ಮತ್ತೆ ಅದೇ ಶಾಲೆ ಬೇಡ ಎಂದ ಬಾಲಕಿ

ಕೋಲ್ಕತ್ತ (ಐಎಎನ್ಎಸ್, ಪಿಟಿಐ): `ನಾನು ಆ ಹಾಸ್ಟೆಲ್ನತ್ತ ಮುಖ ಮಾಡುವುದಿಲ್ಲ; ಒಂದು ವೇಳೆ ಅಲ್ಲಿಗೆಹೋದರೆ ಮತ್ತೆ ಅಂಥ ಶಿಕ್ಷೆ ಕೊಡಬಹುದು. ಬೇರೆ ಶಾಲೆಗೆ ಹೋಗುತ್ತೇನೆ~
-ಹಾಸಿಗೆ ಒದ್ದೆ ಮಾಡಿಕೊಂಡಿದ್ದಕ್ಕಾಗಿ ಬಲವಂತವಾಗಿ ಸ್ವಮೂತ್ರ ಕುಡಿಯುವ ಅಮಾನವೀಯ ಶಿಕ್ಷೆಗೆ ಒಳಗಾಗಿದ್ದ ವಿಶ್ವ ಭಾರತಿ ಕ್ಯಾಂಪಸ್ನ 5ನೇ ತರಗತಿ ವಿದ್ಯಾರ್ಥಿನಿ ಭಯಭೀತಳಾಗಿ ನುಡಿದ ಮಾತುಗಳಿವು.
ವರದಿ ಕೇಳಿದ ರಾಜ್ಯಪಾಲ: ಈ ಪ್ರಕರಣಕ್ಕೆ ಸಂಬಂಧಿಸಿದ ವರದಿ ನೀಡುವಂತೆ ವಿಶ್ವ ಭಾರತಿ ವಿಶ್ವವಿದ್ಯಾಲಯವನ್ನು ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ. ನಾರಾಯಣನ್ ಕೇಳಿದ್ದಾರೆ.
`ನಾನು ವರದಿಗಾಗಿ ಕಾಯುತ್ತಿದ್ದೇನೆ. ಬಳಿಕ ಕ್ರಮ ಕೈಗೊಳ್ಳುತ್ತೇನೆ~ ಎಂದು ಮಂಗಳವಾರ ಇಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.