ನೆಲಮಂಗಲ: ‘ಗ್ರಾಮದ ಸಾಂಸ್ಕೃತಿಕ ಕೇಂದ್ರಗಳಾದ ಭಜನಾ ಮಂದಿರ, ಗರಡಿ ಮನೆ, ಅರಳಿಕಟ್ಟೆ, ಜಾತ್ರಾ ಮಹೋತ್ಸವಗಳು ಗ್ರಾಮದವರ ಸಣ್ಣ ಪುಟ್ಟ ಮನಸ್ತಾಪಗಳನ್ನು ಮರೆಸಿ ಒಂದುಗೂಡಿಸುವ ಶಕ್ತಿ ಹೊಂದಿದ್ದವು’ ಎಂದು ಮಧುರೆ ಲಕ್ಷ್ಮೀ ವೆಂಕಟೇಶ್ವರ ಮಾರುತಿ ಭಜನಾ ಮಂಡಳಿಯ ಅಧ್ಯಕ್ಷ ವಿ.ಚಂದ್ರಶೇಖರಯ್ಯ ಹೇಳಿದರು.
ಇಲ್ಲಿಗೆ ಸಮೀಪದ ಮಧುರೆಯ ಮಾರುತಿ ಭಜನಾ ಮಂಡಳಿ ವತಿಯಿಂದ ಏರ್ಪಡಿಸಿದ್ದ ಬಸವೇಶ್ವರ ದೇವಾಲಯದ ಆರನೇ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉತ್ಸವದ ಪ್ರಯುಕ್ತ ಮಾಚೋಹಳ್ಳಿ, ಬೆಟ್ಟಹಳ್ಳಿ, ಬೈಂಡಹಳ್ಳಿ ಕಲಾವೃಂದ ಮತ್ತು ಮಾರುತಿ ಭಜನಾ ಮಂಡಳಿ ಕಲಾವಿದರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಾಪ್ರದರ್ಶನಗಳೊಂದಿಗೆ ಬಸವಣ್ಣ ದೇವರ ಮೆರವಣಿಗೆ ನಡೆಸಿದರು.

ತಿರುಮಲರಾಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಭಜನೆ ಏರ್ಪಡಿಸಲಾಗಿತ್ತು. ಉತ್ಸವದಲ್ಲಿ ನಿವೃತ್ತ ಶಿಕ್ಷಕ ಎಂ.ಎಸ್.ಮುನಿಶಾಮಯ್ಯ, ಅಗ್ರಿ ಮಾರ್ಕೆಟಿಂಗ್ ಅಧಿಕಾರಿ ವಿ.ವಸಂತ ಕುಮಾರ್, ಮುನಿರಾಮಯ್ಯ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಅರವಂಟಿಗೆಗಳನ್ನು ಏರ್ಪಡಿಸಿದ್ದರು. ಸೇವಾದಾರರಾದ ರಮೇಶ್, ಕೆಂಪಣ್ಣ, ಸ್ವಾಮಿಗೌಡ, ಕೃಷ್ಣಪ್ಪ, ಕೆಂಪೇಗೌಡ, ಆರ್.ರಾಜೇಶ್ವರಿ, ಸುಜಾತ, ಗೀತಾ, ಹರ್ಷ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.