ್ಲ. ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಗಳ ಸಂದರ್ಭ ಆಯೋಜನೆ ಆಗುವ ಬಾಡೂಟಗಳಂತೆ ಬಿಸಿ-ಬಿಸಿ ಚರ್ಚೆಗೂ ಗ್ರಾಸವಾಗುವುದಿಲ್ಲ ಎನ್ನುವುದು ಕಸಾಪದ ಅನುಭಾವಿಗಳ ಅಂಬೋಣ. ಚುನಾವಣೆ ಅಂದರೆ ಬಾಡೂಟ, ಮದಿರೆಯ ಸೇವೆ ಮಾತ್ರವೇ ಅಲ್ಲ ಸ್ವಾಮಿ, ಇಲ್ಲಿ ನಾಡಿನ ಕೆಲವು ಮಠಾಧೀಶರ ಕೈಚಳಕವೂ ಕೆಲಸ ಮಾಡುತ್ತದೆ ಎನ್ನುತ್ತಾರೆ ಕಸಾಪವನ್ನು ಹತ್ತಿರದಿಂದ ಬಲ್ಲವರು.

ವಿವಿಧ ಸಂಸ್ಥೆಗಳನ್ನು ನಡೆಸುತ್ತಿರುವ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಭಾಗದ ಕೆಲವು ಮಠಾಧೀಶರು ತಮ್ಮ ಹಿಡಿತ ಇರುವ ಮತದಾರರ ಮೇಲೆ ಪ್ರಭಾವ ಬೀರಲು ಆರಂಭಿಸಿದ್ದಾರೆ ಎನ್ನಲಾಗಿದೆ. ಆದರೆ, ಮೂಲಗಳ ಪ್ರಕಾರ, ಮಠಾಧೀಶರು ಸ್ವ-ಇಚ್ಛೆಯಿಂದ ಕಸಾಪ ಚುನಾವಣೆಯಲ್ಲಿ ಆಸಕ್ತಿ ತೋರಿಲ್ಲ. ಕೆಲವು ಅಭ್ಯರ್ಥಿಗಳು ದುಂಬಾಲು ಬಿದ್ದ ಕಾರಣವೇ ಮಠಾಧೀಶರು ಇತ್ತ ದೃಷ್ಟಿ ಹಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಲೆಕ್ಕ ಕೇಳುವಂತಿಲ್ಲ!
ಕಸಾಪ ಚುನಾವಣೆಯನ್ನು ಪ್ರಜಾಪ್ರತಿನಿಧಿ ಕಾಯ್ದೆಯ ಅನ್ವಯವೇ ನಡೆಸಲಾಗುತ್ತಿದ್ದರೂ, ಇಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಯಾವುದೇ ಮಿತಿ ಇಲ್ಲ.

ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕಾರಣ, ಅಭ್ಯರ್ಥಿಯ ಚುನಾವಣಾ ವೆಚ್ಚದ ಮೇಲೆ ಮಿತಿ ಹೇರುವ ಕ್ರಮ ಬೇಡ ಎಂಬ ಅಭಿಪ್ರಾಯವನ್ನು ಕೇಂದ್ರ ಚುನಾವಣಾ ಆಯೋಗ 2008ರಲ್ಲೇ ವ್ಯಕ್ತಪಡಿಸಿದೆ ಎಂದು ಕಸಾಪ ಚುನಾವಣಾ ಅಧಿಕಾರಿ ಕೆ. ನಾಗರಾಜು `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.