ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ): ತಾಲ್ಲೂಕಿನ ವೇದಾವತಿ ನದಿ ಪಾತ್ರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಯಿಂದ ಜನ-ಜಾನುವಾರುಗಳ ಕುಡಿಯುವ ನೀರಿಗೆ ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ಮರಳು ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಟಿ.ಎನ್. ಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರೈತರು ಕೇಂದ್ರ ಬರ ಅಧ್ಯಯನ ತಂಡದ ಮುಂದೆ ಗುರುವಾರ ತಮ್ಮ ಅಳಲು ತೋಡಿಕೊಂಡರು.

ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ಡಾ.ಮನೋಹರನ್ ಅವರ ನೇತೃತ್ವದಲ್ಲಿ ತಂಡದ ಸದಸ್ಯರು ತಾಲ್ಲೂಕಿನ ದ್ಯಾವರನಹಳ್ಳಿ, ಪರಶುರಾಂಪುರ ಹತ್ತಿರದ ಗೋಶಾಲೆ, ಚಿಕ್ಕಚೆಲ್ಲೂರು, ದೊಡ್ಡಚೆಲ್ಲೂರು, ದೊಡ್ಡಬೀರನಹಳ್ಳಿಗೆ ಭೇಟಿ ನೀಡಿದ ನಂತರ ಟಿ.ಎನ್. ಕೋಟೆ ಗ್ರಾಮಕ್ಕೆ ಭೇಟಿ ನೀಡಿ, ಅಂತರ್ಜಲ ಮಟ್ಟ ಹಾಗೂ ಬೆಳೆಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿತು. ನಂತರ ರೈತರಿಂದ ಮಾಹಿತಿ ಪಡೆಯಿತು.

ತಾಲ್ಲೂಕಿನಲ್ಲಿ ದಶಕದಿಂದ ಸರಿಯಾಗಿ ಮಳೆಯಾಗಿಲ್ಲ. ಇಲ್ಲಿನ ಕೆರೆ ತುಂಬದೇ 10 ವರ್ಷವಾಗಿದೆ. ಮಳೆ ಕೊರತೆ, ಮರಳು ಗಣಿಗಾರಿಕೆಯಿಂದ ಅಂತರ್ಜಲ ಮಟ್ಟ ಕುಸಿದಿದೆ. ನೀರಾವರಿ ಜಮೀನುಗಳಲ್ಲಿ ಶೇ. 60ರಷ್ಟು ಪಂಪ್ಸೆಟ್ ಕೈಕೊಟ್ಟಿವೆ. ತೋಟಗಾರಿಕೆ ಬೆಳೆಗಳು ಒಣಗುತ್ತಿವೆ. 500ರಿಂದ 600 ಅಡಿ ಕೊರೆದರೂ ನೀರಿಲ್ಲ ಎಂದು ಗ್ರಾಮಸ್ಥರು ಪರಿಸ್ಥಿತಿ ವಿವರಿಸಿದರು.

ಈಗಾಗಲೇ ಎರಡು ಬಾರಿ ಕೇಂದ್ರ ಅಧ್ಯಯನ ತಂಡ ಬಂದು ಪರಿಶೀಲನೆ ನಡೆಸಿದೆ. ಈಗ ಮತ್ತೊಮ್ಮೆ ಬರದ ಅವಲೋಕನ ಮಾಡುತ್ತಿದ್ದಾರೆ. ಈಗಲಾದರೂ ನೊಂದಿರುವ ಜನರಿಗೆ ಒಂದಿಷ್ಟು ಪರಿಹಾರ ನೀಡಿ ಎಂದು ಗ್ರಾಮಸ್ಥರು ತಂಡಕ್ಕೆ ಮನವಿ ಮಾಡಿದರು. ಬರ ಅಧ್ಯಯನ ತಂಡದ ಸದಸ್ಯರಾದ ರಾಜಶೇಖರ್, ಸುನಿತಾ, ಶೆಂತಾನ್ ಬಿಸ್ವಾಸ್, ಪ್ರಾದೇಶಿಕ ಆಯುಕ್ತ ಎಸ್.ಡಿ. ಮೀನಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಾರಾಯಣ ಸ್ವಾಮಿ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಉಪ ವಿಭಾಗಾಧಿಕಾರಿ ಎನ್.ಎಂ. ನಾಗರಾಜ್, ತಹಶೀಲ್ದಾರ್ ಡಿ.ಕೆ. ರಾಮಚಂದ್ರಪ್ಪ, ಕೃಷಿ ಅಧಿಕಾರಿ ಡಾ.ಶಂಕರ್ನಾಯ್ಕ, ತಾಲ್ಲೂಕು ಜೆಡಿಎಸ್ ಮಾಜಿ ಅಧ್ಯಕ್ಷ ಒ. ನರಸಿಂಹಮೂರ್ತಿ, ಮಂಜುನಾಥ, ಚಂದ್ರಣ್ಣ, ಕರೆಂಗಪ್ಪ, ದೇವರಾಜು, ಬೈಲಪ್ಪ, ರತ್ನಮ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.