ಬುಧವಾರ, ಜೂನ್ 16, 2021
28 °C

ಮಹಿಳಾ ‘ಎ’ ಡಿವಿಷನ್ ಹಾಕಿ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಾರ್ಚ್ 5ರಿಂದ 13ರವರೆಗೆ 4ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ಬಿ ಡಿವಿಷನ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಹಾಕಿ ಕರ್ನಾಟಕ ಶನಿವಾರದಿಂದ ಮಾ 23ರವರೆಗೆ ‘ಎ‘ ಡಿವಿಷನ್ ಚಾಂಪಿಯನ್‌ಷಿಪ್ ಆತಿಥ್ಯ ವಹಿಸುತ್ತಿದೆ.ಕಳೆದ ಬಾರಿಯ ಚಾಂಪಿಯನ್ ಹರಿಯಾಣ ತಂಡವು ಸೇರಿದಂತೆ 16 ತಂಡಗಳು ಭಾಗವಹಿಸಲಿವೆ. ನಾಲ್ಕು ಗುಂಪುಗಳಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ಅತಿಥೇಯ ಕರ್ನಾಟಕ ತಂಡವು ಬಿ ಗುಂಪಿನಲ್ಲಿ ಆಡಲಿದೆ. ಮೈಸೂರಿನ ಡಿವೈಎಸ್‌ಎಸ್‌ ವಸತಿ ನಿಲಯದ ಒಂಬತ್ತು ಆಟಗಾರ್ತಿಯರು ಸ್ಥಾನ ತಂಡದಲ್ಲಿ ಪಡೆದಿದ್ದು ತವರಿನ ಅಂಗಳದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲಿದ್ದಾರೆ.  18ರಂದು ತನ್ನ ಗುಂಪಿನ ಮೊದಲ ಲೀಗ್ ಪಂದ್ಯವನ್ನು ಮಧ್ಯಪ್ರದೇಶ ವಿರುದ್ಧ ಆಡಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.