ಗುರುವಾರ , ಮೇ 28, 2020
27 °C

ಮಹಿಳಾ ಸಬಲತೆಯಿಂದ ರಾಷ್ಟ್ರ ಸಮೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ: ಭಾರತ ಸಮುೃದ್ಧ ರಾಷ್ಟ್ರವಾಗಬೇಕಾದರೆ ಮಹಿಳೆಯರ ಸಬಲಿಕರಣವಾಗಬೇಕು ಎಂದು ಪಿಎಸ್‌ಐ ಉದಯರವಿ ಹೇಳಿದರು.ಪಟ್ಟಣದ ಶತಮಾನೋತ್ಸವ ಭವನದಲ್ಲಿ ಮಂಗಳವಾರ ನಡೆದ ಹೆಣ್ಣುಮಕ್ಕಳ ಮಾರ್ಗದರ್ಶಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಕಲ್ಪಿಸಿದೆ ಎಂದರು.ಪುರುಷರಿಗಿಂತ ಮಹಿಳೆಯರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಮಹಿಳೆಯರು ತಮಗಿರುವ ಸೌಲಭ್ಯವನ್ನು ಪಡೆದುಕೊಂಡು ಉನ್ನತಿ ಸಾಧಿಸಬೇಕು ಎಂದರು.ಪ್ರಸಕ್ತ ದಿನಗಳಲ್ಲಿ ಮಹಿಳೆಯರು ದುಡಿಮೆ ಮತ್ತು ಕುಟುಂಬ ನಿರ್ವಹಣೆಯ ಜತೆಗೆ ತಮ್ಮತನವನ್ನು ಉಳಿಸಿಕೊಳ್ಳಬೇಕಾದ ಸವಾಲು ಇದೆ ಎಂದು ಡಾ.ಶಿವಶರಣಪ್ಪ ಇತ್ಲಿ ಅಭಿಪ್ರಾಯಪಟ್ಟರು.

 

ಮುಖ್ಯೋಪಾಧ್ಯಾಯ ಹೇಮಯ್ಯ, ಉಪನ್ಯಾಸಕ ಮಹಾಂತೇಶ ಮಸ್ಕಿ, ರಂಗಯ್ಯ ಶಟ್ಟಿ ಮಾತನಾಡಿದರು. ಪಿ.ಜಿ.ಹಚ್ಚೊಳ್ಳಿ, ದುರುಗಣ್ಣ, ಬಸವರಾಜ ಶಿಕ್ಷಕರು ಉಪಸ್ಥಿತರಿದ್ದರು. ದೊಡ್ಡಪ್ಪ ಬುಳ್ಳಾ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.