ಶುಕ್ರವಾರ, ಮೇ 27, 2022
21 °C

ಮರಳಿದ ಖರೀದಿ ಆಸಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಸತತ 2ನೇ ದಿನವೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಏರಿಕೆ ದಾಖಲಿಸಿರುವುದರಿಂದ ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹ ಮರಳಿದಂತಾಗಿದೆ.ಸೂಚ್ಯಂಕವು ದಿನದ ವಹಿವಾಟಿನಲ್ಲಿ  358 ಅಂಶಗಳಷ್ಟು ಏರಿಕೆ ದಾಖಲಿಸಿ 18,449 ಅಂಶಗಳೊಂದಿಗೆ   ವಹಿವಾಟು ಪೂರ್ಣಗೊಳಿಸಿತು. ಇದು ಈ ವರ್ಷದ ಇದುವರೆಗಿನ ಗರಿಷ್ಠ ಗಳಿಕೆ ಇದಾಗಿದೆ. ರಿಯಾಲ್ಟಿ, ಭಾರಿ ಯಂತ್ರೋಪಕರಣ, ಲೋಹ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳಲ್ಲಿ ಖರೀದಿ ಆಸಕ್ತಿ ಕಂಡು ಬಂದಿತು. ಜಾಗತಿಕ ಅರ್ಥ ವ್ಯವಸ್ಥೆಯ ಚೇತರಿಕೆ ಬಗ್ಗೆ ಆಶಾದಾಯಕ ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಹೂಡಿಕೆದಾರರು ಹಣದುಬ್ಬರ ಮತ್ತು ಬ್ಯಾಂಕ್ ಬಡ್ಡಿ ದರ ಹೆಚ್ಚಳ ಕುರಿತ ಕಳವಳ ನಿರ್ಲಕ್ಷಿಸಿದ್ದಾರೆ. ಅಗ್ಗದ ದರದಲ್ಲಿ ದೊರೆಯುತ್ತಿರುವ ಷೇರುಗಳ ಖರೀದಿಗೆ ದೇಶಿ ನಿಧಿಗಳು ಆಸಕ್ತಿ ತೋರಿಸಿದ್ದರಿಂದ ಸೂಚ್ಯಂಕ ಏರುಗತಿಯಲ್ಲಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.