ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಅಂಗನವಾಡಿ ಮತ್ತು ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಗುರುವಾರ ಮಳೆ ಆರ್ಭಟಿಸಿದೆ. ಮಡಿಕೇರಿ, ಸಂಪಾಜೆ, ಭಾಗಮಂಡಲ, ವೀರಾಜಪೇಟೆ, ಹುದಿಕೇರಿ, ಶ್ರಿಮಂಗಲ, ಸೋಮವಾರಪೇಟೆ, ಶನಿವಾರಸಂತೆ, ಶಾಂತಳ್ಳಿ, ಕೊಡ್ಲಿಪೇಟೆಯಲ್ಲಿ ಉತ್ತಮ ಮಳೆ ಸುರಿದಿದೆ.

ಜುಲೈ ತಿಂಗಳಲ್ಲಿ ಆರಂಭವಾಗಿರುವ ಪುನರ್ವಸು ಮಳೆ ತನ್ನ ಆರ್ಭಟವನ್ನು ಹೆಚ್ಚಿಸಿದೆ. ಮಳೆಯ ಆರ್ಭಟಕ್ಕೆ ಹಲವು ಪ್ರದೇಶಗಳಲ್ಲಿ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿತ್ತು.

ಮಳೆಯ ಪರಿಣಾಮವಾಗಿ ಸೋಮವಾರಪೇಟೆಯಲ್ಲಿ ಮನೆ ಜಖಂಗೊಂಡಿದೆ. ಹಲವು ಪ್ರದೇಶಗಳಲ್ಲಿ ಮಳೆಯ ಅಬ್ಬರಕ್ಕೆ ಬರೆ ಕುಸಿತ, ವಿದ್ಯುತ್ ಸಮಸ್ಯೆ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಯಾವುದೇ ಸಾವು ನೋವು ಸಂಭವಿಸಿಲ್ಲ.

ಮಡಿಕೇರಿಯಲ್ಲೂ ಮಳೆಯ ಅಬ್ಬರ ಗುರುವಾರ ಜೋರಾಗಿತ್ತು. ಬೆಳಿಗ್ಗೆ ವೇಳೆಯಿಂದಲೇ ಆರಂಭವಾದ ಮಳೆ ಸಾಧಾರಣವಾಗಿತ್ತು. ಮಧ್ಯಾಹ್ನದ ವೇಳೆಗೆ ತನ್ನ ಆರ್ಭಟ ಹೆಚ್ಚಿಸಿದ ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿತು.

ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಚರಂಡಿಯ ನೀರು ತುಂಬಿ ಹರಿದ ಹಿನ್ನೆಲೆಯಲ್ಲಿ ಮಳೆಯ ನೀರು ರಸ್ತೆಯ ಮೇಲೆ ಹರಿದಿದೆ.

ಮಳೆಯ ವಿವರ: ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆ ಅವಧಿ ಅಂತ್ಯಗೊಂಡಂತೆ 24 ಗಂಟೆಯಲ್ಲಿ 30.61 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 19.27ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1602.1 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 732.89 ಮಿ.ಮೀ. ಮಳೆ ದಾಖಲಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ 33.75 ಮಿ.ಮೀ., ವೀರಾಜಪೇಟೆ ತಾಲ್ಲೂಕಿನಲ್ಲಿ 28.37 ಮಿ.ಮೀ., ಸೋಮವಾರಪೇಟೆ ತಾಲ್ಲೂಕಿನಲ್ಲಿ 29.7 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2857.02 ಅಡಿಗಳು, ಕಳೆದ ವರ್ಷ ಇದೇ ದಿನ 2828.64 ಅಡಿ ನೀರು ಸಂಗ್ರಹವಾಗಿತ್ತು. ಹಾರಂಗಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ 13.6 ಮಿ.ಮೀ. ಮಳೆ ಸುರಿದಿದೆ. ಜಲಾಶಯಕ್ಕೆ ಇಂದಿನ ನೀರಿನ ಒಳ ಹರಿವು 13,970 ಕ್ಯೂಸೆಕ್ ಆಗಿದೆ. ಇಂದಿನ ನೀರಿನ ಹೊರ ಹರಿವು ನದಿಗೆ 10,400 ಕ್ಯೂಸೆಕ್, ನಾಲೆಗೆ 750 ಕ್ಯೂಸೆಕ್ ಆಗಿದೆ.

ಚುರುಕುಗೊಂಡ ಬಿತ್ತನೆ ಕಾರ್ಯ
ಕೊಡಗಿನಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಜಿಲ್ಲೆಯಲ್ಲಿ ಮುಸುಕಿನ ಜೋಳ ಬಿತ್ತನೆ ಕಾರ್ಯವು 3500 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 3,340 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಮಕೃಷ್ಣ ತಿಳಿಸಿದ್ದಾರೆ.

ಜುಲೈ 15ರಿಂದ ಶುರುವಾಗಿರುವ ಬತ್ತದ ನಾಟಿ ಕಾರ್ಯ 35 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 2700 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ. ಮಡಿಕೇರಿ ತಾಲ್ಲೂಕಿನಲ್ಲಿ 8 ಸಾವಿರ ಹೆಕ್ಟೇರ್ ಪ್ರದೇಶ ಗುರಿಯಲ್ಲಿ 100 ಹೆಕ್ಟೇರ್, ಸೋಮವಾರಪೇಟೆ ತಾಲ್ಲೂಕಿನಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 1975 ಹೆಕ್ಟೇರ್ ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ 16 ಸಾವಿರ ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 530 ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ನಾಟಿ ಕಾರ್ಯವಾಗಿದೆ.

ಧಾರಾಕಾರ ಮಳೆಯಿಂದ ಸೋಮವಾರಪೇಟೆ ಭಾಗದಲ್ಲಿ 2.1 ಹೆಕ್ಟೇರ್ ಪ್ರದೇಶದಲ್ಲಿ ಬತ್ತ ನಾಟಿ ಹಾನಿಯಾಗಿದ್ದು, ಸುಮಾರು 12,645 ರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ರೈತರು ಬತ್ತದ ಬಿತ್ತನೆ ಮಾಡಬೇಕಿದ್ದಲ್ಲಿ ಅಲ್ಪಾವಧಿ ತಳಿಯ (ಐ.ಆರ್.64, ಹೈಬ್ರಿಡ್ ಬತ್ತದ ತಳಿ) ಬತ್ತವನ್ನು ಸಸಿಮಡಿ ಮಾಡುವಂತೆ ಕೃಷಿ ಇಲಾಖೆ ಕೋರಿದೆ.

ಸಹಾಯಧನ: ಬತ್ತ ನಾಟಿ ಯಂತ್ರ ಪಡೆಯಲು ಕೃಷಿ ಇಲಾಖೆಯಿಂದ ಸಹಾಯಧನದ ಸೌಲಭ್ಯವಿದ್ದು, ಆಸಕ್ತ ರೈತರು ಹತ್ತಿರದ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ನಿರಂತರ ಮಳೆ: ಕುಸಿದ ಮೈದಾನ
ಸೋಮವಾರಪೇಟೆ: ತಾಲ್ಲೂಕಿನ ವಿವಿಧೆಡೆ ಗುರುವಾರ ಕೂಡ ಉತ್ತಮ ಮಳೆಯಾಗಿದೆ. ಎರಡು ದಿನಗಳಿಂದ ಮಳೆ ತುಸು ಬಿಡುವು ನೀಡಿದ್ದರಿಂದ ಜನ ಉಲ್ಲಾಸದಲ್ಲಿದ್ದರು. ರೈತರು ಕೃಷಿ ಚಟುವಟಿಕೆಗಳಿಗೆ ಮುಂದಾಗಿದ್ದರು. ಆದರೆ, ಮತ್ತೆ ಮಳೆ ಆರಂಭವಾಗಿದ್ದರಿಂದ ರೈತರಿಗೆ ನಿರಾಸೆಯಾಗಿದೆ.

ನಿರಂತರ ಮಳೆಯಿಂದಾಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದ ಒಂದು ಮೂಲೆ ಕುಸಿದಿದೆ.

ಈಗಾಗಲೇ ಕಾಫಿ ಗಿಡಗಳಿಗೆ ಕೊಳೆರೋಗ ಪ್ರಾರಂಭವಾಗಿದೆ. ಶೀತ ಇದೇ ರೀತಿ ಮುಂದುವರಿದಲ್ಲಿ ಎಲ್ಲ ಗಿಡಗಳಿಗೂ ವೇಗವಾಗಿ ಕೊಳೆರೋಗ ಹಬ್ಬುವ ಭೀತಿ ಇದೆ. ಕಾಫಿ ಗಿಡಗಳಲ್ಲಿ ಕಾಫಿ ಉದುರುತ್ತಿದ್ದು ಬೆಳೆಗಾರ ನಿರೀಕ್ಷಿತ ಫಸಲು ಪಡೆಯುವುದು ಅನುಮಾನಕ್ಕೆ ಎಡೆಮಾಡಿದೆ. ಗದ್ದೆಗಳಲ್ಲಿ ಸಸಿಮಡಿಗಳನ್ನು ತಯಾರು ಮಾಡಿಕೊಂಡಿರುವ ರೈತ ಮಳೆಯ ಬಿಡುವಿಗಾಗಿ ಕಾಯುತ್ತಿದ್ದಾನೆ.

ಕಳೆದ 24 ಗಂಟೆಗಳಲ್ಲಿ ತಾಲ್ಲೂಕು ವ್ಯಾಪ್ತಿಯ ಕೊಡ್ಲಿಪೇಟೆ ಹೋಬಳಿಯಲ್ಲಿ 52.4 ಮಿ.ಮೀ., ಕುಶಾಲನಗರದಲ್ಲಿ 2.2 ಮಿ.ಮೀ. ಮಳೆಯಾಗಿದೆ. ಉಳಿದಂತೆ ಶಾಂತಳ್ಳಿಯಲ್ಲಿ 36.6 ಮಿ.ಮೀ., ಸೋಮವಾರಪೇಟೆ 15.5 ಮಿ.ಮೀ., ಸುಂಟಿಕೊಪ್ಪಕ್ಕೆ 9 ಮಿ.ಮೀ., ಶನಿವಾರಸಂತೆಯಲ್ಲಿ 18 ಮಿ.ಮೀ. ಮಳೆಯಾದ ವರದಿಯಾಗಿದೆ.

ಪೊನ್ನಂಪೇಟೆ: ರಭಸದ ಮಳೆ
ಗೋಣಿಕೊಪ್ಪಲು: ಪಟ್ಟಣ ಹಾಗೂ ಸಮೀಪದ ಪೊನ್ನಂಪೇಟೆ ಸುತ್ತಮುತ್ತ ಗುರುವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣದಲ್ಲಿ ಲವಲವಿಕೆಯಿಂದ ಓಡಾಡಿದ ಜನ ಮಧ್ಯಾಹ್ನದ ವೇಳೆ ಮೋಡ ಕವಿದಿದ್ದರಿಂದ ಮನೆ ಸೇರಿಕೊಂಡರು.

ಬಿರುನಾಣಿ, ಪೂಕೊಳ, ಹುದಿಕೇರಿ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯಿತು. ಪೊನ್ನಂಪೇಟೆ, ಬೆಸಗೂರು, ಬಾಳೆಲೆ, ಗೋಣಿಕೊಪ್ಪಲು, ಅಮ್ಮತ್ತಿ, ಪಾಲಿಬೆಟ್ಟ ಭಾಗಕ್ಕೆ ಆಗ್ಗಾಗೆ ಬಿಡುವುಕೊಟ್ಟು ರಭಸದ ಮಳೆ ಬಿದ್ದಿತು.

ಇದರಿಂದ ಇಳಿಮುಖವಾಗಿದ್ದ ನದಿ ತೊರೆಗಳ ನೀರು ಮತ್ತೆ ಏರತೊಡಗಿದೆ. ಗದ್ದೆಗಳಲ್ಲಿ ನೀರು ಸಾಗರದಂತೆ ತುಂಬಿದೆ. ನಾಟಿ ಮಾಡಲು ನಲ್ಲೂರು, ಬೆಸಗೂರು, ಕಿರುಗೂರು ಮೊದಲಾದ ಭಾಗಗಳಲ್ಲಿ ಗದ್ದೆಗಳನ್ನು ಹದಮಾಡುವ ಕಾರ್ಯ ಭರದಿಂದ ಸಾಗಿದೆ. ವಾತಾವರಣ ಶೀತದಿಂದ ಕೂಡಿದ್ದು, ಮಳೆಯೊಂದಿಗೆ ಚಳಿಯೂ ಹೆಚ್ಚಾಗಿದೆ.

ಪಟ್ಟಣದ ಜನಜೀವನ ಅಸ್ತವ್ಯಸ್ತ
ಶನಿವಾರಸಂತೆ: ಪಟ್ಟಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಗುರುವಾರ ಆಗಾಗ ರಭಸದ ಮಳೆ ಸುರಿಯಿತು. ಮಳೆಯ ಜತೆ ಬಿರುಗಾಳಿ ಕೂಡ ಬೀಸಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಿಗ್ಗೆ ಸ್ವಲ್ಪ ಸಮಯ ಬಿಸಿಲು ಕಾಣಿಸಿಕೊಂಡಿತು. ಮತ್ತೆ ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಆರಂಭವಾಯಿತು. ಇದರಿಂದಾಗಿ ಜನ ಮನೆ ಬಿಟ್ಟು ಹೊರಬರದಾದರು.

ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಗಳಲ್ಲಿ ಬಿತ್ತನೆ ಹಾಗೂ ಉಳುಮೆ ಕಾರ್ಯ ಮುಗಿದಿದೆ. ಒಂದೂವರೆ ತಿಂಗಳ ಹಿಂದೆ ಬಿತ್ತನೆ ಕಾರ್ಯ ಮುಗಿಸಿರುವ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ತಲಕೇರಿ ಮತ್ತಿತರ ಗ್ರಾಮಗಳಲ್ಲಿ ರೈತರು ಇದೀಗ ನಾಟಿ ಕೆಲಸದಲ್ಲಿ ತೊಡಗಿದ್ದಾರೆ.

ಸಮೀಪದ ಹಂಡ್ಲಿ, ನಿಡ್ತ, ಮಾಲಂಬಿ, ಹೊನ್ನೆಕೊಪ್ಪಲು, ಮುಳ್ಳೂರು ಗ್ರಾಮಗಳಲ್ಲಿ ಬಹುತೇಕ ನಾಟಿ ಕೆಲಸ ಮುಗಿದಿದೆ. ಈ ಗ್ರಾಮಗಳಲ್ಲಿ ರೈತರು ತುಂಗ, ಐಆರ್-20 ಮತ್ತು ಇಂಟಾನ್ ಬತ್ತದ ತಳಿಗಳನ್ನು ಜೂನ್ ತಿಂಗಳ ಮೊದಲ ವಾರದಲ್ಲಿ ಬಿತ್ತನೆ ಮಾಡಿದ್ದು, ಇದೀಗ ಈ ವಾರ ನಾಟಿ ಮಾಡುತ್ತಿದ್ದಾರೆ. ಎಡೆಬಿಡದೆ ಸುರಿಯುವ ಮಳೆಯಿಂದ ಕೃಷಿ ಚಟುವಟಿಕೆಗೆ ಅಡ್ಡಿ ಉಂಟಾಗಿದೆ.

ದಿನವಿಡೀ ಧಾರಾಕಾರ ಮಳೆ
ಕುಶಾಲನಗರ: ಎರಡು ದಿನಗಳಿಂದ ತುಸು ಬಿಡುವು ನೀಡಿದ್ದ ಮಳೆ ಗುರುವಾರ ಮತ್ತೆ ಬಿರುಸು ಪಡೆಯಿತು. ಕುಶಾಲನಗರ ಮತ್ತು ಸುಂಟಿಕೊಪ್ಪ ಹೋಬಳಿಯಾದ್ಯಂತ ದಿನವಿಡೀ ಧಾರಾಕಾರವಾಗಿ ಸುರಿಯಿತು.

ಬೆಳಿಗ್ಗೆಯಿಂದಲೇ ಮೋಡ ಕವಿದ ವಾತರಣ ಕಂಡುಬಂದಿತು. 8ಗಂಟೆ ಸುಮಾರಿಗ ಮಳೆ ಸುರಿಯಿತು. ಕುಶಾಲನಗರ ಹೋಬಳಿಯ ಹೆಬ್ಬಾಲೆ, ತೊರೆನೂರು, ಹಾರಂಗಿ ಗುಡ್ಡೆಹೊಸೂರು, ಸುಂಟಿಕೊಪ್ಪ ಹೋಬಳಿ ಏಳನೆ ಹೊಸಕೋಟೆ ಮತ್ತಿತರೆಡೆಗಳಲ್ಲಿ ಕೂಡ ಮಳೆ ಸುರಿದಿದೆ.

ಕುಶಾಲನಗರ ಹೋಬಳಿಯಲ್ಲಿ ಕೆಲ ಸಮಯ ತುಸು ಬಿಸಿಲು ಕಾಣಿಸಿತ್ತಾದರೂ ಅದು ಹೆಚ್ಚು ಸಮಯ ಉಳಿಯಲಿಲ್ಲ. ಸಂಜೆ ಮಳೆ ಹೆಚ್ಚಾದ್ದರಿಂದ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ವರ್ತಕರು ಮನೆ ಸೇರಲು ಪರದಾಡುವಂತಾಯಿತು. ವಿದ್ಯಾರ್ಥಿಗಳು ಬಹು ಸಮಯ ಶಾಲೆಗಳ ಬಳಿಯಲ್ಲೇ ಕಾದು ಕುಳಿತು ಮಳೆ ನಿಂತ ಮೇಲೆ ಮನೆ ಸೇರಿದರು.

ತಾತ್ಕಾಲಿಕ ಪರಿಹಾರವಾಗಿ ರೂ 1 ಕೋಟಿ ಬಿಡುಗಡೆ: ಡಿಸಿ
ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ವಿಪರೀತ ಮಳೆಯಿಂದಾಗಿ ಸಂಭವಿಸಿದ ಹಾನಿಯನ್ನು ಸರಿಪಡಿಸಲು ಸರ್ಕಾರ ತಾತ್ಕಾಲಿಕವಾಗಿ ರೂ 1 ಕೋಟಿ ಪರಿಹಾರ ನಿಧಿ ಬಿಡುಗಡೆ ಮಾಡಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ವಿ. ಪ್ರಸಾದ್ ಹೇಳಿದರು.

ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಳೆಯಿಂದಾಗಿ ಜಿಲ್ಲೆಯ ರಸ್ತೆಗಳು, ಸೇತುವೆ, ಶಾಲಾ ಕಟ್ಟಡ ಸೇರಿದಂತೆ ಹಲವು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯಾಗಿದೆ. ಇದಕ್ಕಾಗಿ ರೂ 3 ಕೋಟಿ ಪರಿಹಾರ ನಿಧಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೇವು. ಅದರಂತೆ ಈಗ ಮೊದಲ ಕಂತವಾಗಿ ರೂ 1 ಕೋಟಿ ಬಿಡುಗಡೆಯಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಪುನಃ ಮಳೆ ಹಾನಿಯ ವರದಿಯನ್ನಾಧರಿಸಿ ಪರಿಹಾರದ ಹಣ ಬಿಡುಗಡೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ತುರ್ತಾಗಿ ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆಯಿಲ್ಲ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಪ್ರವಾಹದಿಂದ ಸುಮಾರು ರೂ 372.88 ಲಕ್ಷದಷ್ಟು ಆಸ್ತಿ ಹಾನಿಯಾಗಿದೆ. 50ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದ್ದು, ಸುಮಾರು 12 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.

ಇದರಂತೆ ಲೋಕೋಪಯೋಗಿ ವ್ಯಾಪ್ತಿಯ ರಸ್ತೆಗಳು ಸುಮಾರು ರೂ 71.70 ಲಕ್ಷ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳು ರೂ 2.37 ಕೋಟಿ, `ಸೆಸ್ಕ್' ವ್ಯಾಪ್ತಿಗೆ ಸಂಬಂಧಿಸಿದಂತೆ ಸುಮಾರು ರೂ 52 ಲಕ್ಷದಷ್ಟು ಆಸ್ತಿ ಹಾನಿಯಾಗಿದೆ ಎಂದು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.