ಶನಿವಾರ, ಮೇ 8, 2021
26 °C

ಮಹಾವೀರ ಭಾವಚಿತ್ರದ ಅದ್ದೂರಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಜೈನ ಧರ್ಮದ 24ನೇ ತೀರ್ಥಂಕರರಾಗಿ ಅಂಹಿಸೆಯ ತತ್ವ ಸಿದ್ಧಾಂತಗಳನ್ನು ನಾಡಿಗೆ ನೀಡುವ ಜೊತೆಗೆ ಅವುಗಳನ್ನು ಪಾಲಿಸಿಕೊಂಡು ಬಂದವರಲ್ಲಿ ಮಹಾವೀರ ತೀರ್ಥಂಕರರು ಪ್ರಮುಖರು. ಅವರ ಜಯಂತ್ಯುತ್ಸವ ಅಂಗವಾಗಿ ಗುರುವಾರ ಪಟ್ಟಣದಲ್ಲಿ ರಾಜಸ್ಥಾನಿ ಮಾರವಾಡಿ ಸಂಘದವರು ಮಹಾವೀರರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಸಿದರು.ಗುರುವಾರ ಅಲಂಕೃತಗೊಳಿಸಿದ ತೆರೆದ ವಾಹನದಲ್ಲಿ ಮಹಾವೀರರ ಭಾವಚಿತ್ರ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ್ಟಣದ ಗಡಿಯಾರ ವೃತ್ತದಿಂದ ಮೇನ ಬಜಾರ, ಹನುಮಾನ ವೃತ್ತ, ನಗರೇಶ್ವರ ದೇವಸ್ಥಾನ, ಗುರುಗುಂಟಾ ರಸ್ತೆ ಮೂಲಕ ಮಂತ್ರ ಪಠಣ, ಜಯಘೋಷಗಳೊಂದಿಗೆ ನಡೆದ ಮೆರವಣಿಗೆ ಕೊನೆಯಲ್ಲಿ ಬಹಿರಂಗ ಸಭೆಯಾಗಿ ಮಾರ್ಪಟ್ಟಿತು.ಬಹಿರಂಗ ಸಭೆಯಲ್ಲಿ ಸಮಾಜದ ಹಿರಿಯ ಗಣ್ಯರು ಮಹಾವೀರರ ತತ್ವಾದರ್ಶಗಳ ಮೆಲಕು ಹಾಕಿದರು. ಮಕ್ಕಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ನಂತರದಲ್ಲಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಮತ್ತು ಕಾರಾಗೃಹದಲ್ಲಿನ ವಿಚಾರಣಾಧೀನ ಖೈದಿಗಳಿಗೆ ಸೇಬು ಹಣ್ಣು, ಹಾಲು, ಬ್ರೆಡ್ ವಿತರಿಸಲಾಯಿತು.ಗಣೇಶಚಂದದಾದಾ, ರಾಜೇಂದ್ರಕುಮಾರ, ರೇಖಚಂದ ಮೆಹತಾ, ವಿಜಯಕುಮಾರ, ಮಹೇಂದ್ರಕುಮಾರ, ಗೌತಮಚಂದ, ವಿಕೇಶಕುಮಾರ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.