ವಿಶ್ವಸಂಸ್ಥೆ (ಪಿಟಿಐ): ಭಾರತವು ವಿಶ್ವಸಂಸ್ಥೆಯ ಮಹಿಳಾ ಸಬಲೀಕರಣ ಸಂಸ್ಥೆಗೆ 10 ಲಕ್ಷ ಡಾಲರ್ಗಳ ಕೊಡುಗೆ ನೀಡುವ ಮೂಲಕ ಲಿಂಗ ಸಮಾನತೆಗೆ ತಾನು ಕಟಿಬದ್ಧವಾಗಿರುವುದನ್ನು ದೃಢಪಡಿಸಿದೆ.

ವಿಶ್ವಸಂಸ್ಥೆಗೆ ಭಾರತೀಯ ರಾಯಭಾರಿಯಾಗಿರುವ ಹರ್ದೀಪ್ ಸಿಂಗ್ ಪುರಿ ಅವರ ಪ್ರತಿನಿಧಿ ಗುರುವಾರ ಈ ಚೆಕ್ ಅನ್ನು ಮಹಿಳಾ ಸಬಲೀಕರಣ ಸಂಸ್ಥೆಗೆ ಹಸ್ತಾಂತರಿಸಿದರು. ವಿಶ್ವಸಂಸ್ಥೆ ಮಹಿಳಾ ವಿಭಾಗದ ಉಪ ಮಹಾಕಾರ್ಯದರ್ಶಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿ ಮಿಶೆಲ್ ಬಚೆಲೆಟ್ ಅವರು ಈ ಚೆಕ್ ಅನ್ನು ಸ್ವೀಕರಿಸಿದರು. ಈ ಮೊತ್ತವು ವಿಶ್ವಸಂಸ್ಥೆಯ ಮಹಿಳಾ ಸಂಪನ್ಮೂಲ ನಿಧಿಗೆ ಭಾರತ ಪ್ರಕಟಿಸಿದ 50 ಲಕ್ಷ ಡಾಲರ್ಗಳ ಕೊಡುಗೆಯ ಪೈಕಿ ಎರಡನೇ ಕಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.