ಮಂಗಳವಾರ, ಮೇ 18, 2021
30 °C

ಮಯೂಖಾ, ಪ್ರೀಜಾಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಏಷ್ಯನ್ ಕ್ರೀಡಾಕೂಟದ c ಹಾಗೂ ಮಯೂಖಾ ಜಾನಿ ಇಲ್ಲಿ ಆರಂಭವಾದ 51 ರಾಷ್ಟ್ರೀಯ ಓಪನ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ 10,000ಮೀ ಓಟ ಹಾಗೂ ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು.ಶನಿವಾರ ನಡೆದ ಸ್ಪರ್ಧೆಯಲ್ಲಿ ಪ್ರೀಜಾ ನಿಗದಿತ ಅಂತರವನ್ನು 35:56.09ಸೆಕೆಂಡ್‌ಗಳಲ್ಲಿ ಮುಟ್ಟಿ ಚಿನ್ನದ ಪದಕ ಜಯಿಸಿದರು. ಕವಿತಾ ರಾವತ್ (35:56.13ಸೆ.), ಹಾಗೂ ಎಲ್. ಸೂರ್ಯಾ (36:09.00ಸೆ.) ಗುರಿ ಮುಟ್ಟಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು. ಲಾಂಗ್‌ಜಂಪ್‌ನಲ್ಲಿ ಮಯೂಖಾ 6.54ಮೀ. ದೂರ ಜಿಗಿದು `ಚಿನ್ನ~ದ ಅಥ್ಲೀಟ್ ಎನಿಸಿಕೊಂಡರು.ಶನಿವಾರ ಚಿನ್ನ ಗೆದ್ದವರು: ಪುರುಷರ ವಿಭಾಗ: 10,000ಮೀ ಓಟ: ಸುರೇಶ್ ಕುಮಾರ್ (ಕಾಲ: 30:18.16ಸೆ.); ಡಿಸ್ಕಸ್ ಥ್ರೋ: ವೀಂಪಿದರ್ ಸಿಂಗ್ (ದೂರ: 50.52ಮೀ.).ಮಹಿಳೆಯರ ವಿಭಾಗ: 10,000ಮೀ. ಓಟ: ಪ್ರೀಜಾ ಶ್ರೀಧರನ್ (ಕಾಲ: 35:56.09ಸೆ.); ಲಾಂಗ್ ಜಂಪ್: ಮಯೂಖಾ ಜಾನಿ (ದೂರ: 6.54ಮೀ.); ಜಾವೆಲಿನ್ ಥ್ರೋ: ಎಸ್. ಸರಸ್ವತಿ (ದೂರ: 49.05ಮೀ.); ಹ್ಯಾಮರ್ ಥ್ರೋ: ಮಂಜು ಬಾಲಾ (ದೂರ: 56.71ಮೀ.) 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.