ಬೆಂಗಳೂರು: ರಾಜ್ಯದ ಕರಾವಳಿಯಲ್ಲಿ ಬಿರುಸಿನ ಮಳೆ ಸೋಮವಾರ ಮುಂದುವರಿದಿದೆ. ಮಲೆನಾಡು ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿಟ್ಟು ಬಿಟ್ಟು ಬಿರುಸಿನ ಮಳೆ ಸುರಿದಿದೆ. ಜಿಲ್ಲೆಯ ಹಲವೆಡೆ ಮನೆ ಕುಸಿದ, ಮರ ಉರುಳಿ ಹಾನಿ ಸಂಭವಿಸಿದ ವರದಿಯಾಗಿದೆ. ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ಮಂಗಳೂರಿನ ಅತ್ತಾವರದಲ್ಲಿ ಮಹಿಳೆಯೊಬ್ಬರು ಮಳೆ ನೀರಲ್ಲಿ ಕೊಚ್ಚಿ ಹೋಗಿದ್ದಾರೆ.

ಅತ್ತಾವರ ಪುಣಿ ನಿವಾಸಿ ವಿಮಲ (50) ಅವರು ಭಾರಿ ಮಳೆ ಬರುತ್ತಿದ್ದಾಗ ಮನೆಯ ಸಮೀಪದಲ್ಲೇ ಹರಿಯುತ್ತಿದ್ದ ತೋಡು ದಾಟಲು ಯತ್ನಿಸಿದರು. ನೀರಿನ ರಭಸಕ್ಕೆ ಆಯತಪ್ಪಿ ಕೆಳಗೆ ಬಿದ್ದ ಅವರು ನೀರಲ್ಲಿ ಕೊಚ್ಚಿ ಹೋದರು. ಅಕ್ಕಪಕ್ಕದ ಜನರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರ ಮೃತದೇಹ ಹಳೆ ಬಂದರು ಪ್ರದೇಶದಲ್ಲಿ ಬಳಿಕ ಪತ್ತೆಯಾಯಿತು.

ಮಂಗಳೂರು ತಾಲ್ಲೂಕಿನ ಬಜಾಲ್, ಸೋಮೇಶ್ವರ, ಮೂಲ್ಕಿ ಹಾಗೂ ಕಾಟಿಪಳ್ಳಗಳಲ್ಲಿ 4 ಮನೆಗಳು ಭಾಗಶಃ ಕುಸಿದಿದ್ದು, ಸುಮಾರು 1 ಲಕ್ಷ ರೂಪಾಯಿಗಳಷ್ಟು ಹಾನಿ ಸಂಭವಿಸಿದೆ.

ಬಂಟ್ವಾಳ ತಾಲ್ಲೂಕಿನ ಮಾಣಿಯಲ್ಲಿ ಭಾನುವಾರ ರಾತ್ರಿ ಬೃಹತ್ ಮಾವಿನ ಮರವೊಂದು ಉರುಳಿಬಿದ್ದು ಸಂತೆ ಮಾರುಕಟ್ಟೆಯ ಕಟ್ಟಡ ಹಾಗೂ ನಾಲ್ಕು ಅಂಗಡಿಗಳಿಗೆ ಹಾನಿಯಾಗಿದೆ.

ಜಿಲ್ಲೆಯಲ್ಲಿ ಜನವರಿಯಿಂದೀಚೆಗೆ ಸರಾಸರಿ 444.9 ಮಿ.ಮೀ. ಮಳೆ ಸುರಿದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 165.4 ಮಿ.ಮೀ. ಮಳೆಯಾಗಿತ್ತು. ಜಿಲ್ಲೆಯಲ್ಲಿ ವಾರ್ಷಿಕ 3912.2 ಮಿ.ಮೀ. ವಾಡಿಕೆ ಮಳೆ ಸುರಿಯುತ್ತದೆ.

ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಸರಾಸರಿ 45.3 ಮಿಲಿ ಮೀಟರ್ ಮಳೆಯಾಗಿದೆ. ಮೂಡನಿಡಂಬೂರು, ಅಂಬಲಪಾಡಿಯಲ್ಲಿ ಮನೆ ಮೇಲೆ ಮರ ಬಿದ್ದು 50 ಸಾವಿರ ರೂಪಾಯಿಗಳಷ್ಟು ಹಾನಿಯಾಗಿದೆ. ಕೊಡವೂರಿನಲ್ಲಿ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು, 20 ಸಾವಿರ ರೂಪಾಯಿ ನಷ್ಟವಾಗಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ. ಹೆಚ್ಚಿನ ಹಾನಿಯ ವರದಿಯಾಗಿಲ್ಲ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಉತ್ತಮ ಹಾಗೂ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಧಾರವಾಡ ಸುತ್ತಮುತ್ತ, ಹಾವೇರಿ ಜಿಲ್ಲೆಯಲ್ಲಿ ಹಾಗೂ ಬೆಳಗಾವಿ ಜಿಲ್ಲೆಯ ಬೆಳಗಾವಿ, ಚಿಕ್ಕೋಡಿ, ಖಾನಾಪುರ ಮತ್ತು ರಾಯಬಾಗ ತಾಲ್ಲೂಕುಗಳ್ಲ್ಲಲಿ ಮಳೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿದಿದೆ. ಮಡಿಕೇರಿಯಲ್ಲಿ ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿತ್ತು. ನಾಪೋಕ್ಲು, ಸಂಪಾಜೆ, ಭಾಗಮಂಡಲ, ವಿರಾಜಪೇಟೆ, ಹುದಿಕೇರಿ, ಶ್ರಿಮಂಗಲ, ಪೊನ್ನಂಪೇಟೆ, ಶನಿವಾರಸಂತೆ, ಶಾಂತಳ್ಳಿ, ಕೊಡ್ಲಿಪೇಟೆ, ಕುಶಾಲನಗರ, ಸುಂಟಿಕೊಪ್ಪದಲ್ಲಿ ಕೂಡ ಮಳೆಯಾಗಿದೆ.

ಸೋಮವಾರ ಬೆಳಿಗ್ಗೆ 8.30ಕ್ಕೆ ಅಂತ್ಯಗೊಂಡಂತೆ 24 ಗಂಟೆಯ ಅವಧಿಯಲ್ಲಿ 11.56 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ವೇಳೆಗೆ 4.21 ಮಿ.ಮೀ. ಮಳೆ ದಾಖಲಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 278.32 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 233.22 ಮಿ.ಮೀ. ಮಳೆ ದಾಖಲಾಗಿತ್ತು.

ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಸೋಮವಾರದ ನೀರಿನಮಟ್ಟ 2,802.41 ಅಡಿ. ಕಳೆದ ವರ್ಷ ಇದೇ ದಿನ 2,803.93 ಅಡಿ ನೀರಿತ್ತು.

ಹಾರಂಗಿ ಜಲಾನಯನ ಪ್ರದೇಶದಲ್ಲಿ ಸೋಮವಾರ 4.60 ಮಿ.ಮೀ. ಮಳೆಯಾಗಿದೆ. ಇಂದಿನ ನೀರಿನ ಒಳ ಹರಿವು 399 ಕ್ಯೂಸೆಕ್ ಆಗಿದೆ. ಕಳೆದ ವರ್ಷ ಇದೇ ದಿನ ನೀರಿನ ಒಳಹರಿವಿನ ಪ್ರಮಾಣ 23 ಕ್ಯೂಸೆಕ್ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.