ಗುರುವಾರ , ಮೇ 26, 2022
22 °C

ಮನಸೆಳೆದ ನೃತ್ಯ ಮೋಹಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಸಿದ್ಧ ಮೋಹಿನಿಯಾಟ್ಟಂ ಕಲಾವಿದೆ ಶ್ರೀದೇವಿ ಉನ್ನಿ ನೇತೃತ್ವದ ಮೊನಿಷಾ ಆರ್ಟ್ಸ್ ಸಂಸ್ಥೆ ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ‘ಮೋಹಿನಿ ನೃತ್ಯೋತ್ಸವ’ ಕಲಾ ರಸಿಕರ ಮನ ಸೂರೆಗೊಂಡಿತು. ಮೂರು ದಿನಗಳ ಕಾಲ ಪ್ರೇಕ್ಷಕರಿಗೆ ರಸದೌತಣ ನೀಡಿತು.

ಇಂದಿರಾನಗರದ ಈಸ್ಟ್ ಕಲ್ಚರಲ್ ಅಸೋಸಿಯೇಷನ್ ಸಭಾಂಗಣದಲ್ಲಿ ಖ್ಯಾತ ಚಿತ್ರ ಕಲಾವಿದೆ ಶೋಭನಾ ಮತ್ತು ಅವರ ತಂಡದ ಪ್ರದರ್ಶನದಿಂದ ನೃತ್ಯೋತ್ಸವ ಆರಂಭಗೊಂಡಿತು.ಶೋಭನಾ ಅವರ ಮನಮೋಹಕ ನೃತ್ಯ ಸಭಿಕರನ್ನು ಮಂತ್ರಮುಗ್ಧರಾಗಿಸಿತು. ಶಿವಸ್ತುತಿಯೊಂದಿಗೆ ಅವರು ಕಾರ್ಯಕ್ರಮ ಆರಂಭಿಸಿದರು. ನಂತರ ತಮ್ಮ ಶಿಷ್ಯವೃಂದದ ಜೊತೆಗೂಡಿ ‘ರಾಗ ಮಾಲಿಕಾ’ ನೃತ್ಯ ಪ್ರಸ್ತುತಪಡಿಸಿದರು. ತಾಂಡವ ನೃತ್ಯದಲ್ಲಿ ಮೈಮರೆತು ಅಭಿನಯಿಸಿದರು. ಕೊನೆಯಲ್ಲಿ ‘ದಶಾವತಾರ’ ನೃತ್ಯರೂಪಕ ಪ್ರದರ್ಶಿಸಿದರು.ಎರಡನೇ ದಿನ ಎಡಿಎ ರಂಗಮಂದಿರದಲ್ಲಿ ಮೊನಿಷಾ ಆರ್ಟ್ಸ್ ವಿದ್ಯಾರ್ಥಿಗಳು ಚಿಕ್ಕದೊಂದು ಪ್ರದರ್ಶನ ನೀಡಿದರು. ನಿರ್ಮಲ ಪಣಿಕ್ಕರ್, ರಾಜಶ್ರೀ ವಾರಿಯರ್ ಮತ್ತು ಖ್ಯಾತ ಕಲಾವಿದೆ ಭಾರತಿ ಶಿವಾಜಿ ಅಂದು ಕಾರ್ಯಕ್ರಮ ನೀಡಿದರು. ನೃತ್ಯೋತ್ಸವದ ಅಂತಿಮ ದಿನ ಸತ್ಯನಾರಾಯಣ ರಾಜು ಮಾಡಿದ ನೃತ್ಯ ಅತ್ಯಂತ ಆಕರ್ಷಕವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.