ಹುನಗುಂದ: ತಾಲ್ಲೂಕಿನ ಮಲಪ್ರಭಾ ನದಿಯಿಂದ ನೆರೆಹಾವಳಿಗೆ ತುತ್ತಾದ ಹಿರೇಮಾಗಿ, ಪಾಪಥನಾಳ ಮತ್ತು ಬಿಸನಾಳಕೊಪ್ಪ ಗ್ರಾಮಗಳಿಗೆ ಜಿಲ್ಲಾಧಿಕಾರಿ ಡಾ.ಕುಂಜಪ್ಪ ಮಂಗಳವಾರ ಭೇಟಿ ನೀಡಿ ಗ್ರಾಮದ ಸಂತ್ರಸ್ತರೊಂದಿಗೆ ವಿವಿಧ ಸೌಲಭ್ಯಗಳ ಬಗ್ಗೆ ವಿಚಾರಿಸಿದರು.

ಈ ಸಂದರ್ಭದಲ್ಲಿ ಈಚೆಗೆ ಬೀಸಿದ ಭಾರಿ ಗಾಳಿಯಿಂದ ಕಿತ್ತಿದ ತಗಡಿನ ಶೆಡ್ ಪರಿಶೀಲಿಸಿ ತಕ್ಷಣದ ಕ್ರಮಕ್ಕೆ ಆದೇಶಿಸಿದರು. ಅದರಂತೆ ನೆರೆ ಸಂತ್ರಸ್ತರ ಆಸರೆ ಮನೆಗಳ ನಿರ್ಮಾಣ ಅಭಿವೃದ್ಧಿ ಕುರಿತಾಗಿ ಪರಿಶೀಲಿಸಿದರು. ಅಪೂರ್ಣ ಮನೆಗಳನ್ನು ತಕ್ಷಣ ಪೂರ್ಣಗೊಳಿಸಲು ಸಂಬಂಧಿಸಿದವರಿಗೆ ಕಟ್ಟುನಿಟ್ಟಾಗಿ ಹೇಳಿದರು.

ನಂತರ ಧನ್ನೂರಿನ ಕುಡಿಯುವ ನೀರಿನ ಘಟಕಕ್ಕೂ ಭೇಟಿ ನೀಡಿದರು. ತಹಶೀಲ್ದಾರ್ ಪಂಪನಗೌಡ ಮೇಲ್ಸೀಮೆ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.

ರೈತ ಸಂಪರ್ಕ ಕೇಂದ್ರಕ್ಕೆ ಆಗ್ರಹ: ಹುನಗುಂದ ನಗರದಲ್ಲಿರುವ ರೈತ ಸಂಪರ್ಕ ಕೇಂದ್ರ ಸ್ಥಳಾಂತರಿಸಿದ್ದು ಸರಿಯಲ್ಲ. ಸದ್ಯ ಸ್ಥಳಾಂತರಗೊಂಡ ರೈತ ಸಂಪರ್ಕ ಕೇಂದ್ರ ಎಪಿಎಂಸಿಯಲ್ಲಿದ್ದು ರೈತರಿಗೆ ಅನಾನುಕೂಲವಾಗಿದೆ. ತಕ್ಷಣ ಅದನ್ನು ಬದಲಾಯಿಸಿ ಬಸ್ ನಿಲ್ದಾಣ ಸಮೀಪದಲ್ಲಿ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ರಮಜಾನ್ ನದಾಫ, ವೀರೇಶ ಮಾಳಿ ಮತ್ತು ಶಿವು ಹಾಗೂ ಇತರರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.