ಶನಿವಾರ, ಫೆಬ್ರವರಿ 27, 2021
19 °C

ಮತ್ತೆ ‘ಮಾಯಾಮೃಗ’ದ ಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ‘ಮಾಯಾಮೃಗ’ದ ಓಟ

ಮಾಯಾಮೃಗ’ ಕನ್ನಡದ ಕಿರುತೆರೆ ವೀಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಬೆರಳೆಣಿಕೆಯ ಧಾರಾವಾಹಿಗಳಲ್ಲಿ ಒಂದು. ಟಿ.ಎನ್. ಸೀತಾರಾಂ, ಪಿ. ಶೇಷಾದ್ರಿ ಹಾಗೂ ನಾಗೇಂದ್ರ ಶಾ  ನಿರ್ದೇಶನದ ಈ ಧಾರಾವಾಹಿ ೧೯೯೮ರಲ್ಲಿ ಚಂದನ ವಾಹಿನಿಯಲ್ಲಿ ಮೊದಲ ಬಾರಿಗೆ ಪ್ರಸಾರಗೊಂಡಿತ್ತು.‘ಮಾಯಾಮೃಗ’ ಇನ್ನೂ ಪ್ರೇಕ್ಷಕರ ಮನದಲ್ಲಿ ಹಸಿರಾಗಿಯೇ ಇದೆ. ಈಗ ಮತ್ತೆ ಪ್ರೇಕ್ಷಕರ ಒತ್ತಾಯದ ಮೇರೆಗೆ ಜೀ ಕನ್ನಡ ವಾಹಿನಿಯಲ್ಲಿ (ಮಾರ್ಚ್ 10ರಿಂದ ಆರಂಭವಾಗಿದೆ) ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳುತ್ತಿದೆ. ಧಾರಾವಾಹಿ ಮೂರನೇ ಬಾರಿ ಮರುಪ್ರದರ್ಶನಗೊಳ್ಳುತ್ತಿದ್ದು, ಹಿಂದಿನಂತೆಯೇ ಈ ಸಲವೂ ಪ್ರೇಕ್ಷಕನನ್ನು ಸೆಳೆಯುತ್ತಿದೆ. ಟಿ.ಎನ್. ಸೀತಾರಾಂ, ಹಿರಿಯ ನಟ ದತ್ತಣ್ಣ, ಮಾಳವಿಕಾ, ಲಕ್ಷ್ಮೀ, ಅವಿನಾಶ್, ಮಂಜುಭಾಷಿಣಿ, ಎಂ.ಡಿ. ಪಲ್ಲವಿ, ಸೇತುರಾಂ, ಲಕ್ಷ್ಮೀ ಚಂದ್ರಶೇಖರ್, ವೈಶಾಲಿ ಕಾಸರವಳ್ಳಿ, ವೀಣಾ ಸುಂದರ್, ಮುಖ್ಯಮಂತ್ರಿ ಚಂದ್ರು ಇತರರ ಅಭಿನಯ ಇಲ್ಲಿದೆ. ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಕೆ.ಎಸ್. ನರಸಿಂಹಸ್ವಾಮಿ ಅವರು ಸೀತಾರಾಂ ಅವರ ಒತ್ತಾಯಕ್ಕೆ ಮಣಿದು ಬರೆದುಕೊಟ್ಟಿದ್ದರಂತೆ. ಆ ಹಾಡಿಗೆ ಸಿ. ಅಶ್ವಥ್ ರಾಗ ಸಂಯೋಜಿಸಿದ್ದರು. ನಾಲ್ಕು ವಿಭಿನ್ನ ಕುಟುಂಬಗಳ ನಡುವೆ ನಡೆಯುವ ಕಥೆ ಧಾರಾವಾಹಿಯದ್ದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.