ಮಂಗಳವಾರ, ಜನವರಿ 21, 2020
20 °C
ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌: ವರ್ಷಾಗೆ ನಿರಾಸೆ

ಮನನ್‌ ಚಂದ್ರ, ಚಿತ್ರಾಗೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಗಾವ್‌ಪಿಲ್ಸ್‌, ಲಾತ್ವಿಯಾ (ಪಿಟಿಐ): ಭಾರತದ ಮನನ್‌ ಚಂದ್ರ ಹಾಗೂ ಚಿತ್ರಾ ಮಗಿಮೈರಾಜ್‌ ಇಲ್ಲಿ ನಡೆಯುತ್ತಿರುವ ಐಬಿಎಸ್‌ಎಫ್‌ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಸಾಧಿಸಿದ್ದಾರೆ.ಸೋಮವಾರ ನಡೆದ ಪುರುಷರ ವಿಭಾಗದ ಲೀಗ್‌ ಹಂತದ ಪಂದ್ಯದಲ್ಲಿ ಮನನ್‌ 4–1ರಲ್ಲಿ (59–57, 69–76, 70–33, 72–00, 64–3) ಈಜಿಪ್ಟ್‌ನ ಕರಿಮ್‌ ಎಲಾಬ್ದ್‌ ಎದುರು ಗೆದ್ದರು. ಎದುರಾಳಿ ಗೆದ್ದಿದ್ದು ಏಕೈಕ ಫ್ರೇಮ್‌. ಇನ್ನುಳಿದ ಫ್ರೇಮ್‌ಗಳಲ್ಲಿ ಮನನ್‌ ಪಾರಮ್ಯ ಮೆರೆದರು.ಇನ್ನುಳಿದ ಪಂದ್ಯಗಳಲ್ಲಿ ಬ್ರಿಜೇಶ್ ದಾಮನಿ 4–0ರಲ್ಲಿ (64–26, 67–2, 53–12, 59–22) ಆತಿಥೇಯ ದೇಶದ ಮಾರಿಸ್‌ ವೊಲಾಸ್‌ ಎದುರೂ, ಶಹಬಾಜ್ ಅದಿಲ್‌ ಖಾನ್‌ 4–1ರಲ್ಲಿ (56–49, 37–63, 97–25, 80–23, 71–42) ಮಾಲ್ಟಾದ ಮರಿಯೋ ಬ್ರಿಂಕಾಟ್‌ ವಿರುದ್ಧವೂ ಜಯ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ಚಿತ್ರಾ ಅವರಿಗೆ ಮೊದಲ ಗೆಲುವು ಲಭಿಸಿತು. ಅವರು 3–0ರಲ್ಲಿ (32–76, 42–79, 57–65) ಬೆಲಾರಸ್‌ನ ನಾಸ್ತ್ಯಾ ತೂಮಿಲೊವಿಚ್‌ ಎದುರು ಗೆಲುವು ಸಾಧಿಸಿದರು.ಆದರೆ 16ರ ಹರೆಯದ ವರ್ಷಾ ಸಂಜೀವ್‌ ನಿರಾಸೆ ಅನುಭವಿಸಿದರು. ಅವರು 1–3ರಲ್ಲಿ (27–73, 63–15, 31–48, 26–55) ಹಾಂಕಾಂಗ್‌ನ ಆನ್‌ ಯೀ ಎದುರು ಪರಾಭವಗೊಂಡರು.ಅರಂತ್ಸಾ ಸಾಂಚಿಸ್‌ 3–0ರಲ್ಲಿ (76–30, 69–14, 66–11) ಪೋಲೆಂಡ್‌ನ ದಾಲಿಯಾ ಅಲಸ್ಕಾ ಅವರನ್ನು ಮಣಿಸಿದರು.  ಅವರಿಗೆ ಲಭಿಸಿದ ನಾಲ್ಕನೇ ಗೆಲುವು ಇದು. ನಾಕ್‌ಔಟ್‌ ಹಂತ ತಲುಪುವ ವಿಶ್ವಾಸದಲ್ಲಿ ಅವರಿದ್ದಾರೆ. ಆದರೆ ನೀನಾ ಪ್ರವೀಣ್‌ ಲೀಗ್‌ ಪಂದ್ಯದಲ್ಲಿ ಪರಾಭವಗೊಂಡರು.

ಪ್ರತಿಕ್ರಿಯಿಸಿ (+)