ಶುಕ್ರವಾರ, ಮೇ 20, 2022
21 °C

ಮನೆಯಲ್ಲೆ ಸೌಹಾರ್ದತೆ ಪಾಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ:  ಕೋಮು ಸೌಹಾರ್ದ ಸೂಕ್ಷ್ಮ ವಿಷಯವಾಗಿದ್ದು, ಈ ಬಗ್ಗೆ ಮಕ್ಕಳಿಗೆ ಸಹಬಾಳ್ವೆ, ಪರಧರ್ಮ ಸಹಿಷ್ಣುತೆ ಬಗ್ಗೆ ಮನೆಯಲ್ಲಿಯೇ ಪಾಲಕರು ಸೂಕ್ತ ತಿಳಿವಳಿಕೆ ನೀಡಬೇಕು ಎಂದು  ಡಾ.ಎ.ಎಂ.ಮುಲ್ಲಾ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಆಶ್ರಯದಲ್ಲಿ ಲಿಂ.ಚನ್ನವೀರಪ್ಪ ಮೋಟಗಿ ಹಾಗೂ ಲಿಂ.ವೀರಪ್ಪ ಬಸಪ್ಪ ಚಿನಿವಾರ ಸ್ಮರಣಾರ್ಥ  ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಭಾರತ ಒಂದು ಜಾತ್ಯಾತೀತ ರಾಷ್ಟ್ರ. ಭಾರತದ ಸಂವಿಧಾನದನ್ವಯ ಅದು ಹೇಳಿದ ಸಹೋದರತ್ವ, ನಮ್ಮ ದೇಶದ ನೆಲ, ಜಲವನ್ನು ಪ್ರೀತಿಸುವ ಕೆಲಸ ಮೊದಲು ನಡೆಯಬೇಕು. ಪರಸ್ಪರ ಅರಿತು ಸಾಮರಸ್ಯದಿಂದ ಬದುಕುವ ವಿಶಾಲ ಮನಸ್ಸು ನಮ್ಮದಾಗಬೇಕು’ ಎಂದು ಅವರು ಹೇಳಿದರು. ತಾಳಿಕೋಟಿಯ ಪ್ರತಿಭಾಲೋಕ ಕರಿಯರ ಅಕಾಡೆಮಿಯ ನಿರ್ದೇಶಕ ಶ್ರೀಕಾಂತ ಪತ್ತಾರ ಸಾಮಾಜಿಕ ಹಾಗೂ ಧಾರ್ಮಿಕ ಚಿಂತಕರು ವಿಷಯದ ಮೇಲೆ ಉಪನ್ಯಾಸ ನೀಡಿದರು.ಶಿವಯೋಗೆಪ್ಪ ಕಡಿ, ಮುಖ್ಯೋಪಾಧ್ಯಾಯ ಅರವಿಂದ ಹಿರೇಮಠ ಉಪಸ್ಥಿತರಿದ್ದರು. ಕ.ಸಾ.ಪ ತಾಲ್ಲೂಕು ಘಟಕದ ಅಧ್ಯಕ್ಷೆ ಶಾಂತಾಬಾಯಿ ನೂಲಿಕರ ಅಧ್ಯಕ್ಷತೆ ವಹಿಸಿದ್ದರು.  ಎಸ್.ಬಿ. ಬಂಗಾರಿ, ಚಂದ್ರಶೇಖರ ಇಟಗಿ, ಎಚ್.ಆರ್. ಕಲಕೇರಿ, ಬಸವರಾಜ ಲಿಂಗದಳ್ಳಿ, ವೆಂಕಪ್ಪಣ್ಣ ಕೊಣ್ಣೂರ, ಪಿ.ಎಚ್. ಉಪ್ಪಲದಿನ್ನಿ, ದೊಡ್ಡಮನಿ,  ಶಿಕ್ಷಕರು ಉಪಸ್ಥಿತರಿದ್ದರು. ಎಸ್.ಬಿ.ಕನ್ನೂರ ಸ್ವಾಗತಿಸಿದರು. ಬಸವರಾಜ ನಾಲತವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಗೀಶ ಹಿರೇಮಠ ನಿರೂಪಿಸಿದರು. ಬಾಪುಗೌಡ ಪಾಟೀಲ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.