ಮನು ಬಳಿಗಾರ್ ಸೇರಿ 32 ಕೆಎಎಸ್ ಅಧಿಕಾರಿ ವರ್ಗಾವಣೆ
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ಸೇರಿದಂತೆ 32 ಮಂದಿ ಕೆಎಎಸ್ ಅಧಿಕಾರಿಗಳನ್ನು ಹಾಗೂ ನಾಲ್ಕು ಮಂದಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಮನು ಬಳಿಗಾರ್ ಅವರನ್ನು ಕಂದಾಯ ಇಲಾಖೆ ವ್ಯಾಪ್ತಿಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಇತರ ಅಧಿಕಾರಿಗಳು: ಜಿ.ಜಯರಾಂ- ಸರ್ಕಾರದ ವಿಶೇಷ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಹೊಸದಾಗಿ ಸೃಷ್ಟಿಸಿದ ಹುದ್ದೆ). ಸೂರ್ಯನಾರಾಯಣ ರಾವ್-ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ), ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ.
ಕೆ.ಆರ್.ರಾಮಕೃಷ್ಣ- ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೆಚ್ಚುವರಿಯಾಗಿ ಮೈಸೂರಿನಲ್ಲಿರುವ ಪ್ರಾಚ್ಯವಸ್ತು ಪರಂಪರೆ ಮತ್ತು ಸಂಗ್ರಹಾಲಯದ ಆಯುಕ್ತರ ಹುದ್ದೆಯನ್ನೂ ನೀಡಲಾಗಿದೆ.
ಮಾಜ್ ಅಹ್ಮದ್ ಷರೀಫ್-ಕಾರ್ಯದರ್ಶಿ, ಕರ್ನಾಟಕ ಅಲ್ಪಸಂಖ್ಯಾತರ ಆಯೋಗ. ಕೆ.ಎಂ.ರಾಮಚಂದ್ರನ್-ಹೆಚ್ಚುವರಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿ, ಬೆಂಗಳೂರು.
ಡಾ. ಕೆ.ಎನ್.ಚಂದ್ರಶೇಖರ್- ಹೆಚ್ಚುವರಿ ಆಯುಕ್ತರು, ರಾಜರಾಜೇಶ್ವರಿನಗರ ವಲಯ, ಬಿಬಿಎಂಪಿ. ಎ.ಎನ್.ಪಾಟೀಲ್- ಹೆಚ್ಚುವರಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ. ವಿರೂಪಾಕ್ಷಿ ಮೈಸೂರು- ಪ್ರಧಾನ ವ್ಯವಸ್ಥಾಪಕರು (ಆಡಳಿತ), ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಬೆಂಗಳೂರು.
ಜಿ.ಸಿದ್ಧಪ್ಪ-ಹೆಚ್ಚುವರಿ ಜಿಲ್ಲಾಧಿಕಾರಿ, ವಿಜಾಪುರ. ಎಸ್.ಆರ್.ವೆಂಕಟೇಶ್- ಮಹಾನಗರ ಜಂಟಿ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ.
ರಾಧಾಕೃಷ್ಣರಾವ್ ಮದನಕರ್-ವಿಶೇಷ ಜಿಲ್ಲಾಧಿಕಾರಿ(ಭೂಸ್ವಾಧೀನ), ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು. ಕೆ.ಎಚ್.ನರಸಿಂಹಮೂರ್ತಿ- ಮುಖ್ಯ ಜಾಗೃತಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಂಗಳೂರು.
ಡಿ.ಎಂ.ಶಿವಕುಮಾರ್-ಹೆಚ್ಚುವರಿ ನಿರ್ದೇಶಕರು (ಆಡಳಿತ), ಕೃಷಿ ಇಲಾಖೆ, ಬೆಂಗಳೂರು. ಅತೀಕ್ ಅಹಮದ್-ಕುಲಸಚಿವರು, ಕರ್ನಾಟಕ ಮೇಲ್ಮನವಿ ಪ್ರಾಧಿಕಾರ, ಬೆಂಗಳೂರು.
ಕೆ.ಎಸ್.ಮಂಜುನಾಥ್-ಮುಖ್ಯ ಆಡಳಿತಾಧಿಕಾರಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ, ಬೆಂಗಳೂರು.
ಮದನ್ ಜಿ.ನಾಯಕ್-ಉಪ ಮಹಾ ವ್ಯವಸ್ಥಾಪಕರು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಹಾಗೂ ಭೂಸ್ವಾಧೀನ, ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟೆ.
ಚಿಕ್ಕಮುನಿಯಪ್ಪ-ಪ್ರಧಾನ ವ್ಯವಸ್ಥಾಪಕರು, ರಾಜ್ಯ ಸಣ್ಣ ಕೈಗಾರಿಕಾಭಿವೃದ್ಧಿ ನಿಗಮ, ಬೆಂಗಳೂರು. ಎಚ್.ಆರ್.ಜಗದೀಶ್-ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಡಾ.ರೋರಿಚ್ ಮತ್ತು ದೇವಿಕಾರಾಣಿ ಎಸ್ಪೇಟ್ ಮಂಡಳಿ, ಬೆಂಗಳೂರು.
ಶಂಕರಪ್ಪ-ಹೆಚ್ಚುವರಿ ಜಿಲ್ಲಾಧಿಕಾರಿ, ಮಂಡ್ಯ. ಎಂ.ಆರ್.ಸೋಮಶೇಖರಪ್ಪ- ಸಿಇಒ, ಚಾಮರಾಜನಗರ ಜಿಲ್ಲಾ ಪಂಚಾಯ್ತಿ. ಪಿ.ಸಿ.ಜಯಣ್ಣ-ಸಿಇಒ, ಮಂಡ್ಯ ಜಿಲ್ಲಾ ಪಂಚಾಯ್ತಿ. ಎನ್.ಎಚ್.ಸುಳೆಭಾವಿ-ವಿಶೇಷ ಜಿಲ್ಲಾಧಿಕಾರಿ, ಪುನರ್ವಸತಿ ಮತ್ತು ಪುನರ್ ನಿರ್ಮಾಣ, ಬೃಹತ್ ನೀರಾವರಿ ಯೋಜನೆ, ಬೆಳಗಾವಿ.
ಕಾಶಿನಾಥ್ ಪವಾರ್-ಉಪ ಆಯಕ್ತರು, ಬ್ಯಾಟರಾಯನಪುರ ವಲಯ, ಬಿಬಿಎಂಪಿ. ಡಿ.ಭಾರತಿ- ಉಪ ಕಾರ್ಯದರ್ಶಿ, ಮೈಸೂರು ಜಿಲ್ಲಾ ಪಂಚಾಯ್ತಿ. ಪಿ.ಎನ್.ರವೀಂದ್ರ-ಉಪ ಕಾರ್ಯದರ್ಶಿ-1, ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ. ವೈ.ಎಸ್.ಪಾಟೀಲ್- ಆಯುಕ್ತರು, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ.
ಕೆ.ಲೀಲಾವತಿ-ಉಪ ಆಯುಕ್ತರು, ಬಿಬಿಎಂಪಿ. ಸಂಗಪ್ಪ-ಸಹಾಯಕ ಆಯುಕ್ತರು (ಚುನಾವಣೆ), ಬಿಬಿಎಂಪಿ. ಇಬ್ರಾಹಿಂ ಮೈಗೂರ್-ಉಪ ವಿಭಾಗಾಧಿಕಾರಿ, ಹರಪನಹಳ್ಳಿ.
ಎಚ್.ಕೆ.ಕೃಷ್ಣಮೂರ್ತಿ-ವಿಶೇಷ ಭೂಸ್ವಾಧೀನಾಧಿಕಾರಿ, ಕರ್ನಾಟಕ ಗೃಹ ಮಂಡಳಿ, ಮೈಸೂರು. ಎಚ್.ಬಿ.ಬೂದೆಪ್ಪ-ಉಪ ವಿಭಾಗಾಧಿಕಾರಿ, ವಿಜಾಪುರ.
ಆರ್ಡಿಪಿಆರ್ ಅಧಿಕಾರಿಗಳು:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ (ಆರ್ಡಿಪಿಆರ್) ಈ ಕೆಳಕಂಡ ಅಧಿಕಾರಿಗಳನ್ನು ಅವರ ಹೆಸರುಗಳ ಮುಂದೆ ಸೂಚಿಸಿದ ಹುದ್ದೆಗಳಿಗೆ ವರ್ಗ ಮಾಡಲಾಗಿದೆ.
ಕೆ.ಬಿ.ಆಂಜನಪ್ಪ-ಸಿಇಒ, ಕೊಡಗು ಜಿಲ್ಲಾ ಪಂಚಾಯ್ತಿ. ಎ.ಬಿ.ಹೇಮಚಂದ್ರ- ಸಿಇಒ, ದಾವಣಗೆರೆ ಜಿಲ್ಲಾ ಪಂಚಾಯ್ತಿ.
ಗುತ್ತಿ ಜಂಬುನಾಥ್- ಸಿಇಒ, ವಿಜಾಪುರ ಜಿಲ್ಲಾ ಪಂಚಾಯ್ತಿ. ಕೃಷ್ಣಪ್ಪ- ಸಿಇಒ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ.
ಐಎಎಸ್ ಅಧಿಕಾರಿಗಳು
ಬೆಂಗಳೂರು: ರಾಜ್ಯ ಸರ್ಕಾರ 8 ಮಂದಿ ಐಎಎಸ್ ಅಧಿಕಾರಿಗಳನ್ನೂ ಗುರುವಾರ ವರ್ಗಾವಣೆ ಮಾಡಿದೆ.
ಎನ್.ಪ್ರಭಾಕರ್- ವ್ಯವಸ್ಥಾಪಕ ನಿರ್ದೇಶಕರು, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿ., ಬಿ.ಎನ್.ಕೃಷ್ಣಯ್ಯ-ಜಿಲ್ಲಾಧಿಕಾರಿ, ಮಂಡ್ಯ. ಪಿ.ಸಿ.ಜಾಫರ್-ನಿರ್ದೇಶಕರು, ತೋಟಗಾರಿಕೆ ಇಲಾಖೆ.
ತ್ರಿಲೋಕ ಚಂದ್ರ ಕೆ.ವಿ.-ಜಂಟಿ ನಿರ್ದೇಶಕರು (ಸಿಬ್ಬಂದಿ), ಆಡಳಿತ ತರಬೇತಿ ಸಂಸ್ಥೆ, ಮೈಸೂರು. ಹೇಮಾಜಿ ನಾಯಕ್- ನಿರ್ದೇಶಕರು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಬೆಂಗಳೂರು.
ಎಸ್.ಎ.ಜಿಲಾನಿ-ಮುಖ್ಯಕಾರ್ಯನಿರ್ವಹಣಾ ಅಧಿಕಾರಿ (ಸಿಇಒ), ಯಾದಗಿರಿ ಜಿಲ್ಲಾ ಪಂಚಾಯ್ತಿ. ಪ್ರಿಯಾಂಕಾ ಮೇರಿ ಫ್ರಾನ್ಸಿಸ್- ಆಯುಕ್ತರು, ಬೆಳಗಾವಿ ಮಹಾನಗರಪಾಲಿಕೆ.
ರದ್ದು: ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಸಿಇಒ ಆಗಿ ಎಂ.ವಿ.ವೀರಭದ್ರಯ್ಯ ಅವರನ್ನು ವರ್ಗಾವಣೆ ಮಾಡಿದ್ದ ಆದೇಶ ರದ್ದುಪಡಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.