ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಮಳೆ ಮತ್ತೆ ಅಬ್ಬರಿಸತೊಡಗಿದೆ. ಕೊಡಗಿನಲ್ಲಿ ಮಳೆ ಕಾರಣ ಶಾಲಾ ಕಾಲೇಜುಗಳಿಗೆ ಶುಕ್ರವಾರ ನೀಡಿದ್ದ ರಜೆಯನ್ನು ಶನಿವಾರಕ್ಕೆ ವಿಸ್ತರಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಅಬ್ಬರ ಶುಕ್ರವಾರ ಮುಂದುವರಿದಿದೆ. ತುಂಗಾ, ವರದಾ, ಮಾಲತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು 12,695 ಕ್ಯೂಸೆಕ್ಗೆ ಹೆಚ್ಚಿದೆ. ಈ ಭಾಗದಲ್ಲಿ 85 ಮಿ.ಮೀ. ಮಳೆಯಾಗಿದೆ.

ಚಿಕ್ಕಮಗಳೂರು, ತೀರ್ಥಹಳ್ಳಿ ಸುತ್ತಮುತ್ತ ಉತ್ತಮ ಮಳೆಯಾದ ಪರಿಣಾಮ ತುಂಗಾ ಜಲಾಶಯದ ನೀರಿನ ಮಟ್ಟ 587.93 ಅಡಿಗೆ ಏರಿದೆ. ಒಳಹರಿವು 28,050 ಕ್ಯೂಸೆಕ್ ಇದ್ದು, 26,628 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಭದ್ರಾ ಜಲಾನಯನ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗಿದ್ದು, ಜಲಾಶಯದಲ್ಲಿ ನೀರಿನ ಮಟ್ಟ ಒಂದೇ ದಿನ ಎರಡು ಅಡಿ ಹೆಚ್ಚಿದೆ.

ಮಹಿಳೆ ನೀರು ಪಾಲು: ಸಕಲೇಶಪುರ ತಾಲ್ಲೂಕಿನ ಕ್ಯಾಮಹಳ್ಳಿ ಸಮೀಪ ಎತ್ತಿನಹಳ್ಳ ನದಿ ದಾಟುತ್ತಿದ್ದ ಐಬಿಸಿ ಎಸ್ಟೇಟ್ನ ಕೂಲಿಕಾರ ಮಹಿಳೆ ಬೇಬಿ (45) ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಇವರಜತೆ ನದಿ ದಾಟುತ್ತಿದ್ದ ಸಹೋದರಿ ಗೋಪಿ ಹಾಗೂ ಆಕೆಯ ಪತಿ ಸೀನ ಅಪಾಯದಿಂದ ಪಾರಾಗಿದ್ದಾರೆ. `ಹೊಳೆ ತುಂಬಿ ಹರಿಯುತ್ತಿರುವುದರಿಂದ ಮೃತದೇಹ ಹುಡುಕಾಟ ಸಾಧ್ಯವಾಗಿಲ್ಲ' ಎಂದು ಇನ್ಸ್ಪೆಕ್ಟರ್ ದಿನೇಶ್ ಪಟೇಲ್ ತಿಳಿಸಿದ್ದಾರೆ.

ಮನೆಗಳಿಗೆ ಹಾನಿ: ಕೊಡಗು ಜಿಲ್ಲೆಯಾದ್ಯಂತ ಮಳೆ ಇನ್ನೂ ಬಿರುಸು ಪಡೆಯುವ ಲಕ್ಷಣಗಳಿರುವ ಕಾರಣ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ಶನಿವಾರದವರೆಗೂ ರಜೆ ವಿಸ್ತರಿಸಲಾಗಿದೆ. ಹಲವೆಡೆ ಮಣ್ಣು ಕುಸಿತ ಉಂಟಾಗಿದ್ದು, ಮರಗಳು ಉರುಳಿವೆ. ಮತ್ತೆ ಕೆಲವೆಡೆ ಮನೆಗಳು ಕುಸಿದಿವೆ.

24 ಗಂಟೆಗಳ ಅವಧಿಯಲ್ಲಿ ಮಡಿಕೇರಿಯಲ್ಲಿ ಅತಿ ಹೆಚ್ಚು ಅಂದರೆ 150.2 ಮಿ.ಮೀ. ಮಳೆಯಾಗಿದೆ. ಇದು ಈ ವರ್ಷ ರಾಜ್ಯದಲ್ಲಿ ಸುರಿದ ಅತಿ ಹೆಚ್ಚು ಮಳೆ ಎಂದು ದಾಖಲಾಗಿದೆ. ಶಾಂತಳ್ಳಿಯಲ್ಲಿ 133.2 ಮಿ.ಮೀ., ಸಂಪಾಜೆಯಲ್ಲಿ 115.4 ಮಿ.ಮೀ., ಭಾಗಮಂಡಲದಲ್ಲಿ 111 ಮಿ.ಮೀ. ಮಳೆಯಾಗಿದೆ. ಭಾಗಮಂಡಲ ಜಲಾವೃತಗೊಂಡಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ. ನಾಪೋಕ್ಲು ಹಾಗೂ ಮಡಿಕೇರಿ ಕಡೆ ತೆರಳುವ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಮಡಿಕೇರಿಯ ಮೇಕೇರಿಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಮೇಕೇರಿ ರಸ್ತೆ ಬದಿಯ ಮಣ್ಣು ಕುಸಿದು ಬಿದ್ದಿದ್ದರಿಂದ ಸುಮಾರು ಒಂದೂವರೆ ಗಂಟೆ ಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.ಮಡಿಕೇರಿಯ ರಾಣಿಪೇಟೆ, ಚಾಮುಂಡೇಶ್ವರಿ ನಗರದಲ್ಲಿಯೂ ಮಣ್ಣುಗುಡ್ಡೆ ಕುಸಿದಿದೆ.

ಹಾರಂಗಿ ಭರ್ತಿ: ಕುಶಾಲನಗರ ಬಳಿಯ ಹಾರಂಗಿ ಜಲಾಶಯದಿಂದ ದಾಖಲೆ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಶುಕ್ರವಾರ ಸಂಜೆ ವೇಳೆಗೆ 26,000 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿತ್ತು. 15 ವರ್ಷಗಳಲ್ಲಿಯೇ ಇದು ಅಧಿಕ ಪ್ರಮಾಣದ ಹೊರಹರಿವು ಎಂದು ಎಂಜಿನಿಯರ್ ತಿಳಿಸಿದ್ದಾರೆ.

2,859 ಅಡಿಗಳ ಗರಿಷ್ಠ ಮಟ್ಟ ಹೊಂದಿರುವ ಈ ಜಲಾಶಯದಲ್ಲಿ ಶುಕ್ರವಾರ ಬೆಳಿಗ್ಗೆ 6 ಗಂಟೆ ಸಮಯದಲ್ಲಿ 2,857.41 ಅಡಿಗಳವರೆಗೆ ನೀರನ್ನು ಕಾಯ್ದುಕೊಂಡು ಹೊರಬಿಡಲಾಗುತ್ತಿದೆ. 5 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಪ್ರಸಕ್ತ ವರ್ಷ ಒಂದು ತಿಂಗಳ ಮೊದಲೇ ಹಾರಂಗಿ ಜಲಾಶಯ ಭರ್ತಿಯಾಗಿದೆ.

ಧಾರಾಕಾರ ಮಳೆ: ಕರಾವಳಿಯಲ್ಲಿ ನಾಲ್ಕೈದು ದಿನಗಳಿಂದ ಇಳಿಮುಖವಾಗಿದ್ದ ಮಳೆಯ ಅಬ್ಬರ ಶುಕ್ರವಾರ ಮತ್ತೆ ಜೋರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಬೆಳಿಗ್ಗೆಯಿಂದ ಸಂಜೆವರೆಗೆ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗಿದೆ.

ಜಿಲ್ಲೆಯ ಕಡಬ ಹೋಬಳಿಯಲ್ಲಿ ಅತಿ ಹೆಚ್ಚು (85.2 ಮಿ.ಮೀ) ಮಳೆಯಾಗಿದೆ. ಸುಳ್ಯ (74.2 ಮಿ.ಮೀ) ಹಾಗೂ ಬೆಳ್ತಂಗಡಿ (61.2 ಮಿ.ಮೀ) ತಾಲ್ಲೂಕಿನಲ್ಲೂ ಭಾರಿ ಮಳೆಯಾಗಿದೆ. ಮಂಗಳೂರಿನಲ್ಲಿ ದಿನವಿಡೀ ದಟ್ಟಮೋಡಗಳಿಂದ ಆವೃತವಾದ ವಾತಾವರಣವಿತ್ತು.

ಸುಬ್ರಹ್ಮಣ್ಯ ಸುತ್ತಮುತ್ತ ಹಾಗೂ ಘಟ್ಟದ ಮೇಲೆ ಸುರಿದ ಭಾರಿ ಮಳೆಯಿಂದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಶುಕ್ರವಾರ ಸಂಜೆ ವೇಳೆಗೆ ಸೇತುವೆ ಮುಳುಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ಕೆಲವರಿಗೆ ತಮ್ಮ ಮನೆಗಳಿಗೆ ತೆರಳುವುದಕ್ಕೆ ಸಾಧ್ಯವಾಗದೆ ಸುಬ್ರಹ್ಮಣ್ಯದಲ್ಲೇ ಉಳಿಯಬೇಕಾದ ಸ್ಥಿತಿ ಆಯಿತು.

ಗುರುವಾರ ಸಂಜೆಯಿಂದಲೇ ಈ ಪರಿಸರದಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಶುಕ್ರವಾರ ಬೆಳಿಗ್ಗೆಯಿಂದ ಎಡೆಬಿಡದೆ ಮಳೆ ಸುರಿಯಲಾರಂಭಿಸಿತು. ಹೀಗಾಗಿ ಸಂಜೆ 3.20ರ ವೇಳೆಗೆ ಕುಮಾರಧಾರ ಸೇತುವೆ ಈ ವರ್ಷ ನಾಲ್ಕನೇ ಬಾರಿಗೆ ಮುಳಗಡೆಯಾಯಿತು. ರಾತ್ರಿ 9 ಗಂಟೆಯವರೆಗೂ ಸೇತುವೆಯ ಮೇಲೆ ಹರಿಯುತ್ತಿದ್ದ ನೀರು ಇಳಿದಿರಲಿಲ್ಲ.

ಏಕಾದಶಿಯ ದಿನವಾದ್ದರಿಂದ ಕ್ಷೇತ್ರಕ್ಕೆ ಬಂದ ಭಕ್ತರ ಸಂಖ್ಯೆ ಕಡಿಮೆ ಇತ್ತು. ಆದರೂ ಬಂದಿದ್ದ ಭಕ್ತರು ದೇವಸ್ಥಾನದಿಂದ ಬೆಂಗಳೂರು, ಮಂಗಳೂರು, ಧರ್ಮಸ್ಥಳ, ಕಡಬ, ಉಪ್ಪಿನಂಗಡಿ, ನೆಟ್ಟಣ, ಗುಂಡ್ಯದತ್ತ ತೆರಳುವುದಕ್ಕೆ ಮುಳುಗಿದ ಸೇತುವೆ ಅಡ್ಡಿ ಆಯಿತು. ಸೇತುವೆಯ ಎರಡೂ ಬದಿಯಲ್ಲಿ ನೂರಾರು ಜನರು, ವಿದ್ಯಾರ್ಥಿಗಳು ನೀರು ಇಳಿಯುವುದನ್ನೇ ನೋಡುತ್ತ ನಿಲ್ಲಬೇಕಾಯಿತು.
ಭಾರಿ ಗಾಳಿ, ಮಳೆಯಿಂದಾಗಿ ಸುಳ್ಯ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಡು ದಿನಗಳಿಂದ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಜನ ಪರಡಾಡುತ್ತಿದ್ದಾರೆ.

ಉಡುಪಿ ಜಿಲ್ಲೆಯಲ್ಲೂ ಶುಕ್ರವಾರ ಬೆಳಿಗ್ಗೆಯಿಂದ ಮುಂಗಾರು ಮತ್ತೆ ಚುರುಕುಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗಗಳಲ್ಲೂ ಮಳೆ ಮತ್ತೆ ಬಿರುಸಾಗಿದೆ.

ಆಲಮಟ್ಟಿ ಭರ್ತಿಗೆ 5 ಅಡಿ ಬಾಕಿ: ಆಲಮಟ್ಟಿಯ ಲಾಲ್ಬಹದ್ದೂರ್ ಶಾಸ್ತ್ರಿ ಸಾಗರ ಭರ್ತಿಯಾಗಲು ಇನ್ನು ಐದು ಅಡಿ ಮಾತ್ರ ಬಾಕಿ ಇದೆ. ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ 42,000 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದ್ದು 270 ಮೆ.ವಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು ಜಲಾಶಯಕ್ಕೆ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಹೊರ ಹರಿವನ್ನು ಹೆಚ್ಚಿಸಲಾಗಿದೆ. ಜಲಾಶಯದ ಬಲಬದಿ ಇರುವ ಎಲ್ಲ ಆರು ವಿದ್ಯುತ್ ಉತ್ಪಾದನಾ ಘಟಕಗಳು ಕಾರ್ಯಾರಂಭ ಮಾಡಿವೆ ಎಂದು ವಿದ್ಯುತ್ ನಿಗಮದ ಕಾರ್ಯನಿವಾಹಕ ಎಂಜಿನಿಯರ್ ಎಸ್.ಬಿ. ಬಿಸ್ಲಾಪುರ ಹೇಳಿದರು.

ಒಳಹರಿವು ಈಗ 56,108 ಕ್ಯೂಸೆಕ್ ಇದ್ದು ಕಾಲುವೆಗೆ 571 ಕ್ಯೂಸೆಕ್ ಹರಿಸಲಾಗುತ್ತಿದೆ. ಒಟ್ಟಾರೆ 42,571 ಕ್ಯೂಸೆಕ್ ಹೊರ ಬಿಡಲಾಗುತ್ತಿದೆ. 123 ಟಿ.ಎಂ.ಸಿ. ಅಡಿ ಸಾಮರ್ಥ್ಯದ ಜಲಾಶಯದಲ್ಲಿ 98 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿದೆ. ವಿಜಾಪುರ ನಗರ ಮತ್ತು ಕೊಲ್ಹಾರದಲ್ಲಿ ಶುಕ್ರವಾರ ಸಂಜೆ ಮಳೆ ಸುರಿಯಿತು. ಇಂಡಿ ಮತ್ತು ಆಲಮಟ್ಟಿಯಲ್ಲಿ ಜಿಟಿ ಜಿಟಿ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳದಲ್ಲಿ ತುಂತುರು ಮಳೆಯಾಯಿತು.

ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಚಿಕ್ಕೋಡಿ ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಇದರಿಂದ ಶುಕ್ರವಾರ ಸದಲಗಾ-ಬೋರಗಾಂವ ನಡುವಿನ ಸೇತುವೆಯೂ ಜಲಾವೃತಗೊಂಡಿದೆ. ತಾಲ್ಲೂಕಿನಲ್ಲಿ ಒಟ್ಟು ಕೆಳಮಟ್ಟದ ಮೂರು ಸೇತುವೆಗಳು ಮುಳುಗಡೆಯಾಗಿವೆ.

ಕೃಷ್ಣಾ ಮತ್ತು ದೂಧಗಂಗಾ ನದಿ ಹರಿವಿನಲ್ಲಿ ಕಳೆದ 24 ಗಂಟೆಯಲ್ಲಿ ಸುಮಾರು ಒಂದುವರೆ ಅಡಿ ಏರಿಕೆ ದಾಖಲಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ. ತಾಲ್ಲೂಕಿನ ವೇದಗಂಗಾ ನದಿಗೆ ನಿರ್ಮಿಸಿರುವ ಜತ್ರಾಟ-ಭೀವಶಿ ಮತ್ತು ಕೃಷ್ಣಾ ನದಿಗೆ ನಿರ್ಮಿಸಿರುವ ಕಲ್ಲೋಳ-ಯಡೂರ ಗ್ರಾಮಗಳ ಮಧ್ಯೆದ ಕೆಳಮಟ್ಟದ ಸೇತುವೆಗಳು ಗುರುವಾರವೇ ಮುಳುಗಡೆಯಾಗಿವೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ ಚುರುಕುಗೊಂಡಿದ್ದು, ಶುಕ್ರವಾರ ಕರಾವಾಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಮಳೆ ಜೋರಾಗಿ ಸುರಿಯಿತು. ಅರೆ ಬಯಲುಸೀಮೆ ಪ್ರದೇಶಗಳಲ್ಲೂ ಜಿಟಿ ಜಿಟಿ ಮಳೆಯಾಗಿದೆ.

ಧಾರವಾಡ ಜಿಲ್ಲೆಯಲ್ಲೂ ಗುರುವಾರ ರಾತ್ರಿಯಿಂದ ಆಗಾಗ್ಗೆ ಜಿಟಿ ಜಿಟಿ ಮಳೆಯಾಗಿದೆ.ಬೀದರ್ ಜಿಲ್ಲೆಯ ಕಮಲನಗರ ಸುತ್ತಮುತ್ತ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.