ಒಂದೆಡೆ ಸಾಲು ಸಾಲಾಗಿ ಆಚರಿಸಿಕೊಳ್ಳಲು ನಿಂತಿರುವ ಹಬ್ಬಗಳು... ಮೇಲೆ ಕಾಣುವ ಆಕಾಶ ಬುಟ್ಟಿಗಳು, ಝಗಮಗಿಸುವ ಬೆಳಕು, ಕೈ ಕೈ ಹಿಡಿದು ಸಾಗುವ ಜೋಡಿ. ರಸ್ತೆಗಳಲ್ಲಿ ಎತ್ತ ಕಣ್ಣುಹಾಯಿಸಿದರೂ ಆಫರ್ಗಳದ್ದೇ ಸುರಿಮಳೆ...

ನವರಾತ್ರಿಯ ನವದುರ್ಗೆಯರ ಆರಾಧನೆ ಮುಗಿಯುತ್ತ ಬಂದಿದೆ. ದೀಪಾವಳಿ ಸಮೀಪದಲ್ಲಿದೆ. ಅದಕ್ಕಾಗಿಯೇ ಮಲ್ಲೇಶ್ವರ ಕಮರ್ಷಿಯಲ್ ಫೋರಂ ಒಂದು ತಿಂಗಳ ದಸರಾ ಮತ್ತು ದೀಪಾವಳಿ ಶಾಪಿಂಗ್ ಮೇಳ ನಡೆಸುತ್ತಿದೆ.

ಒಟ್ಟು 250 ಅಂಗಡಿಗಳು ಈ ಮೇಳದಲ್ಲಿ ಭಾಗವಹಿಸುತ್ತಿವೆ. ಇದರೊಂದಿಗೆ ಹಲವಾರು ಸಾಂಸ್ಕೃತಿಕ ಜಾನಪದ ಕಾರ್ಯಕ್ರಮಗಳು ನಡೆಯಲಿವೆ.

ಬೆಂಗಳೂರು ಉತ್ತರವಲಯದವರನ್ನು ಆಕರ್ಷಿಸುವುದು ಇದರ ಮುಖ್ಯ ಉದ್ದೇಶ. ಇದರೊಂದಿಗೆ ನಶಿಸುವ ಅಂಚಿನಲ್ಲಿರುವ ಜಾನಪದ ನೃತ್ಯ ಪ್ರದರ್ಶನ, ಸ್ಥಳೀಯ ಮಕ್ಕಳಿಗಾಗಿ ಚಿತ್ರಕಲೆ, ಗಾಯನ ಸ್ಪರ್ಧೆ ಕೂಡ ಇದೆ. ಈ ಅಂಗಡಿಗಳಲ್ಲಿ ಏನನ್ನೇ ಖರೀದಿಸಿದರೂ ಗಿಫ್ಟ್ವೋಚರ್, ರಿಯಾಯ್ತಿ ದೊರೆಯಲಿದೆ.

ಇದರೊಂದಿಗೆ ಬಂಪರ್ ಬಹುಮಾನವಾಗಿ ಎ ಸ್ಟಾರ್ ಕಾರು, ದ್ವಿಚಕ್ರ ವಾಹನ, ಎಲ್ಸಿಡಿ ಟಿವಿ, ಮೊಬೈಲ್ಗಳಿವೆ. ಈ ಬಾರಿ ಒಟ್ಟು 35 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.