ಗುರುವಾರ , ಮೇ 28, 2020
27 °C

ಮದ್ಯ ಸೇವಿಸಿ ವಿಮಾನ ಚಾಲನೆ; ಪೈಲಟ್‌ಗೆ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ಕುಡಿದ ಅಮಲಿನಲ್ಲಿ ವಿಮಾನ ಚಾಲನೆ ಮಾಡಿದ್ದ ಪೈಲಟ್‌ಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ. ಲಂಡನ್‌ನ ಹೀಥ್ರೂ ವಿಮಾನನಿಲ್ದಾಣದಲ್ಲಿ ವಿಮಾನ ಚಾಲನೆ ಮಾಡುವಾಗ ತಾನು ಎಲ್ಲಿ ವಿಮಾನ ಚಾಲನೆ ಮಾಡುತ್ತಿದ್ದೇನೆ ಎಂಬುದನ್ನೇ ಕಂಠಪೂರ್ತಿ ಕುಡಿದಿದ್ದ ಡೆಲ್ಟಾ ಏರ್‌ಲೈನ್ಸ್‌ನಲ್ಲಿ ನಿರ್ವಹಿಸುತ್ತಿದ್ದ ಜಾರ್ಜ್ ಲಾ ಪರ್ಲ್ ಮರೆತಿದ್ದ.ಆತನಿಗೆ ವಿಮಾನ ಚಾಲನೆ ಮಾಡುತ್ತಿರುವ ಬಗ್ಗೆ ಅರಿವೇ ಇರಲಿಲ್ಲ ಎಂಬುದು ಭದ್ರತಾ ಸಿಬ್ಬಂದಿ ಆತನನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಕಂಡುಬಂತು. ಜಾರ್ಜ್ ಅಂದು ಮಿತಿಗಿಂತ ನಾಲ್ಕೂವರೆ ಪಟ್ಟು ಹೆಚ್ಚು ಮದ್ಯವನ್ನು ಸೇವಿಸಿದ್ದ.ಡೆಟ್ರಾಯಿಟ್‌ಗೆ ಹೋಗಬೇಕಿದ್ದ ವಿಮಾನವನ್ನು ನ್ಯೂಯಾರ್ಕ್‌ಗೆ ಹೋಗುತ್ತಿರುವುದಾಗಿ ಭದ್ರತಾ ಸಿಬ್ಬಂದಿಗೆ ಆತ ತಿಳಿಸಿದ್ದ. ವಿಮಾನ ಚಾಲನೆಯಲ್ಲಿ 20 ವರ್ಷಗಳ ಅನುಭವ ಹೊಂದಿರುವ ಜಾರ್ಜ್ ಅಮೆರಿಕದ ಬಾಸ್ಟನ್ ಮೂಲದವನು.2010ರ ನವೆಂಬರ್ 1ರಂದು ಕಂಠಪೂರ್ತಿ ಕುಡಿದು ಆತ ಬೋಯಿಂಗ್ 767 ವಿಮಾನ ಚಾಲನೆ ಮಾಡುತ್ತಿದ್ದ. ಆತನೊಂದಿಗೆ ಮೂವರು ಪೈಲಟ್‌ಗಳಿದ್ದರು. ವಿಮಾನದಲ್ಲಿ ಅಮೆರಿಕಕ್ಕೆ ಹೊರಟಿದ್ದ 241 ಪ್ರಯಾಣಿಕರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.