ಮಂಗಳವಾರ, ಜನವರಿ 28, 2020
18 °C

ಮಧ್ಯಸ್ಥಿಕೆ ಕೇಂದ್ರಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಮಧ್ಯಸ್ಥಿಕೆ ಪ್ರಕ್ರಿಯೆ ಯಿಂದ ವ್ಯಾಜ್ಯಗಳು ಶೀಘ್ರವೇ ಇತ್ಯರ್ಥಗೊಳ್ಳುವುದರಿಂದ ವಕೀಲರಿಗೆ ಹಾಗೂ ಕಕ್ಷಿದಾರರಿಗೆ ಅನುಕೂಲ ವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಧ್ಯಕ್ಷ ಬಿ.ಜಿ.ಜೆಟ್ಟಣ್ಣವರ ತಿಳಿಸಿದರು.



ನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆವರಣದಲ್ಲಿ ಬುಧ ವಾರ ಕಾನೂನು ಸಾಕ್ಷರತಾ ರಥದ ಪ್ರವಾಸ ಮತ್ತು ಜನತಾ ನ್ಯಾಯಾಲ ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ವಿವಾದ ಮತ್ತು ವ್ಯಾಜ್ಯ ಗಳನ್ನು ಸುಲಭವಾಗಿ ಮತ್ತು ಶೀಘ್ರ ವಾಗಿ ಪರಿಹರಿಸುವ ನಿಟ್ಟಿನಲ್ಲಿ ನ್ಯಾಯಾ ಲಯದ ಆವರಣದಲ್ಲಿ ಮಧ್ಯಸ್ಥಿಕೆ ಕೇಂದ ಸ್ಥಾಪಿಸಲಾಗಿದೆ~ ಎಂದರು.



`ಮೂರನೇ ತಟಸ್ಥ ವ್ಯಕ್ತಿಯು ಯಾವುದೇ ವ್ಯಾಜ್ಯದಲ್ಲಿನ ವಿವಾದವು ನ್ಯಾಯಾಲಯದಲ್ಲಿ ವಿಚಾರಣೆಗೆ ಹೋಗದೇ, ಮಾತುಕತೆಯ ಮೂಲಕ ಸುಲಭವಾಗಿ ಇತ್ಯರ್ಥಪಡಿಸಿಕೊಳ್ಳಲು ಮಧ್ಯಸ್ಥಿಕೆ ಕೇಂದ್ರಗಳು ಸಹಕಾರಿಯಾಗುತ್ತವೆ~ ಎಂದು ಹೇಳಿದರು.



ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಮಾತನಾಡಿ, `ಸಾರ್ವಜನಿಕರಲ್ಲಿ ಕಾನೂನು ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲೆಯಾ ದ್ಯಂತ ಕಾನೂನು ಅರಿವು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತಸದ ಸಂಗತಿ. ಇದರ ಪ್ರಯೋಜನ ವನ್ನು ಸಾರ್ವಜನಿಕರು ಪಡೆದುಕೊಳ್ಳ ಬೇಕು~ ಎಂದರು.



ಕಾನೂನು ಸಾಕ್ಷರತಾ ಮತ್ತು ಜನತಾ ನ್ಯಾಯಾಲಯದ ಸಂಚಾರಿ ವಾಹನವು ಚಿಕ್ಕಬಳ್ಳಾಪುರ ತಾಲ್ಲೂಕಿನಾದ್ಯಂತ ಜನವರಿ 11 ರಿಂದ 14, ಗೌರಿಬಿದನೂರನಲ್ಲಿ ಜನವರಿ 15 ರಿಂದ 17, ಗುಡಿಬಂಡೆಯಲ್ಲಿ ಜನವರಿ 18 ಮತ್ತು 19, ಬಾಗೇಪಲ್ಲಿಯಲ್ಲಿ ಜನವರಿ 20 ಮತ್ತು 21, ಚಿಂತಾಮಣಿಯಲ್ಲಿ ಜನವರಿ 22 ರಿಂದ 25ರವರೆಗೆ ಮತ್ತು ಶಿಡ್ಲಘಟ್ಟ ಜನವರಿ 26 ರಿಂದ 28ರವರೆಗೆ ಸಂಚರಿಸಲಿದೆ.



ಜಿಲ್ಲಾ ಪಂಚಾಯಿತಿ ಸಿಇಒ ಬಿ.ಎಸ್.ಶೇಖರಪ್ಪ, ಕಾರ್ಯನಿರ್ವಾ ಹಕ ಎಂಜಿನಿಯರ್ ಎಂ.ಬಸವರಾ ಜಯ್ಯ, ಜಿಲ್ಲಾ ಸರ್ಕಾರಿ ವಕೀಲ ಬಿ.ಆರ್. ಹರಿಕುಮಾರ್, ಹೆಚ್ಚುವರಿ ಸರ್ಕಾರಿ ವಕೀಲ ಕೆ.ಎಂ.ಗೋವಿಂದ ರೆಡ್ಡಿ, ಹಿರಿಯ ವಕೀಲ ಬಿ.ಎಚ್.ಮಹ ಮ್ಮದ್ ದಾವೂದ್,  ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಪ್ರತಿಕ್ರಿಯಿಸಿ (+)