ಮಹಿಳೆಯರಲ್ಲಿ ಕಾಮಾಸಕ್ತಿ ಕುಗ್ಗಿಸುವ ತಗ್ಗು ಸೈಕಲ್!

7

ಮಹಿಳೆಯರಲ್ಲಿ ಕಾಮಾಸಕ್ತಿ ಕುಗ್ಗಿಸುವ ತಗ್ಗು ಸೈಕಲ್!

Published:
Updated:
ಮಹಿಳೆಯರಲ್ಲಿ ಕಾಮಾಸಕ್ತಿ ಕುಗ್ಗಿಸುವ ತಗ್ಗು ಸೈಕಲ್!

ವಾಷಿಂಗ್ಟನ್ (ಐಎಎನ್‌ಎಸ್): ಸೀಟಿಗಿಂತ ಕೆಳಮಟ್ಟದಲ್ಲಿರುವ ಕೈ ಹಿಡಿಕೆಯ (ಹ್ಯಾಂಡಲ್) ಸೈಕಲ್‌ಗಳನ್ನು ಬೆನ್ನು  ಬಾಗಿಸಿ ಹೊಡೆಯುವ ಮಹಿಳೆಯರಲ್ಲಿ ಕಾಮಾಸಕ್ತಿ ಕಡಿಮೆ ಎಂದು ಸಂಶೋಧನೆಯೊಂದು ಹೇಳಿದೆ.

ಯೇಲ್ ವಿವಿ ಮಾರ್ಷ್ ಕೆ. ಗೆಸ್ ಅವರು ಮಹಿಳಾ ಸೈಕಲ್ ಸ್ಪರ್ಧಿಗಳು ಬಳಸುವ ರೇಸ್ ಸೈಕಲ್‌ಗಳ ಬಗ್ಗೆ ಸಂಶೋಧನೆ ನಡೆಸಿದ್ದಾರೆ.

 

ಇಂತಹ ಸೈಕಲ್‌ಗಳ ಆಸನದಿಂದ ಉಂಟಾಗುವ ಒತ್ತಡ ಮತ್ತು ಜನನೇಂದ್ರಿಯ ಭಾಗದಲ್ಲಾಗುವ ಸಂವೇದನೆ ಅವರ ಸಂಶೋಧನೆಯ ಕೇಂದ್ರ ಬಿಂದು.  ವೇಗದಲ್ಲಿ ಚಲಿಸುತ್ತಿರುವ ರೇಸ್ ಸೈಕಲ್‌ನ ತಗ್ಗಿದ ಹ್ಯಾಂಡಲ್  ಎಡಕ್ಕೆ-ಬಲಕ್ಕೆ ತಿರುಗಿಸುವುದರಿಂದ ಮಹಿಳೆಯರ ಜನನೇಂದ್ರಿಯದ ಮೇಲೆ  ಒತ್ತಡ ಉಂಟಾಗುತ್ತದೆ.ಜೊತೆಗೆ ಲೈಂಗಿಕ ಸಂವೇದನೆ ಉದ್ದೀಪಗೊಳಿಸುವ ನರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ಅವುಗಳ ಕ್ರಿಯಾಶೀಲತೆ ಕ್ರಮೇಣ ಕುಂಠಿತಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ. 48 ಮಹಿಳಾ ಸ್ಪರ್ಧಿಗಳನ್ನು  ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry