ಶುಕ್ರವಾರ, ಜೂಲೈ 10, 2020
27 °C

ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿ: 31ರಂದು ರೈತರ ಕಂಪೆನಿ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಧ್ಯವರ್ತಿಗಳ ಹಾವಳಿ, ಬೆಲೆ ಕುಸಿತ, ಆತ್ಮಹತ್ಯೆ ಮುಂತಾದವುಗಳಿಂದ ನೊಂದಿರುವ  ರೈತರೇ ಈಗ ಖಾಸಗಿ ಕಂಪೆನಿಯೊಂದನ್ನು ಸ್ಥಾಪಿಸಿಕೊಂಡಿದ್ದು ಅದು ಜ.31ರಂದು ಉದ್ಘಾಟನೆಯಾಗಲಿದೆ.

ಇಲ್ಲಿನ ರೈತರು ರೈತರಿಂದ ರೈತರಿಗಾಗಿಯೇ ‘ಬಾನುಲಿ ಕೃಷಿಕರ ಕಂಪೆನಿ’ ಎಂಬ ಖಾಸಗಿ ಲಿಮಿಟೆಡ್  ಕಂಪೆನಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಉಗಮಕ್ಕೆ ಕಾರಣವಾದದ್ದು ಆಕಾಶವಾಣಿ ಮೈಸೂರು. ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಬಾನುಲಿ ಕೃಷಿ ಬೆಳಗು ಇಂಥ ವಿಶಿಷ್ಟ ಕಂಪೆನಿಯನ್ನು ಹುಟ್ಟುಹಾಕಲು ಸ್ಫೂರ್ತಿ ನೀಡಿತು.

ಕಂಪೆನಿಯ ಅಧ್ಯಕ್ಷರಾಗಿ ಮಂಡ್ಯದ ರಾಮಚಂದ್ರ, ವ್ಯವಸ್ಥಾಪಕ ನಿರ್ದೇಶಕರಾಗಿ ಜಿ.ಬಿ.ಸರಗೂರಿನ ವೆಂಕಟೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರ್ದೇಶಕ ಮಂಡಳಿಯಲ್ಲಿ 13 ಮಂದಿ ನಿರ್ದೇಶಕರಿದ್ದಾರೆ. ರೈತರೇ ಷೇರುಗಳನ್ನು ಹೂಡಿ ಕಂಪೆನಿಯನ್ನು ಮುನ್ನಡೆಸುತ್ತಿದ್ದಾರೆ.

ಯೋಜನೆಗಳು: ಮಾರುಕಟ್ಟೆ ವ್ಯವಸ್ಥೆ ಸುಧಾರಣೆ, ಜೈವಿಕ ಇಂಧನ ಉತ್ಪನ್ನ ಘಟಕ ಸ್ಥಾಪನೆ (ಹೊಂಗೆ, ಬೇವು, ಹಿಪ್ಪೆ ಇತ್ಯಾದಿ), ರೈತರ ಸ್ವಾವಲಂಬನೆ, ರೈತರ ಆರ್ಥಿಕ ಸುಧಾರಣೆ ಮುಂತಾದ ಯೋಜನೆಗಳನ್ನು ಕಂಪೆನಿ ಹಾಕಿಕೊಂಡಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ತಿಳಿಸಿದರು. ಹೆಚ್ಚಿನ ಮಾಹಿತಿಗೆ 9945290334 ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.