ಸೋಮವಾರ, ಏಪ್ರಿಲ್ 12, 2021
26 °C

ಮತ್ತೊಂದು ದಿನ ಅದ್ದೂರಿ ಆಚರಣೆ: ಶಾಸಕ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ನೀಲಂ ಚಂಡಮಾರುತದಿಂದ ಮಳೆ ಬೀಳುತ್ತಿದ್ದ ಕಾರಣ ಗುರುವಾರ  ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.ರಾಜ್ಯೋತ್ಸವ ಆಚರಣೆಗೆ ನಿಗದಿಯಾಗಿದ್ದ ಪಟ್ಟಣದ ಜಹಗೀರ‌್ದಾರ್ ಬಂಗಲೆ ಆವರಣ ಮಳೆ ಯಿಂದ ಕೊಚ್ಚೆಯಾದ ಹಿನ್ನೆಲೆಯಲ್ಲಿ ಹಾಗೂ ಮಳೆ ಇನ್ನೂ ಮುಂದುರೆದಿದ್ದರಿಂದ ಶಾಮಿಯಾನ ಹಾಕದ ಸ್ಥಿತಿ ಏರ್ಪಟ್ಟಿತ್ತು.

ಇದರಿಂದ ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಸರಳವಾಗಿ ನಡೆದ ಸಮಾರಂಭದಲ್ಲಿ ಧ್ವಜಾರೋಹಣ ನಡೆಯಿತು. ಮಳೆಯ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಸಂಖ್ಯೆಯೂ ಇಳಿಮುಖವಾಗಿತ್ತು.ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತ ನಾಡಿ, ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸಿದ ಮಹಾತ್ಮರನ್ನು ಸ್ಮರಿಸುವ ಈ ಸುದಿನದಂದು ನಾಡು ನುಡಿ ಕಟ್ಟುವ ಕೆಲಸಕ್ಕೆ ಅವರ ಮಾರ್ಗ ವನ್ನೇ ಅನುಸರಿಸುವ ಅನಿವಾರ್ಯತೆ ಪ್ರಸ್ತುತ ದಿನಗಳಲ್ಲಿ ಇದೆ. ಮಳೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮ ಸರಳವಾಗಿದ್ದು, ಇದೇ ತಿಂಗಳ ಮತ್ತೊಂದು ದಿನ  ಅದ್ದೂರಿ ರಾಜ್ಯೋತ್ಸವ ಆಚರಿಸುವಂತೆ ತಾಲ್ಲೂಕು ಆಡಳಿತಕ್ಕೆ ಸೂಚನೆ ನೀಡಿದರು. ನಂತರ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.ಮೆರವಣಿಗೆ ರದ್ದಾದರೂ ಪಟ್ಟಣದ ಎಸ್‌ಡಿವಿಎಸ್ ಶಾಲೆಯ ಮಕ್ಕಳು ಮಾತ್ರ ಕರ್ನಾಟಕ ಏಕೀಕರಣದ ಸ್ತಬ್ಧಚಿತ್ರವು ಗಮನ ಸೆಳೆಯಿತು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗಂಗಾಮಣಿ ರೇವಣ್ಣ, ಉಪಾಧ್ಯಕ್ಷ ರಾಮಚಂದ್ರು, ಸದಸ್ಯರಾದ ವಿಜಯಲಕ್ಷ್ಮಿನಂಜುಂಡ, ಕೆ.ಪಿ.ಶಿವಣ್ಣ, ನಾಗೇಶ್, ಡಿ.ವೆಂಕಟಾಚಲ, ತಹಶೀಲ್ದಾರ್ ಶಿವನಾಗಯ್ಯ, ಉಪ ತಹಶೀಲ್ದಾರ್ ನಂಜಯ್ಯ, ಶಿರಸ್ತೇದಾರ್ ನಂಜುಂಡಯ್ಯ, ಇಒ ರಘುನಾಥ್, ಬಿಇಒ ಮಂಜುನಾಥ್,  ಎಇಇ ದೇವರಾಜು, ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ್ ಹಾಜರಿದ್ದರು.ವಿವಿಧೆಡೆ ರಾಜ್ಯೋತ್ಸವ ಆಚರಣೆ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲೂ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ರಂಗಸ್ವಾಮಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.ಸದಸ್ಯರಾದ ನಾಗರತ್ನಮಹೇಶ್, ಮಲ್ಲಯ್ಯ, ಸೋಮನಾಯಕ, ರಮೇಶ್, ಮನೋಹರ್, ನಾಗೇಶ್ ಮುಖ್ಯಾಧಿಕಾರಿ ವಿಜಯ್, ಜೆಇ ಬೆಟ್ಟಸ್ವಾಮಿ ಮುಖಂಡರಾದ ಮಹದೇವ ಸ್ವಾಮಿ, ಮರಯ್ಯ, ಬಂಗಾರು ಇತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.