ಸೋಮವಾರ, ಜೂನ್ 21, 2021
27 °C

ಮಲ ಹೊರುವ ಪದ್ಧತಿ ಇನ್ನೂ ಜೀವಂತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ (ಚಿತ್ರದುರ್ಗ ಜಿಲ್ಲೆ): ಪಟ್ಟಣದ ಗಾಂಧಿನಗರದಲ್ಲಿರುವ ಮಾರಮ್ಮನ ಗುಡಿ ರಸ್ತೆಯ ಸಂಜೀವಪ್ಪ ಎಂಬುವವರ ಮನೆಯಲ್ಲಿ ಬುಧವಾರ ತಡರಾತ್ರಿ ಕಾರ್ಮಿಕರು ಗುಂಡಿಯಲ್ಲಿದ್ದ ಮಲವನ್ನು ತಲೆ ಮೇಲೆ ಹೊತ್ತು ಸ್ವಚ್ಛಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.ಪುರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಪೌರ ಕಾರ್ಮಿಕರಾಗಿ ದುಡಿಯುತ್ತಿದ್ದ ಈ ಕಾರ್ಮಿಕರಿಂದ ಸಂಜೀವಪ್ಪ ಮನೆಯ ಕಕ್ಕಸ್ಸು ಗುಂಡಿಯಲ್ಲಿದ್ದ ಮಲವನ್ನು ರಾತ್ರಿ ಸಮಯದಲ್ಲಿ ತೆಗೆಸುತ್ತಿದ್ದರು. ಮಲ ತೆಗೆಯುವ ಮತ್ತು ಹೊರುತ್ತಿದ್ದ ದೃಶ್ಯಗಳನ್ನು ಕಂಡ ಯುವಕರಿಬ್ಬರು ಫೋಟೋ ತೆಗೆಸಿದ್ದಾರೆ. ಇವು `ಪ್ರಜಾವಾಣಿ~ಗೆ ಲಭಿಸಿವೆ.ಈ ಯುವಕರು ಗುರುವಾರ ಮಧ್ಯಾಹ್ನ ಕಾರ್ಯ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೋರಿ ಛಾಯಾಚಿತ್ರಗಳ ಸಮೇತ ಮನವಿ ಮಾಡಿದರು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವಿಪುಲ್ ಬನ್ಸಾಲ್  ಸ್ಥಳದಲ್ಲಿದ್ದ ಪುರಸಭೆ ಮುಖ್ಯಾಧಿಕಾರಿ ಬಿ. ರಾಮಪ್ಪ ಅವರಿಗೆ ಸೂಚಿಸಿದರು.ಅದರಂತೆ ಸಂಜೀವಪ್ಪ ಮೇಲೆ ಚಳ್ಳಕೆರೆ ಪೊಲೀಸ್ ಠಾಣೆಗೆ ಗುರುವಾರ ರಾತ್ರಿ ದೂರು ನೀಡಲಾಗಿದೆ ಎಂದು ರಾಮಪ್ಪ ಅವರು ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

 

           

  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.