ಬುಧವಾರ, ಏಪ್ರಿಲ್ 14, 2021
23 °C

ಮನೆ ಬಾಗಿಲಿಗೆ ಕಸದ ವಾಹನ

ಕೆ.ಎಸ್.ಸುನಿಲ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಸ್ವಚ್ಛತೆ ಕಾಪಾಡದ ನಗರಗಳಲ್ಲಿ ಗದಗ-ಬೆಟಗೇರಿ ಅವಳಿ ನಗರವೂ ಒಂದು. ನಗರಕ್ಕೂ ಕಸಕ್ಕೂ ಅವಿನಾ ಭಾವ ಸಂಬಂಧ. ಎಲ್ಲೆಂದೆರಲ್ಲಿ ಬಿಸಾ ಡುವ ಕಸ ನಗರದ ಸೌಂದರ್ಯಕ್ಕೆ ಕಪ್ಪುಚುಕ್ಕೆ ಎಂದು ಹೇಳಬೇಕಾಗಿಲ್ಲ.ನಗರಸಭೆಯ ಟ್ರಾಕ್ಟರ್‌ಗಳು ಅಪ ರೂಪಕ್ಕೊಮ್ಮೆ ಕಸ ಸಂಗ್ರಹ ಮಾಡುವು ದರಿಂದ ದುರ್ನಾತ ಬೀರುತ್ತಲ್ಲೆ ಇರು ತ್ತದೆ. ನಗರ ಬೆಳೆದಂತೆಲ್ಲ ನಿರ್ವ ಹಣೆಯೂ ನಗರಸಭೆಯನ್ನು ಕಾಡು ತ್ತಿದೆ. ಇದೀಗ ಎಚ್ಚೆತ್ತುಕೊಂಡಿರುವ ನಗರಸಭೆ ಸ್ವಚ್ಛ ನಗರಿ ಮಾಡುವ ಉದ್ದೇಶದಿಂದ ಕಸ ಸಂಗ್ರಹ ಮಾಡುವ ವಾಹನಗಳನ್ನು ತರಿಸಿದ್ದು, ಶೀಘ್ರ ದಲ್ಲಿಯೇ ಕಸ ಸಂಗ್ರಹಿಸಲು ವಾಹನ ಗಳು ಮನೆ ಬಾಗಿಲಿಗೆ ಬರಲಿವೆ.ನಗರಸಭೆಯಲ್ಲಿ ಒಟ್ಟು 35 ವಾರ್ಡ್ ಗಳಿವೆ. ಕಸ ಸಂಗ್ರಹ ವಾಹನ ಖರೀದಿ ಸಲು ಕೇಂದ್ರ ನೀಡಿರುವ ಅನುದಾನದಲ್ಲಿ ವಾಹನಗಳನ್ನು ಖರೀದಿ ಮಾಡಲಾಗಿದೆ. ಒಂದು ಕಸ ಸಂಗ್ರಹದ ವಾಹನಕ್ಕೆ ರೂ. 2 ಲಕ್ಷ. ಒಟ್ಟು ಆರು ವಾಹನಗಳನ್ನು ಖರೀದಿಸಲಾಗಿದೆ.ಜನರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ವಾಹನಗಳ ಮೇಲೆ `ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ, ಕಸವನ್ನು ಮೂಲದಲ್ಲಿ ಬೇರ್ಪಡಿಸಿ, ಕಸವನ್ನು ಗಂಟೆ ಗಾಡಿ ನೀಡಿ ಸ್ವಚ್ಛತೆ ಕಾಪಾಡಿ, ನಗರಸಭೆಯೊಂದಿಗೆ ಸಹಕ ರಿಸಿ~ ಎಂಬ ಘೋಷಣೆಗಳು ರಾರಾಜಿಸುತ್ತಿವೆ.ಪ್ರಾಯೋಗಿಕವಾಗಿ ಗದಗ ನಗರಕ್ಕೆ 4 ಮತ್ತು ಬೇಟಗೇರಿ ನಗರಕ್ಕೆ 2 ವಾಹನ ಗಳನ್ನು ಕಸ ಸಂಗ್ರಹಿಸಲು ಬಿಡಲಾಗು ತ್ತಿದೆ. ಗಂಟೆ ಶಬ್ದದೊಂದಿಗೆ ವಾಹನ ಗಳು ಮನೆ ಮುಂದೆ ಬರಲಿವೆ. ಸಾರ್ವಜ ನಿಕರು ಕೊಳೆಯುವ ಹಾಗೂ ಕೊಳೆಯದ ಕಸವನ್ನು ಪ್ರತ್ಯೇಕ ಮಾಡಿ ಹಾಕ ಬೇಕು. ಸಂಗ್ರಹವಾದ ಕಸವನ್ನು ಬಳಗಾ ನೂರು ರಸ್ತೆಯಲ್ಲಿರುವ ತಾಜ್ಯ ಸಂಸ್ಕ ರಣ ಘಟಕದಲ್ಲಿ ಸುರಿಯಲಾಗುತ್ತದೆ.ಕಸ ಸಂಗ್ರಹಕ್ಕೆ ಬರುವ ವಾಹನಕ್ಕೆ ಇಂತಿಷ್ಟು ಶುಲ್ಕ ಪಾವತಿಸಬೇಕು. ಉದಾಹರಣೆಗೆ 1 ಸಾವಿರ ಚದರ ಅಡಿ ಮನೆ ಹೊಂದಿದವರು ತಿಂಗಳಿಗೆ ರೂ. 10, ಎರಡು ಸಾವಿರ ಚದರಕ್ಕೆ ರೂ. 20, ಮೂರು ಸಾವಿರ ಚದರಕ್ಕೆ ರೂ. 30 ಶುಲ್ಕ ನಿಗದಿಪಡಿಸಲಾಗಿದೆ. ಆದರೆ ವಾಣಿಜ್ಯ ಬಳಕೆದಾರರು ಇದರ ಎರಡರಷ್ಟು ಶುಲ್ಕ ನೀಡಬೇಕು.

ಕಸ ಮುಕ್ತ ನಗರ: `ಸುಪ್ರೀಂ  ಕೋರ್ಟ್ ಆದೇಶದಂತೆ ನಗರದಲ್ಲಿ ಸ್ವಚ್ಛತೆ ಕಾಪಾಡಲು ಕೇಂದ್ರದ ಅನು ದಾನದಲ್ಲಿ ಆರು ಕಸ ಸಂಗ್ರಹ ವಾಹನ ಗಳನ್ನು ಖರೀದಿಸಲಾಗಿದೆ. ಕಸ ಸಂಗ್ರಹಿ ಸಲು ಶುಲ್ಕ ನಿಗದಿಪಡಿಸಲಾ ಗಿದೆ. ಶುಲ್ಕ ಪಾವತಿಸದಿದ್ದರೆ ತೆರಿಗೆ ಪಾವತಿ ಮಾಡುವಾಗಲೇ ಇದನ್ನು ಸೇರಿಸಲಾ ಗುವುದು. ಗುತ್ತಿಗೆ ಆಧಾರದ ಮೇಲೆ ಚಾಲಕರು ಮತ್ತು ಸಹಾಯಕ ರನ್ನು ನೇಮಕಕೊಳ್ಳಲಾಗುವುದು. ಶೀಘ್ರ ದಲ್ಲಿಯೇ ಹತ್ತು ಲಕ್ಷ ವೆಚ್ಚದಲ್ಲಿ ಕಸ ವಿಂಗಡಿಸುವ ಯಂತ್ರವನ್ನು ಖರೀದಿ ಸಲಾಗುವುದು~ ಎನ್ನುತ್ತಾರೆ ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.