ಶುಕ್ರವಾರ, ಮೇ 14, 2021
35 °C

ಮರಗಳ ಸಮೀಕ್ಷೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಗರದಲ್ಲಿ ಇರುವ ಮರಗಳ ಸಂಖ್ಯೆ, ಅವುಗಳ ಬಾಳಿಕೆ, ಪ್ರಬೇಧ ಮತ್ತಿತರ ವಿವರಗಳನ್ನು ಕಲೆ ಹಾಕುವ ಸಲುವಾಗಿ ಮರಗಳ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ' ಎಂದು ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ತಿಳಿಸಿದರು.ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಮರಗಳ ವ್ಯವಸ್ಥಿತ ನಿರ್ವಹಣೆ ಹಾಗೂ ಅಪಾಯಕಾರಿ ಮರಗಳ ತೆರವುಗೊಳಿಸುವ ಕಾರ್ಯ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಸಲುವಾಗಿ ಸಂಪೂರ್ಣ ವ್ಯವಸ್ಥೆಯನ್ನು ಆನ್‌ಲೈನ್‌ಗೆ ಅಳವಡಿಸಲಾಗುತ್ತಿದೆ. ಮುಂದಿನ ಮೂರು ತಿಂಗಳ ಒಳಗಾಗಿ ಈ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ' ಎಂದು ತಿಳಿಸಿದರು.`ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಮೂಲದಲ್ಲಿಯೇ ವಿಂಗಡಿಸಿ, ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದ್ದು, 31 ವಾರ್ಡ್‌ಗಳನ್ನು ಶೀಘ್ರವೇ ಕಸಮುಕ್ತ ವಾರ್ಡ್‌ಗಳೆಂದು ಘೋಷಿಸಲಾಗುವುದು' ಎಂದರು.`ಮಳೆಗಾಲದಲ್ಲಿ ಸುಮ್ಮನೆ ಹರಿದುಹೋಗುವ ನೀರನ್ನು ತಡೆಯಲು ಇಂಗು ಗುಂಡಿಗಳನ್ನು ನಿರ್ಮಿಸಿ, ಅಂತರ್ಜಲ ವೃದ್ಧಿಗೆ ಸಹಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪಾಲಿಕೆಯ ಎಲ್ಲ ವಲಯಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದರು.ಮೇಯರ್ ಡಿ.ವೆಂಕಟೇಶಮೂರ್ತಿ, `ಕಳೆದ ಮಳೆಗಾಲದಲ್ಲಿ 1,72,000 ಸಸಿಗಳನ್ನು ನೆಡಲಾಗಿತ್ತು. ಈ ಸಲ 1,60,000 ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ' ಎಂದು ಹೇಳಿದರು.ಪಾಲಿಕೆಯ 8 ನರ್ಸರಿಗಳಲ್ಲಿ ವಿವಿಧ ಜಾತಿಯ 7,56,000 ಸಸಿಗಳನ್ನು ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.ಸಂಸದ ಅನಂತಕುಮಾರ್ ಮಾತನಾಡಿ, ಬೆಂಗಳೂರು ನಗರವನ್ನು ಈಗಾಗಲೇ ಹಸಿರು ವಲಯವನ್ನಾಗಿ ಮಾಡಲಾಗಿದೆ. ಸಸಿಗಳನ್ನು ನೆಡುವ ಜತೆಗೆ ಅವುಗಳನ್ನು ಬೆಳೆಸಲು ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.ವಿಪ್ರೊ : ಬಲ್ಬ್, ಗಿಡ ವಿತರಣೆ

ಬೆಂಗಳೂರು:
ವಿಪ್ರೊ ಎಂಟರ್ ಪ್ರೈಸಸ್‌ನ ವಿಪ್ರೊ ಗ್ರಾಹಕ ಕೇರ್ ಮತ್ತು ಲೈಟಿಂಗ್ ವಿಭಾಗವು ವಿಶ್ವ ಪರಿಸರದ ದಿನದ ಅಂಗವಾಗಿ ವಾರವಿಡೀ ಕಾರ್ಯಕ್ರಮಗಳನ್ನು ಆಯೋಜಿಸಿದೆ.ಆಯ್ಕೆ ಮಾಡಿದ ಕೆಲವು ಪ್ರದೇಶಗಳಲ್ಲಿ ಸಿಎಫ್‌ಎಲ್ ಬಲ್ಬ್ ಜತೆಗೆ ಗಿಡವೊಂದನ್ನು ವಿಪ್ರೊ ಸಂಸ್ಥೆಯು ನೀಡಲಿದೆ.

ವಿಪ್ರೊ ಗ್ರಾಹಕ ವಿಭಾಗದ ಹಿರಿಯ ಉಪಾಧ್ಯಕ್ಷ ಅನಿಲ್ ಚುಗ್ ಅವರು, `ಪರಿಸರವನ್ನು ಉಳಿಸಲು ಗಿಡವನ್ನು ನೆಡುವುದು ಇಂದಿನ ಅಗತ್ಯವಾಗಿದೆ. ಹೆಚ್ಚಿನ ಶಕ್ತಿ ಸಾಮರ್ಥ್ಯವಿರುವ ಉತ್ಪನ್ನಗಳನ್ನು ಖರೀದಿಸಲು ಜನರಿಗೆ ಪ್ರೇರಣೆ ನೀಡಬೇಕಾಗಿದೆ' ಎಂದರು.`ವಿಶ್ವ ಪರಿಸರ ದಿನದ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಿ, ಗಿಡಗಳನ್ನು ನೀಡಿ, ಅವರು ಗಿಡಗಳನ್ನು ನೆಡುವ ಮೂಲಕ ಭೂಮಿ ತಾಯಿಯ ಕುರಿತು ಇರುವ ಜವಾಬ್ದಾರಿಯನ್ನು ನೆನಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.