ಮೊಳಕಾಲ್ಮುರು: ಪ್ರತಿಯೊಬ್ಬರೂ ತಾನು ಮಾಡುವ ಕಾಯಕದಲ್ಲಿ ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠೆ ಮೈಗೂಡಿಸಿಕೊಳ್ಳುವ ಮೂಲಕ ಉತ್ತಮ ವ್ಯಕ್ತಿಯಾಗಿ ಹೊರ ಹೊಮ್ಮಬೇಕು ಎಂದು ಕಣಕುಪ್ಪೆ ಗವಿಮಠದ ಶಾಂತವೀರ ಸ್ವಾಮೀಜಿ ಸಲಹೆ ಮಾಡಿದರು.

ತಾಲ್ಲೂಕಿನ ರಾಂಪುರದ ಎನ್ವೈ ತೋಟದಲ್ಲಿ ಮಳೆಗಾಗಿ ಪ್ರಾರ್ಥಿಸಿ ಶುಕ್ರವಾರ ಹಮ್ಮಿಕೊಂಡಿದ್ದ `ವರುಣ ಯಾಗ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾರು ವೃತ್ತಿಯಲ್ಲಿ ಶ್ರದ್ಧೆ ಹೊಂದಿರುವುದಿಲ್ಲವೋ ಸಮಾಜದಲ್ಲಿ ಅವರು ಇದ್ದೂ ಇಲ್ಲದಂತೆಯೇ ಸರಿ. ದೇಶಪ್ರೇಮ, ಜನಪ್ರೇಮ, ಸಮಾಜಸೇವೆ ಹೊಂದಿರುವವರು ಮಾತ್ರ ನಿಜವಾದ ಪ್ರಜೆಗಳಾಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿಯೇ ಬಸವಣ್ಣ, ಗಾಂಧೀಜಿ, ಅಕ್ಕಮಹಾದೇವಿ ಮಂತಾದವರು ಸಾಗಿದ ಹಿನ್ನೆಲೆಯಲ್ಲಿ ಅವರು ಇಂದಿಗೂ ಜೀವಂತವಾಗಿದ್ದಾರೆ ಎಂದರು.

ಈ ದೇಶದ ಬೆನ್ನೆಲುಬು ರೈತರಾಗಿದ್ದು, ಇವರ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ಹೊಂದಿರಬೇಕು. ಮಳೆ ಇಲ್ಲದೇ ಸಂಕಷ್ಟದ ಸ್ಥಿತಿ ಉಂಟಾಗಿರುವ ವೇಳೆಯಲ್ಲಿ ರಾಂಪುರದಲ್ಲಿ ಎನ್ವೈ ಸಹೋದರರು `ವರುಣ ಯಾಗ~ ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಧೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.

ಶಾಸಕ ಎನ್.ವೈ. ಗೋಪಾಲಕೃಷ್ಣ ಮಾತನಾಡಿ, `ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ಎಲ್ಲಾ ರಂಗಗಳಲ್ಲಿಯೂ ಅತ್ಯಂತ ಹಿಂದುಳಿದ ಕ್ಷೇತ್ರವಾಗಿದೆ. ರೈತರು ಪೂರ್ಣವಾಗಿ ಮಳೆಯಾಶ್ರಿತ ಜೀವನ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಳೆ ಸತತವಾಗಿ ಕೈಕೊಡುತ್ತಿರುವ ಕಾರಣ ವರುಣಯಾಗ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮಾಜಿ ಸಂಸದ ಎನ್.ವೈ. ಹನುಮಂತಪ್ಪ ಮಾತನಾಡಿ, ಮಾನವ ಉತ್ತಮ ಮಾರ್ಗದಲ್ಲಿ ಸಾಗಿದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ, ಯಶಸ್ಸು, ಗುರಿ ಮುಟ್ಟಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾಗಲು ಮುಂದಾಗಬೇಕು ಎಂದು ಹೇಳಿದರು.

ಸ್ಥಳೀಯ ರುದ್ರಾಕ್ಷಿಮಠದ ಡಾ.ವೀರಭದ್ರ ಸ್ವಾಮೀಜಿ ಯಾಗ ಕಾರ್ಯದ ನೇತೃತ್ವ ವಹಿಸಿದ್ದರು.
ಮಾಜಿ ಸಚಿವ ಟಿ.ಬಿ. ಜಯಚಂದ್ರ, ಕೆಪಿಸಿಸಿ ಸದಸ್ಯ ಜಿ. ಬಾಲರಾಜ್, ನಿವೃತ್ತ ಡಿಸಿಪಿ ತಿಮ್ಮಪ್ಪ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸೇತೂರಾಂ, ಎನ್.ವೈ. ಪೆನ್ನೋಬಳ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಮಾರನಾಯಕ, ಮಾಜಿ ಜಿ.ಪಂ. ಸದಸ್ಯರಾದ ಪಾಪನಾಯಕ, ಮಹಾದೇವಪುರ ತಿಪ್ಪೇಸ್ವಾಮಿ, ವಕೀಲ ಆರ್.ಎಂ. ಅಶೋಕ್, ಯುವ ಕಾಂಗ್ರೆಸ್ ಅಧ್ಯಕ್ಷ ಬಿ. ಯೋಗೇಶ್ ಬಾಬು, ಬಷೀರ್, ಎಂ.ಡಿ. ಮಂಜುನಾಥ್, ಜಿ.ಪಂ. ಸದಸ್ಯ ಭಾಗ್ಯಮ್ಮ ತಿಪ್ಪೇಸ್ವಾಮಿ, ನರಸಮ್ಮ ಗೋವಿಂದಪ್ಪ, ರಾಮಾಂಜಿನೇಯಪ್ಪ, ರಶೀದ್, ಟೀಪೂಸಾಬ್, ಯೂಸಫ್, ಮುದಿಯಪ್ಪ ಉಪಸ್ಥಿತರಿದ್ದರು.

ಯಾಗ ಕಾರ್ಯದಲ್ಲಿ ಎಲ್ಲಾ ಧರ್ಮೀಯರು ಭಾಗವಹಿಸಿದ್ದು ವಿಶೇಷವಾಗಿತ್ತು.

ಧರ್ಮಪುರ ವರದಿ
ಇಲ್ಲಿಯವರೆಗೂ ಮಳೆಯಾಗದೆ ಕೃಷಿ ಚಟುವಟಿಕೆ ನಿಂತುಹೋಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ. ವರುಣ ದೇವನ ಕೃಪೆಗಾಗಿ ಇಲ್ಲಿನ ಮುಸ್ಲಿಮರು ಶುಕ್ರವಾರ ಐತಿಹಾಸಿಕ ಧರ್ಮಪುರ ಕೆರೆ ಅಂಗಳದಲ್ಲಿ ಸಾಮೂಹಿಕ ಪ್ರಾರ್ಥನೆಸಲ್ಲಿಸಿದರು.

ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ವರ್ಷಗಳಿಂದಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಧರ್ಮಪುರ ಹೋಬಳಿಯಲಲಿ ಸತತ 25 ವರ್ಷಗಳಿಂದ ಉತ್ತಮ ಮಳೆಯಾಗಿಲ್ಲ. ಇಲ್ಲಿಯ ರೈತರು ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಗುಳೇ ಹೋಗಿದ್ದಾರೆ. ಐತಿಹಾಸಿಕ ಧರ್ಮಪುರ ಕೆರೆಗೆ ಫೀಡರ್ ಚಾನಲ್ ಕನಸು ಚುನಾವಣೆಯ ಹೇಳಿಕೆಗೆ ಸೀಮಿತವಾಗಿದೆ. ಜಾನುವಾರು ಪರಿಸ್ಥಿತಿ ಹೇಳತೀರದು. ಈಗಾಗಲೇ ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಹೀಗಾಗಿ, ಮುನಿಸಿಕೊಂಡಿರುವ ಆ ವರುಣ ದೇವನ ಕೃಪೆಗಾಗಿ ನಾವೆಲ್ಲಾ ಇಂದು ಪ್ರಾರ್ಥನೆ ಮಾಡುತ್ತಿದ್ದೇವೆ ಎಂದು ಜಾಮೀಯಾ ಮಸೀದಿಯ ಮುತುವಲಿ ಬಾಷಾಸಾಬ್ ತಿಳಿಸಿದರು.

ಜಾಮೀಯಾ ಮಸೀದಿಯಲ್ಲಿ ಮಧ್ಯಾಹ್ನ 2ಕ್ಕೆ ಸಾಮೂಹಿಕ ಪ್ರಾರ್ಥನೆ ಮಾಡಿದ ಅವರು, ನಂತರ ಕೆರೆಯ ಅಂಗಳದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.