ಬೆಂಗಳೂರು: ಬಂಬೂಬಜಾರ್ನಲ್ಲಿ ಶನಿವಾರ ಬೆಳಗಿನ ಜಾವ ಪೀಠೋಪಕರಣ ಮಳಿಗೆಗೆ ಹೊತ್ತಿಕೊಂಡ ಬೆಂಕಿಯು ಪಕ್ಕದ ಗ್ಯಾರೇಜ್ಗೂ ವ್ಯಾಪಿಸಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ಬಂಬೂಬಜಾರ್ನಲ್ಲಿ ಇರ್ಷಾದ್ ಎಂಬುವರು ‘ಎಸ್.ಕೆ.ಡೆಮಾಲಿಷರ್ಸ್’ ಪೀಠೋಪಕರಣ ಮಳಿಗೆ ಇಟ್ಟುಕೊಂಡಿದ್ದಾರೆ. ಆ ಮಳಿಗೆಯ ಪಕ್ಕದಲ್ಲೇ ‘ಆಟೊ ಸ್ಕ್ರ್ಯಾಪ್ ಪಾಯಿಂಟ್’ ಗ್ಯಾರೇಜ್ ಇದೆ. ಬೆಳಿಗ್ಗೆ 4.45ಕ್ಕೆ ಇರ್ಷಾದ್ ಅವರ ಮಳಿಗೆಯಲ್ಲಿ ಶಾರ್ಟ್ ಸರ್ಕಿಟ್ನಿಂದ ಬೆಂಕಿ ಹೊತ್ತಿಕೊಂಡಿದೆ.

ಕೆಲಕ್ಷಣಗಳಲ್ಲೇ ಬೆಂಕಿಯ ತೀವ್ರತೆ ಹೆಚ್ಚಾಗಿ, ಪಕ್ಕದ ಗ್ಯಾರೇಜ್ಗೂ ವ್ಯಾಪಿಸಿದೆ. ಕೂಡಲೇ ಸಾರ್ವಜನಿಕರು, ಪೊಲೀಸ್, ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿ, ಐದು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

‘ಪೀಠೋಪಕರಣಗಳು, ವಾಹನದ ಬಿಡಿ ಭಾಗಗಳು ಸೇರಿದಂತೆ ₨ 7 ಲಕ್ಷ ಹಾನಿಯಾಗಿದೆ’ ಎಂದು ಇರ್ಷಾದ್ ಹೇಳಿದ್ದಾರೆ. ಭಾರತೀನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.