ಮರುಬಳಕೆ ಇಂಧನ: ಈಜಿಪ್ಟ್‌ನಲ್ಲಿ ಪ್ರಾಯೋಗಿಕ ಯೋಜನೆ

7

ಮರುಬಳಕೆ ಇಂಧನ: ಈಜಿಪ್ಟ್‌ನಲ್ಲಿ ಪ್ರಾಯೋಗಿಕ ಯೋಜನೆ

Published:
Updated:

ಕೈರೊ (ಪಿಟಿಐ): ಈಜಿಪ್ಟ್ ಜತೆಗೆ ದ್ವಿಪಕ್ಷೀಯ ಸಹಕಾರ ಹೆಚ್ಚಿಸಲು ಹಾಗೂ ದೇಶದ ಪವನ ಮತ್ತು ಸೌರ ವಿದ್ಯುತ್ ಕ್ಷೇತ್ರದಲ್ಲಿ ಭಾರತದ ಖಾಸಗಿ ಕ್ಷೇತ್ರದವರು ಪಾಲ್ಗೊಳ್ಳುವಂತೆ ಮಾಡುವುದಕ್ಕಾಗಿ ಮರುಬಳಕೆ ಇಂಧನದ ಪ್ರಾಯೋಗಿಕ ಯೋಜನೆಯೊಂದನ್ನು ಈಜಿಪ್ಟ್‌ನಲ್ಲಿ ಆರಂಭಿಸಲು ಭಾರತ ನಿರ್ಧರಿಸಿದೆ.ಈಜಿಪ್ಟ್ ಪ್ರವಾಸದಲ್ಲಿರುವ ಮರುಬಳಕೆ ಇಂಧನ ಸಚಿವ ಫಾರೂಕ್ ಅಬ್ದುಲ್ಲ ಅವರ ಸಮ್ಮುಖದಲ್ಲಿ ಈ ಬಗೆಗಿನ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗಿದೆ. ಸಚಿವರ ಜತೆ ಪವನ ಮತ್ತು ಸೌರ ವಿದ್ಯುತ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ 14 ಮಂದಿಯ ನಿಯೋಗವೂ ಇಲ್ಲಿಗೆ ಆಗಮಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry