ಮಸ್ಕಿ: ನೂಲು ಹುಣ್ಣಿಮೆ ಅಂಗವಾಗಿ ಇಲ್ಲಿಯ ನೇಕಾರರ ಸಮುದಾಯಗಳ ಸಮಾಜದಿಂದ ಮಾರ್ಕಂಡೇಶ್ವರರ ನೂತನ ಉತ್ಸವ ಮೂರ್ತಿ ಹಾಗೂ ಪಲ್ಲಕಿಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಸಂಜೆ ನಡೆಯಿತು.

ಮಾರ್ಕಂಡೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ನಡೆಯಿತು. ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಮೇಳಗಳು ಪಾಲ್ಗೊಂಡಿದ್ದವು. ನೂರಾರು ಮಹಿಳೆಯರು ಕಳಸ, ಕನ್ನಡಿಯೊಂದಿಗೆ ಭಾಗವಹಿಸಿದ್ದರು.

ಇದೇ ಮೊದಲ ಬಾರಿಗೆ ಇಲ್ಲಿಯ ನೇಕಾರರ ಸಮಾಜಗಳಾದ ದೇವಾಂಗ, ಕುರುವಿನಶೆಟ್ಟಿ, ಪದ್ಮಸಾಲಿ, ಸ್ವಕುಳಸಾಲಿ, ತೊಗಟಿವೀರ ಸಮಾಜದ ಮುಖಂಡರು ಜಂಟಿಯಾಗಿ ಮಾರ್ಕಂಡೇಶ್ವರ ಉತ್ಸವ ಆಚರಿಸಿದ್ದು ವಿಶೇಷವಾಗಿದೆ.

ನೇಕಾರರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ ಬಿಜ್ಜಳ, ದೇವಾಂಗ ಸಮಾಜದ ಜಿಲ್ಲಾಧ್ಯಕ್ಷ ಶಿವಶಂಕ್ರಪ್ಪ ಹಳ್ಳಿ, ವೀರಭದ್ರಪ್ಪ ಮಾಳ್ಗಿ, ಸೂಗಪ್ಪ ಯಂಬ, ಶಂಕ್ರಪ್ಪ ಕೊಂಡಕುಂದಿ, ಶ್ರೀಧರ ಕೊಂಡಕುಂದಿ, ಪದ್ಮಸಾಲಿ ಸಮಾಜದ ಮುಖಂಡರಾದ ಯಮನಪ್ಪ ದೇವರಡ್ಡಿ, ಅಯ್ಯಪ್ಪ ಕೊಡಗುಂಟಿ, ಸಮಾಜದ ಅಧ್ಯಕ್ಷ ಬಸವರಾಜ ಚಿನ್ನಿ, ಮಲ್ಲಯ್ಯ ಪಗಡೆಕಲ್, ಮುನಿಯಪ್ಪ ಕರ್ಲಿ, ಡಾ. ಶಂಕರ ಕರ್ಲಿ, ಕುರುವಿನಶೆಟ್ಟಿ ಸಮಾಜದ ಅಧ್ಯಕ್ಷ ಈಶಪ್ಪ ಗಂಗಾವತಿ, ವಿರೂಪಾಕ್ಷಪ್ಪ ಪರಕಾಳಿ, ಸ್ವಕುಳಸಾಲಿ ಸಮಾಜ, ಗಿರಿ, ಆನಂದ ಮೆಸ್ತರ ತೋಗಟಿವೀರ ಸಮಾಜದ ಅನೇಕ ಮುಖಂಡರು ಹಾಗೂ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.