ಬೆಳಗಾವಿ: `ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಸರಬರಾಜು ಆಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಗ್ರಾಹಕರಿಗೆ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಯಾವುದೇ ರೀತಿ ವ್ಯತ್ಯಯ ಉಂಟಾಗದಂತೆ ಕಾರ್ಯ ನಿರ್ವಹಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ' ಎಂದು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಹೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಿಗೆ ನಿತ್ಯ ಒಟ್ಟು 1650 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ. ಈಗ ಗಾಳಿ ಉತ್ತಮವಾಗಿ ಬೀಸುತ್ತಿರುವುದರಿಂದ ಗಾಳಿ ವಿದ್ಯುತ್ ಯಂತ್ರಗಳಿಂದಲೇ ನಿತ್ಯ 350ರಿಂದ 450 ಮೆಗಾವ್ಯಾಟ್ ವಿದ್ಯುತ್ ನಮಗೆ ಲಭಿಸುತ್ತಿದೆ. ಬೆಳಗಾವಿ ನಗರಕ್ಕೆ ಒಟ್ಟು 130 ಮೆಗಾವ್ಯಾಟ್ ಬೇಡಿಕೆಯಿದ್ದು, ಈಗ 140 ಮೆಗಾವ್ಯಾಟ್ ಸರಬರಾಜು ಆಗುತ್ತಿದೆ. ಹೀಗಾಗಿ ಲೋಡ್ಶೆಡ್ಡಿಂಗ್ ಮಾಡಲಾಗುತ್ತಿಲ್ಲ. ಆದರೆ, ಮಳೆಗಾಲದಲ್ಲಿ ಟ್ರಾನ್ಸ್ಫಾರ್ಮರ್ ಸುಡುವುದು, ವಿದ್ಯುತ್ ಕಂಬ ಬೀಳುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ' ಎಂದು ತಿಳಿಸಿದರು.

`ಮಳೆಗಾಲದಲ್ಲಿ ಗಿಡ- ಮರಗಳು ಬಿದ್ದು ಹಾಗೂ ಬೀರುಗಾಳಿಯಿಂದ ವಿದ್ಯುತ್ ಪೂರೈಕೆಯಲ್ಲಿ ಮೇಲಿಂದ ಮೇಲೆ ತೊಂದರೆಯಾಗುತ್ತಿದೆ. ಈ ಸಂದರ್ಭದಲ್ಲಿ ತ್ವರಿತ ಕಾರ್ಯಾಚರಣೆ ನಡೆಸಲು ಪ್ರತಿಯೊಂದು ಹೆಸ್ಕಾಂ ಉಪವಿಭಾಗೀಯ ಕಚೇರಿಯಲ್ಲಿ 20 ಗ್ಯಾಂಗ್ಮನ್ ಒಳಗೊಂಡ ತುರ್ತು ಪರಿಹಾರ ತಂಡಗಳನ್ನು ರಚಿಸಲಾಗಿದೆ. ಅಗತ್ಯ ಬಿದ್ದರೆ, ಇನ್ನೂ 20 ಖಾಸಗಿ ಗ್ಯಾಂಗ್ಮನ್ಗಳನ್ನು ನೇಮಿಸಿಕೊಳ್ಳಲು ಉಪವಿಭಾಗೀಯ ಎಂಜಿನಿಯರ್ಗೆ ಅಧಿಕಾರ ನೀಡಲಾಗಿದೆ. ಪ್ರತಿ ಉಪ ವಿಭಾಗಕ್ಕೆ ಒಂದು ದಿನದ 24 ಗಂಟೆಗಳ ಕಾಲ ಕೆಲಸ ಮಾಡುವ ಏಣಿ ಒಳಗೊಂಡಿರುವ ಒಂದು ಮೊಬೈಲ್ ವ್ಯಾನ್ ಒದಗಿಸಲಾಗಿದೆ. ಬೆಳಗಾವಿ ನಗರದಲ್ಲಿ 30 ಹೆಚ್ಚುವರಿ ಗ್ಯಾಂಗ್ಮನ್ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಗತ್ಯ ಬಿದ್ದರೆ, ಇನ್ನೂ 30 ಜನರನ್ನು ನೇಮಿಸಿಕೊಳ್ಳಲಾಗುವುದು' ಎಂದು ತಿಳಿಸಿದರು.

`ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಏಪ್ರಿಲ್- ಮೇ ತಿಂಗಳಿನಲ್ಲಿ ವಿದ್ಯುತ್ ತಂತಿಗಳ ಸಮೀಪದ ಮರಗಳ ಟೊಂಗೆಗಳನ್ನು ಕತ್ತರಿಸಿರಲಿಲ್ಲ. ಹೀಗಾಗಿ ಈಗ ಮಳೆ ಆರಂಭವಾಗಿದ್ದರಿಂದ ನಗರದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ. ಈಗಾಗಲೇ ಟೊಂಗೆ ಕಡಿಯುವ ಕೆಲಸ ನಡೆಯುತ್ತಿದ್ದು, ಒಂದು ವಾರದೊಳಗೆ ಪೂರ್ಣಗೊಳ್ಳಲಿದೆ' ಎಂದು ಚೋಳನ ತಿಳಿಸಿದರು.

ಟ್ರಾನ್ಸ್ಫಾರ್ಮರ್ ಸಮಸ್ಯೆ: `ಮಳೆಗಾಲ ಆರಂಭವಾದಾಗಿನಿಂದ ಜಿಲ್ಲೆಯಲ್ಲಿ ಒಟ್ಟು 298 ಟ್ರಾನ್ಸ್ಫಾರ್ಮರ್ಗಳು ಸುಟ್ಟು ಹೋಗಿವೆ. 1,014 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಇದರಿಂದಾಗಿ ್ಙ 2.88 ಕೋಟಿ ಹಾನಿಯಾಗಿದೆ. ಬೆಳಗಾವಿ ನಗರದಲ್ಲಿ 28 ಟ್ರಾನ್ಸ್ಫಾರ್ಮರ್ ಹಾಳಾಗಿದ್ದು, 35 ವಿದ್ಯುತ್ ಕಂಬ ಬಿದ್ದಿದ್ದವು' ಎಂದು ಮಾಹಿತಿ ನೀಡಿದರು.

`ಮಳೆಗಾಲದಲ್ಲಿ ಟ್ರಾನ್ಸ್ಫಾರ್ಮರ್ ಹಾಳಾದಾಗ ತ್ವರಿತವಾಗಿ ಬದಲಾವಣೆ ಮಾಡಲು 1000 ಟ್ರಾನ್ಸ್ಫಾರ್ಮರ್ಗಳನ್ನು ಸಂಗ್ರಹಿಸಿ ಇಡಲಾಗಿದೆ. ಇದರ ಜೊತೆಗೆ ಇನ್ನೂ 1500 ಟ್ರಾನ್ಸ್ಫಾರ್ಮರ್ಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ತ್ವರಿತವಾಗಿ ವಿದ್ಯುತ್ ಪೂರೈಕೆ ಮಾಡಲು ಯಾವುದೇ ಸಲಕರಣೆಗಳ ಕೊರತೆ ಇಲ್ಲ' ಎಂದು ಅವರು ಸ್ಪಷ್ಟಪಡಿಸಿದರು.

`ಹೆಸ್ಕಾಂ ವ್ಯಾಪ್ತಿಯಲ್ಲಿ 2012-13ನೇ ಸಾಲಿನಲ್ಲಿ 14,000 ಟ್ರಾನ್ಸ್ಫಾರ್ಮರ್ ಹಾಳಾಗಿತ್ತು. ಪ್ರತಿ ತಿಂಗಳು ಸರಾಸರಿ 1,200 ಟ್ರಾನ್ಸ್ಫಾರ್ಮರ್ ಕೆಡುತ್ತಿದ್ದವು. ನೋಂದಾಯಿಸಿ ಕೊಂಡದ್ದಕ್ಕಿಂತಲೂ ಹೆಚ್ಚಿನ ಪಂಪ್ಸೆಟ್ಗಳನ್ನು ಬಳಸುತ್ತಿರುವುದರಿಂದ ಟ್ರಾನ್ಸ್ಫಾರ್ಮರ್ ಕೆಡುತ್ತಿವೆ. ಚಿಕ್ಕೋಡಿ, ಬಾಗಲಕೋಟೆ, ವಿಜಾಪುರಗಳಲ್ಲಿ ಟ್ರಾನ್ಸ್ಫಾರ್ಮರ್ಗಳ ಬೇಡಿಕೆ ಹೆಚ್ಚಿದೆ' ಎಂದು ವಿವರಿಸಿದರು.

`ಗ್ರಾಮೀಣ ಪ್ರದೇಶಗಳಲ್ಲಿ ಟ್ರಾನ್ಸ್ಫಾರ್ಮರ್ ಸುಟ್ಟ 7ರಿಂದ 10 ದಿನಗಳಲ್ಲಿ ಹೊಸದನ್ನು ಹಾಕಲಾಗುವುದು. ನಗರದ ಪ್ರದೇಶಗಳಲ್ಲಿ 24 ಗಂಟೆಯೊಳಗೆ ಬದಲಾಯಿಸಿ, ವಿದ್ಯುತ್ ನೀಡಲಾಗುವುದು. ವಿದ್ಯುತ್ ಟ್ರಾನ್ಸ್ಫಾರ್ಮರ್ ಸುಟ್ಟ ಕಡೆ ಕಾರ್ಯನಿರ್ವಾಹಕ ಎಂಜಿನಿಯರ್ಗಳು ಸ್ಥಳಕ್ಕೆ ಭೇಟಿ ನೀಡಿ, ಕೂಡಲೇ ಪರ್ಯಾಯ ವ್ಯವಸ್ಥೆ ಕೈಗೊಳ್ಳದಿದ್ದರೆ, ಶಿಸ್ತು ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.

`ನೆರೆಹಾವಳಿ ಬಂದಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳಲು 25 ಕೋಟಿ ರೂಪಾಯಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಜನರಿಗೆ ತ್ವರಿತವಾಗಿ ವಿದ್ಯುತ್ ಪೂರೈಸಲು ಹೆಸ್ಕಾಂ ಬದ್ಧವಾಗಿದೆ' ಎಂದು ಚೋಳನ ತಿಳಿಸಿದರು.

`ಹೊಸ ಸಂಪರ್ಕಕ್ಕೆ ಆನ್ಲೈನ್ನಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ನಿಗದಿತ ದಿನದೊಳಗೆ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ನೀಡದಿದ್ದರೆ, ಅಧಿಕಾರಿಗಳಿಗೆ ದಂಡ ವಿಧಿಸಲಾಗುವುದು' ಎಂದು ಎಚ್ಚರಿಸಿದರು.

`ಹೆಸ್ಕಾಂನ ಗ್ಯಾಂಗ್ಮನ್ಗಳಿಗೆ ಸುರಕ್ಷಿತ ಉಪಕರಣ ನೀಡಲು ಆದ್ಯತೆ ನೀಡಲಾಗುತ್ತಿದೆ. ಇದಕ್ಕಾಗಿ 5 ಲಕ್ಷ ರೂಪಾಯಿ ಖರ್ಚು ಮಾಡಲು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗಳಿಗೆ 5 ಲಕ್ಷ ರೂಪಾಯಿ ನೀಡಲಾಗುತ್ತದೆ' ಎಂದು ತಿಳಿಸಿದರು. ಹೆಸ್ಕಾಂನ ಬೆಳಗಾವಿ ವಲಯದ ಮುಖ್ಯ ಎಂಜಿನಿಯರ್ ರಾಜಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್ಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.