ಬೆಂಗಳೂರಿನಲ್ಲಿ ಸಣ್ಣದೊಂದು ನಿವೇಶನವಿದ್ದರೆ ಸಾಕು. ಮೂರು, ನಾಲ್ಕು ಮಹಡಿಯ ಮನೆ ನಿರ್ಮಿಸಿ ಬಾಡಿಗೆಗೆ ನೀಡಿ ಒಂದಷ್ಟು ಹಣ ಸಂಪಾದನೆ ಮಾಡಬಹುದು. ಆದರೆ, ಇಲ್ಲೊಬ್ಬರು ಇಡೀ ಮನೆಯನ್ನೇ ಗ್ರಂಥಾಲಯ ಮಾಡಿದ್ದಾರೆ. ಅದನ್ನು ವಚನ ತತ್ವ ಪ್ರಸಾರಕ್ಕೆಂದೇ ಮೀಸಲಿಟ್ಟಿದ್ದಾರೆ.

ರಾಜರಾಜೇಶ್ವರಿನಗರದಲ್ಲಿರುವ ಬೆಂಗಳೂರು ವಿವಿಯ ನಿವೃತ್ತ ಗ್ರಂಥಪಾಲಕ ಡಾ.ಆರ್.ಶಿವಣ್ಣ ಅವರ ಮನೆಯ ಮೊದಲ ಮಹಡಿಯಲ್ಲಿರುವ ನಾಲ್ಕು ಕೊಠಡಿಗಳಿಗೆ ‘ಬಸವತತ್ವ ಪ್ರಚಾರ ಕೇಂದ್ರ ಮತ್ತು ಸಂಶೋಧನಾ ಗ್ರಂಥ ಭಂಡಾರ’ ಎಂಬ ಅಭಿದಾನವಿದೆ. ವಚನ ಸಾಹಿತ್ಯಕ್ಕೆ ಸಂಬಂಧಿಸಿದ 10 ಸಾವಿರ ಪುಸ್ತಕಗಳು ಈ ನಾಲ್ಕು ಕೊಠಡಿಗಳಲ್ಲಿ ಒಪ್ಪವಾಗಿ ಜೋಡಣೆಯಾಗಿವೆ.

ಇವರ ಮನೆಯ ಹಾಲ್, ಬೆಡ್ರೂಂ, ಅಡುಗೆಮನೆಗಳಲ್ಲೂ ಪುಸ್ತಕಗಳೇ ಪುಸ್ತಕಗಳು. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಂದ ಸಂಶೋಧನಾ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನಕ್ಕೆ ಬರುತ್ತಾರೆ. ಇವರ ಸಂಗ್ರಹದಲ್ಲಿ ವಚನ ಸಾಹಿತ್ಯದ ಹಲವು ಅಪರೂಪದ ಹಳೆಯ ಗ್ರಂಥಗಳಿವೆ. ಇವುಗಳನ್ನು ಆಧರಿಸಿ, ವಚನಕಾರರು ಬಾಳಿದ್ದ ಊರುಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿ, ನಲವತ್ತು ಪುಟಗಳ, ಚಿಕ್ಕಚಿಕ್ಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಶಿವಣ್ಣ ಅವರಿಗೆ ತಮ್ಮದೇ ಪ್ರಕಾಶನದಲ್ಲಿ 500 ವಚನಕಾರರ ಪರಿಚಯ ಪುಸ್ತಕ ಪ್ರಕಟಿಸುವ ಕನಸು ಇದೆ. ಈಗಾಗಲೇ 308 ಪುಸ್ತಕಗಳನ್ನು ಹೊರ ತಂದಿದ್ದಾರೆ. ಈ ಮಾಲಿಕೆಗೆ ಶ್ರೀಸಾಮಾನ್ಯರ ಮಾಲಿಕೆ ಎಂದು ಹೆಸರಿಡಲಾಗಿದೆ.

‘ನೀವೇಕೆ ವಚನಗಳನ್ನು ಇಷ್ಟೊಂದು ಹಚ್ಚಿಕೊಂಡಿದ್ದೀರಿ’ ಎಂದು ಪ್ರಶ್ನಿಸಿದರೆ ಸಿಗುವ ಉತ್ತರ ಬೆರಗು ಮೂಡಿಸದೇ ಇರದು. ಅವರು ಕೊಡುವ ಉತ್ತರ ಇದು...
‘ಕಡಿಮೆ ಓದಿರುವವರಿಗೆ ಮತ್ತು ಮಕ್ಕಳಿಗೆ 12ನೇ ಶತಮಾನದ ವಚನಕಾರರ ತತ್ವ, ಆದರ್ಶಗಳನ್ನು ತಲುಪಿಸುವುದು ನಮ್ಮ ಗುರಿ. ಹಾಗಾಗಿ ಕೇವಲ ನಲವತ್ತು ಪುಟಗಳಲ್ಲಿ ವಚನಕಾರರ ಪರಿಚಯವನ್ನು ನೀಡುತ್ತಿದ್ದೇವೆ. ಓದಲು ಸುಲಭವಾಗಬೇಕು ಎಂಬ ಉದ್ದೇಶದಿಂದ ದಪ್ಪ ಅಕ್ಷರಗಳಲ್ಲಿ ಪ್ರಕಟಿಸುತ್ತಿದ್ದೇವೆ. ಇದರ ಜೊತೆ ರೇಖಾಚಿತ್ರಗಳನ್ನು ನೀಡುತ್ತಿದ್ದೇವೆ. ಈ ಪುಸ್ತಕಗಳ ಬೆಲೆ ಕೇವಲ 25 ರೂಪಾಯಿ.

‘ಮೂರು, ನಾಲ್ಕು ತರಗತಿಗೆ ಶಾಲೆ ಬಿಟ್ಟವರನ್ನು ಗುರಿಯಾಗಿಟ್ಟು ಪುಸ್ತಕ ಹೊರತರಲಾಗಿದೆ. ಅವರು ಯಾವುದೇ ವೃತ್ತಿ ಮಾಡುತ್ತಿರಲಿ ಅವರಿಗೆ 12ನೇ ಶತಮಾನದ ವಚನಕಾರರ ಆದರ್ಶಗಳನ್ನು ತಲುಪಿಸಬೇಕು. ಆಗ ಅವರು ಮಾಡುವ ವೃತ್ತಿಯನ್ನೇ ನಿಷ್ಠೆಯಿಂದ ಮಾಡಲು ಸಾಧ್ಯ. ವಚನಗಳ ಸಾರ ತಿಳಿದವರು ಉತ್ತಮ ವ್ಯಕ್ತಿಗಳಾಗಬಲ್ಲರು ಎಂಬ ಉದ್ದೇಶದಿಂದ ಶ್ರೀಸಾಮಾನ್ಯರ ಮಾಲಿಕೆ ಯೋಜನೆ ರೂಪಿಸಲಾಗಿದೆ.

‘ರಾಜ್ಯದ ಎಲ್ಲ ಗ್ರಂಥಾಲಯಗಳಿಂದ ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಅತ್ಯಂತ ಹಳೆಯ ಗ್ರಂಥಗಳನ್ನು ಪಡೆದು ಬುಕ್ ಬೈಂಡಿಂಗ್ ಮಾಡಿ ಇಡಲಾಗಿದೆ. ವಚನಗಳನ್ನು ಹಿಂದಿ, ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳಿಗೆ ಅನುವಾದ ಮಾಡಲಾಗುತ್ತಿದೆ. ಅಂಥವರಿಗೆ ಅನುಕೂಲವಾಗಲೆಂದು ‘ವಚನ ಪದ ಸಂಪದ’ ಎಂಬ ತ್ರಿಭಾಷಾ ನಿಘಂಟು ಪ್ರಕಟಿಸಲಾಗಿದೆ. ಇದು ಬೇರೆ ಭಾಷೆಯವರಿಗಷ್ಟೇ ಅಲ್ಲ, ಕನ್ನಡಿಗರಿಗೂ ವಚನಗಳಲ್ಲಿರುವ ಕಷ್ಟ ಪದಗಳನ್ನು ಅರ್ಥ ಮಾಡಕೊಳ್ಳಲು ಸಹಕಾರಿಯಾಗಲಿದೆ. ವಚನಕ್ಕೆ ಸಂಬಂಧಿಸಿದಂತೆ ಇದು ಮೊದಲ ನಿಘಂಟು’.

ವಚನ ತಾಂಬೂಲ
ಶಿವಣ್ಣ ಅವರ ಎಲ್ಲ ಕೆಲಸಗಳಲ್ಲಿಯೂ ವಚನ ಸಾಹಿತ್ಯ ಪ್ರಸಾರ ಉದ್ದೇಶ ಎದ್ದು ಕಾಣುತ್ತದೆ. ಅವರ ಮೊಮ್ಮಗಳು ಮೇಘಾ ಅವರ ಮದುವೆಯ ಸಂದರ್ಭದಲ್ಲಿ ‘ಭಕ್ತಿಭಂಡಾರಿ ಬಸವಣ್ಣನವರ 101 ಆಯ್ದ ವಚನಗಳು’ ಎಂಬ ಪುಸ್ತಕವನ್ನು ತಾಂಬೂಲವಾಗಿ ನೀಡಿದ್ದಾರೆ.

‘ಮದುವೆಗೆ ಬಂದವರಿಗೆ ತೆಂಗಿನಕಾಯಿ ನೀಡುವ ಬದಲು ವಚನ ತಾಂಬೂಲ ನೀಡಿದ ಕಾರಣ ಕನಿಷ್ಠ 2 ಸಾವಿರ ಮನೆಗಳಿಗೆ ಬಸವಣ್ಣನವರ ವಚನ ಸಂಗ್ರಹ ತಲುಪಿದೆ. ಅವರಲ್ಲಿ ಕೆಲವರಾದರೂ ಓದಿ, ತಮ್ಮ ಮಕ್ಕಳಿಗೂ, ಮೊಮ್ಮಕ್ಕಳಿಗೋ ವಚನದ ಸಾರವನ್ನು ತಿಳಿಸಿದರೆ ಸಾರ್ಥಕ’ ಎಂದು ಅವರು ಹೇಳುತ್ತಾರೆ.

ವಚನ ಪದ ಸಂಪದ
ವಚನ ಸಾಹಿತ್ಯದ ಗಂಭೀರ ಅಧ್ಯಯನಕ್ಕೆ ಪೂರಕವಾಗಿ ನಾಲ್ಕು ಸಾವಿರಕ್ಕೂ ಹೆಚ್ಚು ಪರಿಕಲ್ಪನೆಗಳ ಅರ್ಥ ತಿಳಿಸುವ ಆಕರ ಗ್ರಂಥ ‘ವಚನ ಪದ ಸಂಪದ’. ಕನ್ನಡ–ಕನ್ನಡ, ಕನ್ನಡ–ಹಿಂದಿ, ಕನ್ನಡ–ಇಂಗ್ಲಿಷ್ ಹೀಗೆ ಮೂರು ಭಾಷೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಪದಗಳ ಅರ್ಥ ನೀಡಲಾಗಿದೆ. ಮೂಲ ಪದಗಳ ವಿವಿಧ ವ್ಯಾಕರಣ ರೂಪಗಳನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಕ್ಲಿಷ್ಟ ಪಾರಿಭಾಷಿಕ ಪದ ಬಳಕೆಯ ಸಂಕ್ಷಿಪ್ತ ವಿವರ ನೀಡಲಾಗಿದೆ.

ನಿಘಂಟು ಸಂಪಾದನಾ ಮಂಡಳಿಯಲ್ಲಿ ಪ್ರೊ.ಟಿ.ಆರ್. ಮಹಾದೇವಯ್ಯ, ತಾ.ಶ್ರೀ.ಗುರುರಾಜ್, ಪ್ರೊ.ಬಿ.ವೈ.ಲಲಿತಾಂಬಾ, ಪಿ.ಎಸ್. ವೆಂಕಟೇಶಮೂರ್ತಿ ಇದ್ದರು. ಪ್ರೊ.ಎಲ್.ಎಸ್. ಶೇಷಗಿರಿರಾವ್, ಎಚ್.ವಿ.ರಾಮಚಂದ್ರರಾವ್ ಸಲಹಾ ಸಮಿತಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.