ಛೇ ಇದೆಂತಹ ದುರಂತ ನೋಡಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಕ್ರೀಡಾ ಕ್ಷೇತ್ರದ ಮರ್ಯಾದೆ ಉದ್ದೀಪನ ಮದ್ದಿನ ಮಸಿಯಿಂದ ಕಪ್ಪಾಗಿತ್ತು. ಈಗ ಮತ್ತೊಮ್ಮೆ ಮದ್ದಿನ ಮೋಹ ಭಾರತದ ಕಬಡ್ಡಿ ಆಟಗಾರರನ್ನು ಸುತ್ತಿಕೊಂಡು ದೇಶದ ಮಾನಹಾನಿ ಆಗುವಂತೆ ಮಾಡಿದೆ.

ಅದು 2011ರ ಜುಲೈ ತಿಂಗಳು. ಇನ್ನೇನು ಎರಡು-ಮೂರು ದಿನ ಕಳೆದರೆ 19ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ಆರಂಭವಾಗುವುದಿತ್ತು. ಇದರ ಆರಂಭಕ್ಕೆ ಮುನ್ನವೇ ಮದ್ದಿನ ಭೂತ ಭಾರತದ ಕೆಲ ಅಥ್ಲೀಟ್ಗಳನ್ನು ಹೊಕ್ಕಿತ್ತು. ಎಂಟು ಅಥ್ಲೀಟ್ಗಳು ಇದರ ಬೆನ್ನು ಹತ್ತಿ ಹೋಗಿದ್ದರು ಎಂಬುದು ಪರೀಕ್ಷೆಗೆ ನಂತರ ಸಾಬೀತಾಗಿತ್ತು. ಇಷ್ಟು ಸಾಕಲ್ಲವೇ 2012ರಲ್ಲಿ ನಡೆಯುವ ಒಲಿಂಪಿಕ್ಸ್ ಕೂಟದಲ್ಲಿ ಭಾರತಕ್ಕೆ ಹಿನ್ನಡೆಯಾಗಲು.

ಏಷ್ಯನ್ ಅಥ್ಲೆಟಿಕ್ಸ್ನಲ್ಲಿ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಎಂಟು ಕಂಚು ಸೇರಿದಂತೆ ಒಟ್ಟು 11 ಪದಕ ಜಯಿಸಿದ್ದ ಭಾರತದ ಅಥ್ಲೀಟ್ಗಳು ಮದ್ದಿನ ಕೊಳೆ ತೊಳೆಯಲು ಯತ್ನಿಸಿದರು. ಆದರೂ, ಕರಾಳ ನೆನೆಪುಗಳು ಇತಿಹಾಸದ ಪುಟ ಹೊಕ್ಕ ಮೇಲೆ ಮರಳಿ ಮರಳಿ ನೆನಪಾಗದೇ ಇರದು. ಇದರ ಪರಿಣಾಮ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ ಮೇಲೂ ಆಯಿತು. ಇದರಲ್ಲಿ ಭಾರತದ ಅಥ್ಲೀಟ್ಗಳಿಗೆ ಒಂದೂ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ.

ಭಾರತದಲ್ಲಿ ಕಬಡ್ಡಿ ಆಟಕ್ಕೆ ವಿಶೇಷವಾದ ಸ್ಥಾನವಿದೆ. ಗ್ರಾಮೀಣ ಪ್ರದೇಶಗಳಲ್ಲಿ ದೇವಸ್ಥಾನದ ಅಂಗಳದಲ್ಲಿ ಇಂದಿಗೂ ಈ ಕ್ರೀಡೆಯನ್ನು ಆಡುತ್ತಾರೆ. ಕೆಲವೆಡೆ ಜಾತ್ರೆಯಲ್ಲಿಯೂ ಆಡುತ್ತಾರೆ. ದೇಸಿ ಆಟವಾದ ಕಾರಣ ಈ ಕ್ರೀಡೆಯ ಬಗ್ಗೆ ಎಲ್ಲರಿಗೂ ಅಚ್ಚುಮೆಚ್ಚು.

ಪ್ರಪಂಚದ 65 ದೇಶಗಳಲ್ಲಿ ಸುಮಾರು ಐದು ಕೋಟಿ ಜನ ಕಬಡ್ಡಿ ಆಡುತ್ತಾರೆ. ಇವುಗಳಲ್ಲಿ ಭಾರತ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ, ಜಪಾನ್, ಶ್ರೀಲಂಕಾ, ಥಾಯ್ಲೆಂಡ್, ಮಲೇಷ್ಯಾ, ಇರಾನ್, ಕೆನಡಾ, ಇಂಗ್ಲೆಂಡ್, ಇಟಲಿ ಹಾಗೂ ಆಸ್ಟ್ರೇಲಿಯ ಸೇರಿದಂತೆ ಇನ್ನೂ ಕೆಲ ದೇಶಗಳು ವಾರ್ಷಿಕ ರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸುತ್ತವೆ. ಇಂಥ ದೊಡ್ಡ ಇತಿಹಾಸ ಕಬಡ್ಡಿಗಿದೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಬಡ್ಡಿ ಪಾಡು ಏನಾಗುತ್ತಿದೆ?

ಪ್ರಪಂಚದ ತಂಡ ಕ್ರೀಡೆಗಳಲ್ಲಿ ಯಾವುದೇ ಸಲಕರಣೆಗಳಿಲ್ಲದೆ ಆಡಬಹುದಾದ ಕ್ರೀಡೆ ಕಬಡ್ಡಿ. ಕ್ರಿಕೆಟ್, ಫುಟ್ಬಾಲ್, ಹಾಕಿ ಕ್ರೀಡೆಗೆ ವಿಶಾಲ ಮೈದಾನ ಅಗತ್ಯ. ಕಬಡ್ಡಿಗೆ ನಿಯಮಗಳು ಸರಳವಾಗಿದ್ದು, ಜನ ಸಾಮಾನ್ಯರಿಗೆ ಸಮೀಪದಲ್ಲಿವೆ. ಈ ಎಲ್ಲಾ ಅಂಶಗಳಿಂದ ದೇಶಿ ಕ್ರೀಡೆ ಕಬಡ್ಡಿ ಜನರಿಗೆ ಹತ್ತಿರವಾಗಿದೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಕ್ರೀಡೆಯ ಮಾನ ಹರಾಜಾಗುತ್ತಿದ್ದರೆ, ಗ್ರಾಮೀಣ ಜನರಲ್ಲಿ ಇದರ ಬಗ್ಗೆ ಅಭಿಮಾನಿ ಉಳಿಯುವುದಾದರೂ ಹೇಗೆ?

ನಡೆದದ್ದಾದರು ಏನು: ಲೂಧಿಯಾನಾದಲ್ಲಿ ಅಕ್ಟೋಬರ್ ತಿಂಗಳ ಆರಂಭದಲ್ಲಿ ವಿಶ್ವಕಪ್ ಕಬಡ್ಡಿಗೆ ಭಾರತ ತಂಡವನ್ನು ರಚಿಸಲು ಆಯ್ಕೆ ಟ್ರಯಲ್ಸ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹತ್ತು ಆಟಗಾರರು ನಿಷೇದಿತ ಮದ್ದು ತೆಗೆದುಕೊಂಡಿದ್ದು ಪತ್ತೆಯಾಗಿತ್ತು.

ನಂತರ ನಡೆದ ಇನ್ನಷ್ಟು ಪರೀಕ್ಷೆಯಲ್ಲಿ ಮತ್ತೆ ಒಂಬತ್ತು ಆಟಗಾರರು ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ ಎನ್ನುವ ಅಂಶ ಬಹಿರಂಗಗೊಂಡಿದೆ. ಒಟ್ಟು ಈ ಸಂಖ್ಯೆ 19ಕ್ಕೆ ಏರಿದೆ. ಅಷ್ಟೇ ಅಲ್ಲ ಕೋಲ್ಕತ್ತದಲ್ಲಿ ನಡೆದಿದ್ದ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಕೂಟದಲ್ಲಿ ಮೂವರು ಅಥ್ಲೀಟ್ಗಳು ಸಿಕ್ಕಿಬಿದ್ದಿದ್ದಾರೆ. ಒಟ್ಟು 51 ಕಬಡ್ಡಿ ಆಟಗಾರರನ್ನು ಆಯ್ಕೆ ಟ್ರಯಲ್ಸ್ ವೇಳೆ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಕ್ರಮ ಕೈಗೊಳ್ಳುವ ವಿಶ್ವಾಸ: ಭಾರತದ ಕ್ರೀಡಾ ಸಂಸ್ಥೆಗಳು ಮದ್ದು ಸೇವನೆಯ ಘಟನೆ ನಡೆದಾಗ ಮಾತ್ರ ಎಚ್ಚೆತ್ತುಕೊಳ್ಳುತ್ತವೆ. ಆಟಗಾರರು ಮದ್ದು ಸೇವಿಸಿ ಸಿಕ್ಕಿ ಬಿದ್ದಾಗ ಸಂಬಂಧಿತ ಫೆಡರೇಷನ್ಗಳು ಹಾಗೂ ಕ್ರೀಡಾ ಸಂಸ್ಥೆಗಳು ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡುತ್ತವೆ. ಅಥ್ಲೆಟಿಕ್ಸ್ ಲೋಕವನ್ನು ತಲ್ಲಣಗೊಳಿಸಿದ ಘಟನೆ ನಡೆದಾಗ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ಕೆಲ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್ಎಐ) ಮೇಲೆ ದಾಳಿ ನಡೆಸಿತು.

ಈ ಕುರಿತು ತನಿಖೆ ನಡೆಸಲು ಪಂಜಾಬ್ ಹಾಗೂ ಹರಿಯಾಣ ರಾಜ್ಯದ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮುಕುಲ್ ಮುದುಗಲ್ ಅವರ ನೇತೃತ್ವದಲ್ಲಿ ಸಮಿತಿಯನ್ನು ಸಹ ರಚಿಸಿತು. ಆದರೆ, ಕಠಿಣ ಕಾನೂನು ರೂಪಿಸಲಿಲ್ಲ. ಈ ತರಹದ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಮುಂದಾಗಲಿಲ್ಲ.

ಕಠಿಣ ಕ್ರಮ ಕೈಗೊಂಡಾದ ಮೇಲೂ, ಮದ್ದಿನ ಆಟ ಮೆತ್ತಗಾಗುವುದೇ ಇಲ್ಲವಲ್ಲ. ಹೀಗಾದರೆ ಮುಂದೊಂದು ದಿನ ಭಾರತ ಕ್ರೀಡಾ ಕ್ಷೇತ್ರದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಉಹಿಸುವುದಾದರೂ ಹೇಗೆ? ಆದರೆ, ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಒಲಿಂಪಿಕ್ ಸಂಸ್ಥೆ ತಪ್ಪಿತಸ್ಥರನ್ನು ಸ್ಪರ್ಧಾ ಕ್ಷೇತ್ರದಿಂದಲೇ ದೂರ ಇಡುವಂಥ ದಿಟ್ಟ ಹೆಜ್ಜೆ ಇಟ್ಟಿದೆ.

ಈ ಕುರಿತು ಸಂಬಂಧಿತ ಕ್ರೀಡಾ ಫೆಡರೇಷನ್ಗಳಿಗೆ ನಿರ್ದೇಶನ ನೀಡಿದೆ. ಈ ತರಹದ ಘಟನೆಗಳು ಮರುಕಳಿಸಬಾರದು ಎಂದಾದರೆ ಈ ತರಹದ ಕಠಿಣ ಕ್ರಮ ಅಗತ್ಯ. ಇದು ಭವಿಷ್ಯದ ಕ್ರೀಡಾಪಟುಗಳಿಗೆ ಎಚ್ಚರಿಕೆಗೆ ಗಂಟೆಯಾಗಬೇಕು.

ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಕಬಡ್ಡಿ ತಂಡ ಸತತವಾಗಿ ಚಿನ್ನದ ಪದಕ ಜಯಿಸುತ್ತಲೇ ಬಂದಿದೆ. ಇದೇ ಮೊದಲ ಸಲ ಏಷ್ಯನ್ ಕ್ರೀಡಾಕೂಟದಲ್ಲಿ ಆಡಿದ ಭಾರತ ಮಹಿಳಾ ತಂಡ ಸಹ ಚಾಂಪಿಯನ್ ಆಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಬಡ್ಡಿ ಎಂದರೆ `ಭಾರತ~ ಎನ್ನುವ ಅತಿ ದೊಡ್ಡ ಮರ್ಯಾದೆಯಿದೆ. ಹೀಗಾದರೆ, ಮುಂದಿನ ದಿನಗಳಲ್ಲಿ ನಮ್ಮ ದೇಶದ ಸ್ಪರ್ಧಿಗಳಿಂದ ಉತ್ತಮ ಸಾಧನೆ ನಿರೀಕ್ಷಿಸುವುದಾದರೂ ಹೇಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.