ಮಳೆರಾಯನಿಗೆ ಕುಂಭಾಭಿಷೇಕ ಭಕ್ತರಿಗೆ ಮುದ್ದೆಸಾರು ಸಾಲುಪಂಕ್ತಿ ಊಟ
ಜಾತಿ, ಮತ, ಬಡವ, ಶ್ರೀಮಂತ ಮತ್ತು ವಯಸ್ಸಿನ ಭಿನ್ನವಿಲ್ಲದೇ ಸಾಲುಪಂಕ್ತಿಯಲ್ಲಿ ಕುಳಿತ ನೂರಾರು ಭಕ್ತರು, ಪ್ರತಿಯೊಬ್ಬರ ಮುಂದೆ ಅಡಿಕೆ ಎಲೆಯಿಂದ ಮಾಡಿದ ತಟ್ಟೆ, ಅದರಲ್ಲೊಂದು ಮುದ್ದೆ, ಸೊಪ್ಪಿನ ಸಾಂಬಾರು, ಸೇವಿಸಿದವರ ಬಾಯಲ್ಲಿ ಅಬ್ಬಾ ಎಂಥ ಪ್ರಸಾದ? ಎಂದು ಬಾಯಿ ಚಪ್ಪರಿಸಿದ ದೃಶ್ಯ ಸೋಮವಾರ ಅಜ್ಜಂಪುರದ ಗುರುಸಿದ್ದರಾಮೇಶ್ವರ ಸ್ವಾಮಿ ಮಠದ ಆವರಣದಲ್ಲಿ ನಡೆದ ಮುದ್ದೆ ಪರೇವುನಲ್ಲಿ ಕಂಡು ಬಂತು.Last Updated 23 ಜೂನ್ 2013, 6:51 IST