ಸೋಮವಾರ, ಮೇ 17, 2021
28 °C

ಮತ್ತೆ ಮೌಢ್ಯಕ್ಕೆ ಚಾಮರಾಜನಗರ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜ್ಯೋತಿಷಶಾಸ್ತ್ರ ಮುಂತಾದ ಮೂಢನಂಬಿಕೆಗಳೆಲ್ಲಾ ತೀರಾ ವಯಕ್ತಿಕ ವಿಷಯಗಳು. ಕೆಲವರು ಅದನ್ನು ವಂಚನೆಯ  ಮತ್ತು  ಸಂಪಾದನೆಗಾಗಿ ಬಳಸಿಕೊಂಡರೆ ಮತ್ತೆ ಕೆಲವರು ಅಂತಹ ವಂಚನೆಗೆ ನಿತ್ಯ ತಲೆ ಕೊಡುತ್ತಲೇ ಜೀವನ ಸವೆಸುತ್ತಾರೆ.  ಒಟ್ಟಿನಲ್ಲಿ ಇವರ ಸಂಖ್ಯೆ ಸಮಾಜದಲ್ಲಿ ತೀರಾ ಕಮ್ಮಿ. ಪ್ರಶ್ನೆ ಏನೆಂದರೆ ಇಂತಹ ವಂಚನೆಯ ವಯಕ್ತಿಕ ವಿಷಯಗಳನ್ನು ಸಾರ್ವತ್ರೀಕರಣಗೊಳಿಸುತ್ತಿರುವುದು ದುರಂತ.ಇಡೀ ಒಂದು ಜಿಲ್ಲೆಯೇ ಶಾಪಗ್ರಸ್ತವಾಗಿದೆ ಎಂದು ಅದರ ಶಾಪವನ್ನು ಬಿಡಿಸುತ್ತೇವೆಂದು ಸರ್ಕಾರಿ ಬೊಕ್ಕಸದ ವೆಚ್ಚದಲ್ಲಿ ಮಾಡುತ್ತಿರುವುದು ವಿಪರ್ಯಾಸ.ರಾಜ್ಯದ ಬೊಕ್ಕಸದ ಹಣವನ್ನು ಇಂತಹ ವಂಚನೆಯ, ಮೂಢನಂಬಿಕೆಗೆ ಬಳಸಿ ಬರೋಬ್ಬರಿ 12 ಲಕ್ಷ ರೂಪಾಯಿಯ ದುಂದುವೆಚ್ಚದ  ಕ್ರಿಯೆ ನಡೆದಿರುವುದು ಚಾಮರಾಜನಗರದಲ್ಲಿ. ಅದೂ ಆ ನಗರದ ಹಿತಚಿಂತನೆಯ ಹೆಸರಲ್ಲಿ! ನಮ್ಮ ಜಿಲ್ಲೆ ಶಾಪಗ್ರಸ್ತವಲ್ಲ, ನಾವು ಶಾಪಗ್ರಸ್ತ ಜನರಲ್ಲ ಎಂದು ಜನರು ಎದೆ ತಟ್ಟಿ ಸ್ವಾಭಿಮಾನಿಗಳಾಗಿ ಇದನ್ನೆಲ್ಲ ಪ್ರತಿಭಟಿಸಬೇಕಿತ್ತು.ಲಕ್ಷಾಂತರ ರೂಪಾಯಿಯನ್ನು ಸರ್ಕಾರ ಖರ್ಚು ಮಾಡಬೇಕಿರುತುವುದು   ಹೋಮಹವನಕ್ಕಲ್ಲ! ನಮ್ಮೂರಿನ ಕಿತ್ತುಹೋದ ರಸ್ತೆಗಳಿಗೆ, ಕೊಠಡಿಗಳಿಲ್ಲದ ಶಾಲೆಗಳಿಗೆ, ಶೌಚಾಲಯಗಳಿಲ್ಲದ ಮನೆಗಳಿಗೆ, ಸೂರಿಲ್ಲದ ಬಡವರಿಗೆ  ಎಂಬುದನ್ನು ಸರ್ಕಾರದ ಕಿವಿ ಕಿತ್ತು ಹೋಗುವ ಹಾಗೆ ಕೂಗಿ ಹೇಳಬೇಕಿದೆ.     

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.