ಮಳೆಗಾಗಿ ಪ್ರಾರ್ಥಿಸಿ ರೈತರಿಂದ ಕತ್ತೆ ಮದುವೆ
ಬ್ಯಾಡಗಿ : ಮುನಿಸಿಕೊಂಡ ಮಳೆ ದೇವನನ್ನು ಒಲಿಸಿಕೊಳ್ಳಲು ರೈತ ಸಮೂದಾಯ ಕತ್ತೆಗಳ ಮದುವೆಗೆ ಮೊರೆ ಹೋದ ಘಟನೆ ತಾಲ್ಲೂಕಿನ ಬಿಸಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಳೆ ಸುರಿಯ ಬಹುದೆನ್ನುವ ರೈತ ಸಮುದಾಯದ ನಿರೀಕ್ಷೆ ಹುಸಿಯಾಗಿದೆ. ಮಳೆಯಾಗದ್ದರಿಂದ ಆತಂಕ ಗೊಂಡಿರುವ ರೈತರು ದೇವರನ್ನು ಪ್ರಾರ್ಥಿಸುವಂತಾಗಿದೆ.
ಗ್ರಾಮದ ರೈತರು ದಿಕ್ಕು ತೋಚದೆ ಕತ್ತೆಗಳ ಮದುವೆ ಮಾಡಿದರಾದರೂ ವರುಣ ದೇವ ಒಲಿಯಬಹುದೆನ್ನುವ ಮಹಾದಾಸೆಯಿಂದ ಮದುವೆ ನಡೆಸಲು ಮುಂದಾದರು ಎನ್ನಲಾಗಿದೆ.
ಗ್ರಾಮದಲ್ಲಿ ಕತ್ತೆಗಳ ಮದುವೆಗಾಗಿ ಮದುವೆ ಮಂಟಪ ನಿರ್ಮಿಸಿದ್ದು, ಮೈತೊಳೆದು ಅರಿಶಿಣ ಹಚ್ಚಿ ನವ ವಧು-ವರರಂತೆ ಸಿಂಗರಿಸಲಾಗಿತ್ತು. ಮುತೈದೆಯರು ಕತ್ತೆ ವಧು-ವರರನ್ನು ಆರತಿ ಬೆಳಗಿ ಮಳೆಗಾಗಿ ಪ್ರಾರ್ಥಿಸಿ ದರು.
ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾಧ್ಯ ವೈಭವದೊಂದಿಗೆ ಮೆರವಣೆಗೆ ನಡೆಸಿ ಅನ್ನ ಸಂತರ್ಪಣೆ ನಡೆಸಿದರು.
ಮದುವೆ ಸಮಾರಂಭದಲ್ಲಿ ಶೇಖರಗೌಡ್ರ ಗೌಡ್ರ, ಅಂದಾನೆಪ್ಪ ಮುಚ್ಚಟ್ಟಿ, ಹಾಲಪ್ಪ ಮಾಳಗಿ, ನಾಗಪ್ಪ ಪೂಜಾರ, ಚನ್ನಬಸಪ್ಪ ಕಾಕೋಳ, ಶಿವಲಿಂಗಪ್ಪ ಮಾಗನೂರ, ಹೊಳಿ ಯಪ್ಪ ದೇವರಗುಡ್ಡ, ಬಸಪ್ಪ ಕೊತ್ನೇರ್, ವಿರೂಪಾಕ್ಷಪ್ಪ ಉಕ್ಕುಂದ, ಶೇಖಣ್ಣ ಎಲಿಗಾರ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.