ಜಾತಿ, ಮತ, ಬಡವ, ಶ್ರೀಮಂತ ಮತ್ತು ವಯಸ್ಸಿನ ಭಿನ್ನವಿಲ್ಲದೇ ಸಾಲುಪಂಕ್ತಿಯಲ್ಲಿ ಕುಳಿತ ನೂರಾರು ಭಕ್ತರು, ಪ್ರತಿಯೊಬ್ಬರ ಮುಂದೆ ಅಡಿಕೆ ಎಲೆಯಿಂದ ಮಾಡಿದ ತಟ್ಟೆ, ಅದರಲ್ಲೊಂದು ಮುದ್ದೆ, ಸೊಪ್ಪಿನ ಸಾಂಬಾರು, ಸೇವಿಸಿದವರ ಬಾಯಲ್ಲಿ ಅಬ್ಬಾ ಎಂಥ ಪ್ರಸಾದ? ಎಂದು ಬಾಯಿ ಚಪ್ಪರಿಸಿದ ದೃಶ್ಯ ಸೋಮವಾರ ಅಜ್ಜಂಪುರದ ಗುರುಸಿದ್ದರಾಮೇಶ್ವರ ಸ್ವಾಮಿ ಮಠದ ಆವರಣದಲ್ಲಿ ನಡೆದ ಮುದ್ದೆ ಪರೇವುನಲ್ಲಿ ಕಂಡು ಬಂತು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಜ್ಜಂಪುರ ಸಾಂಸ್ಕೃತಿಕ, ಅಧ್ಯಾತ್ಮಿಕ, ಧಾರ್ಮಿಕ, ದೈವತ್ವದ ಒಂದಿಲ್ಲೊಂದು ಸಾಂಪ್ರದಾಯಿಕ ಆಚರಣೆಗಳಲ್ಲಿ ಸದಾ ಕ್ರಿಯಾಶೀಲವಾಗಿರುವ ಗ್ರಾಮ. ಇಲ್ಲಿ ನಡೆಯುವ ಒಂದೊಂದು ಆಚರಣೆಗಳು ತನ್ನದೇ ಆದ ರೀತಿ, ನೀತಿ, ನಿಯಮ, ಸಂಪ್ರದಾಯ, ಸಂದೇಶವನ್ನು ಒಳಗೊಂಡು ವಿಭಿನ್ನವಾಗಿರುವುದು ವಿಶೇಷ. ಹಾಗೆಯೇ ಇಲ್ಲಿ ಸೋಮವಾರ ನಡೆದ ಕುಂಭಾಭಿಷೇಕ ಪಟ್ಟಣದ ಜನರಲ್ಲಿ ಹಬ್ಬದ ವಾತವಾರಣ ಮೂಡಿಸಿದ್ದು ಸತ್ಯ.

ಪ್ರತೀ ವರ್ಷ ರೈತರು ಬಿತ್ತನೆಯ ನಂತರ ಮಳೆರಾಯ ವರುಣ ದೇವನಿಗೆ ಕುಂಭಾಭಿಷೇಕ ನಡೆಸುವುದು ಇಲ್ಲಿನ ವಾಡಿಕೆ. ಹಾಗೆ ಮಾಡುವಾಗ ಈ ಭಾಗದ ಮಳೆ ತರುವ ದೇವರೆಂದೇ ಪ್ರಸಿದ್ಧಿ ಪಡೆದಿರುವ, ಅನೇಕ ಜಿಲ್ಲೆಗಳಲ್ಲಿ ತನ್ನದೇ ಆದ ಭಕ್ತಸಮೂಹ ಹೊಂದಿರುವ ಹಾಗೂ ರೈತರ ಪಾಲಿನ ಆರಾಧ್ಯ ದೈವ ಎನಿಸಿರುವ ಸೊಲ್ಲಾಪುರದ ಸಿದ್ದರಾಮೇಶ್ವರ ಸ್ವಾಮಿಯನ್ನು ಕರೆತರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಆಗಮಿಸಿದ ಸ್ವಾಮಿಯನ್ನು ಬರಮಾಡಿಕೊಳ್ಳುವುದರಿಂದ ಹಿಡಿದು ಕುಂಭಾಭಿಷೇಕ ಸಂಪೂರ್ಣಗೊಳ್ಳುವವರೆಗೂ ಗ್ರಾಮದ ಬೀರಲಿಂಗೇಶ್ವರ, ಗ್ರಾಮದೇವತೆ ಕಿರಾಳಮ್ಮ, ಚೌಡಮ್ಮ ಜತೆಯಲ್ಲಿರುವುದು ನಡೆದು ಬಂದಿದೆ. ಗ್ರಾಮಸ್ಥರು ಗೌಡನ ಬಾವಿಗೆ ತೆರಳಿ ಅಲ್ಲಿ ಗಂಗಾಪೂಜೆ ನಡೆಸುವರು. ಬಳಿಕ ಮಹಿಳೆಯರು ಮಕ್ಕಳು ಸೇರಿದಂತೆ ಗ್ರಾಮದ ನೂರೊಂದು ಜನ ಕುಂಭ ಹೊತ್ತು ನಡೆಮುಡಿಯೊಂದಿಗೆ ಈಶ್ವರ ದೇವಾಲಯಕ್ಕೆ ನಡೆಯುವರು. ಈ ಮೆರವಣಿಗೆಯಲ್ಲಿ ನಗಾರಿಹೊತ್ತು ಬಣ್ಣ-ಬಣ್ಣದ ಬಟ್ಟೆ ಹೊದ್ದ ಬಸವಣ್ಣ ಮಂಚೂಣಿಯಲ್ಲಿ ಗಾಂಭೀರ್ಯದಿಂದ ಹೆಚ್ಚೆ ಹಾಕುತ್ತಿದ್ದರೆ, ವಿವಿಧ ದೇವರ ಉತ್ಸವ ಮೂರ್ತಿಗಳು ಹಿಂದೆಸಾಗುತ್ತವೆ.

ಉತ್ತಮ ಮಳೆ ಸುರಿಸಿ, ಸಮೃದ್ಧ ಬೆಳೆ ನೀಡುವಂತೆ ಪ್ರಾರ್ಥಿಸಿ, ಸ್ವಾಮಿಗೆ ಕುಂಭಾಭಿಷೇಕ ಅರ್ಪಿಸಿ, ರುದ್ರಾಭಿಷೇಕ ಮಾಡಿದರು. ರೈತಾಪಿ ಜನರಲ್ಲದೇ ಗ್ರಾಮದ ಸುತ್ತಮುತ್ತಲ ನೂರಾರು ಭಕ್ತರು ಮೆರವಣಿಗೆ ಸಂದರ್ಭ ದೇವರಿಗೆ ಕರ್ಪೂರ ಹಚ್ಚಿ, ಹೂ ಹಣ್ಣು ನೀಡಿ ಪೂಜಿಸುವುದು ಸಾಮಾನ್ಯ. ಈ ಸಂದರ್ಭ ಡೊಳ್ಳು ಕಣಿತ, ವೀರಗಾಸೆ ನೃತ್ಯ ಮತ್ತು ವೀರಗಾಸೆ ಪದಗಳು, ಡ್ರಮ್ಸೆಟ್, ದೇವರ ಛತ್ರಿ, ಚಾಮರಗಳು ಗಮನ ಸೆಳೆದವು.

ಕುಂಭಾಭಿಷೇಕದ ವಿಶೇಷವೆಂದರೆ ರೈತಾಪಿ ಗ್ರಾಮಸ್ಥರು ಆರಾಧ್ಯ ದೇವನಿಗೆ ಬೆಳೆದ ದವಸ, ಧಾನ್ಯ ನೀಡುವರು. ಹೀಗೆ ಸಂಗ್ರಹಿಸಿದ ಧಾನ್ಯಗಳಿಂದ ಎಲ್ಲರೂ ಸೇರಿ ಸಿದ್ದರಾಮೇಶ್ವರ ಮಠದ ಆವರಣದಲ್ಲಿ ಸಾಮೂಹಿಕವಾಗಿ ಮುದ್ದೆ, ಅನ್ನ, ಸಾಂಬಾರ್ ಅಡುಗೆ ಸಿದ್ಧಪಡಿಸಿ, ದೇವರಿಗೆ ನೈವೇದ್ಯ ಮಾಡುವರು. ನಂತರ ಸಾಲು ಪಂಕ್ತಿಯಲ್ಲಿ ಕುಳಿತು ಪ್ರಸಾದ ಸ್ವೀಕರಿಸಿ, ಧನ್ಯರಾಗುವರು.

`ಈ ಆಚರಣೆ ಹಿಂದಿನಿಂದಲೂ ಬಂದಿದ್ದು, ಹೀಗೆ ಮಾಡಿದಾಗಲೆಲ್ಲಾ ವರುಣ ಸಂತೃಷ್ಟಗೊಂಡು, ಉತ್ತಮ ಮಳೆ ನೀಡಿದ ಉದಾಹರಣೆಗಳಿದ್ದು, ಸೊಲ್ಲಾಪುರದ ಸಿದ್ದರಾಮಸ್ವಾಮಿ ನಮ್ಮ ನಿಷ್ಕಲ್ಮಶ ಭಕ್ತಿ ಬಾವಕ್ಕೆ ಮೆಚ್ಚಿ ಮಳೆ ತರುವ ನಂಬಿಕೆಯಿದ್ದು, ಅದರಂತೆ ಪ್ರತೀ ವರ್ಷ ಕುಂಭಾಭಿಷೇಕ ನಡೆಸಲಾಗುತ್ತದೆ' ಎಂದು ಸಂಚಾಲಕ ಶ್ರೀನಿವಾಸ್, ಗೌಡ್ರು ಪರಮೇಶ್ವರಪ್ಪ ತಿಳಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.