ಚಿತ್ರದುರ್ಗ: ‘ಅಸಮಾನತೆಯ ನೆರಳಿನಲ್ಲಿ ಬದುಕುತ್ತಿರುವ ಮಹಿಳೆಯರೆಲ್ಲ ದಲಿತವರ್ಗಕ್ಕೇ ಸೇರಿದ್ದಾರೆ. ಅಂಥ ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರೆಯಬೇಕು’ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ, ಚಿಂತಕ ಡಾ.ಬಿ.ಎಂ.ಪುಟ್ಟಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಸಂಜೆ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು, ಸೃಷ್ಟಿ ಸಾಗರ ಪ್ರಕಾಶನ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ದಲಿತ ಮಹಿಳೆ ಮತ್ತು ಸಾಮಾಜಿಕ ನ್ಯಾಯ ವಿಷಯ ಕುರಿತ ವಿಶೇಷ ಉಪನ್ಯಾಸ ನೀಡಿದರು.

‘ಯಾವ ಮಹಿಳೆ ಅತ್ಯಾಚಾರ, ಕೊಲೆ, ಸುಲಿಗೆ, ದೌರ್ಜನ್ಯಕ್ಕೆ ಒಳಗಾಗುತ್ತಿರುತ್ತಾಳೊ, ತನ್ನ ಅಗತ್ಯ ಪೂರೈಸಿಕೊಳ್ಳಲು ಕೆಂಪು ದೀಪದಡಿಯಲ್ಲಿ ಬದುಕುತ್ತಿರುತ್ತಾಳೊ ಅವರೆಲ್ಲ ದಲಿತ ಮಹಿಳೆಯರು. ಆಕೆ ಯಾವುದೇ ಜಾತಿಗೆ ಸೇರಿರಲಿ.

ಅಂಥಹ ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರೆಯಬೇಕು. ಅದು ಈ ದಿನಗಳಲ್ಲಿ ಅಸಾಧ್ಯವಾದ ಮಾತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಅಸಮಾನತೆಯಿಂದ ಕೂಡಿದ ಸಮಾಜ ಜೀವಂತವಿರವವರೆಗೂ ದಲಿತ ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರೆಯುವುದಿಲ್ಲ ಎಂದರು.

‘ಪ್ರಸ್ತುತದವರೆಗೂ ದಲಿತ ಮಹಿಳೆ ಯಾರು ಎನ್ನುವುದೇ ನಿರ್ಧಾರವಾಗಿಲ್ಲ. ದಲಿತ ಮಹಿಳೆ ಎಂದರೆ ಪರಿಶಿಷ್ಟ ಜಾತಿ / ವರ್ಗಕ್ಕೆ ಸೇರಿದವರೇ, ಗುಡಿಸಲಿನಲ್ಲಿ ವಾಸಿಸುವವರೇ, ಕೂಲಿ ಕಾರ್ಮಿಕರೊ, ರೈತ ಮಹಿಳೆಯರೋ, ಯಾರು ದಲಿತ ಮಹಿಳೆಯರು ಎಂಬುದಕ್ಕೆ ಇನ್ನೂ ಉತ್ತರ ಹುಡುಕಬೇಕಿದೆ’ ಎಂದರು.

‘ಕಷ್ಟಪಟ್ಟು ದುಡಿಯುವ, ಗುಡಿಸಲುಗಳಲ್ಲಿ ವಾಸಿಸುವ, ಬದುಕಿನ ಅನಿವಾರ್ಯಕ್ಕಾಗಿ ಕೆಂಪು ದೀಪಕ್ಕೆ ಸೇರುವ, ಹೊಟ್ಟೆ ಹೊರೆಯಲು ಏನೇನೋ ಕೆಲಸ ಮಾಡುವವ ಮಹಿಳೆಯರ ಎದುರು ನಾವು ಸಾಮಾಜಿಕ ನ್ಯಾಯದ ಬಗ್ಗೆ ಉಪನ್ಯಾಸ ನೀಡಿದರೆ, ಅದು ಹಾಸ್ಯಾಸ್ಪದವಲ್ಲವೇ’ ಎಂದು ಪುಟ್ಟಯ್ಯ ಪ್ರಶ್ನಿಸಿದರು.

‘ಬೆಂಗಳೂರಿನ ಕೊಳೆಗೇರಿಗಳಲ್ಲಿ ೪ ಲಕ್ಷ ಮಹಿಳೆಯರು ಕಟ್ಟಡ ಕಾರ್ಮಿಕರಾಗಿದ್ದಾರೆ. ಬಹುತೇಕ ಕುಟುಂಬಗಳಲ್ಲಿ ಮಹಿಳೆಯರು ದುಡಿದರೇ ಮಾತ್ರ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶ್ರಮಿಕ ವರ್ಗದ ಮಹಿಳೆಯ ಶ್ರಮದ ಬೆವರಿನ ಬಗ್ಗೆ ಶ್ರಮಿಕವಲ್ಲದ ಮಹಿಳೆಯರಿಗೆ ಹೇಗೆ ತಿಳಿಯಬೇಕು’ ಎಂದು ಪ್ರಶ್ನಿಸಿದರು.

‘ದೇಶದಲ್ಲಿ ಈಗ ಮುಂದುವರಿದ ವರ್ಗದ ಮಹಿಳೆಯರ ಮೇಲೆ ನಡೆಯುವ ಶೋಷಣೆ, ದೌರ್ಜನ್ಯ ಕುರಿತು ಚರ್ಚೆಯಾಗುತ್ತಿದೆ. ಅದೇ ತಳಮಟ್ಟದ, ಕೆಳವರ್ಗದ ಮಹಿಳೆ ಮೇಲೆ ನಡೆಯುತ್ತಿರುವ ಶೋಷಣೆ, ದೌರ್ಜನ್ಯ, ಕೊಲೆ, ಅತ್ಯಾಚಾರ, ಕಿರುಕುಳದಂತಹ ಸಮಸ್ಯೆಗಳು ಚರ್ಚೆ ನಡೆಯುತ್ತಿಲ್ಲ. ಚರ್ಚೆ ಮಾಡುತ್ತಿರುವ ಮಹಿಳೆಯರಿಗೆ ಈ ಘಟನೆಗಳ ಹಿಂದಿನ ಕಹಿ ಸತ್ಯ ಗೊತ್ತಿರುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಬಿ.ಎಂ.ಗುರುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಮಹಿಳೆಯರನ್ನು ವಿವಸ್ತ್ರಗೊಳಿಸುವ ಕೃತ್ಯ ನಿರಂತರವಾಗಿ ನಡೆಯುತ್ತಿದೆ. ಮಹಿಳೆಯರಿಗೆ ಸಾಮಾಜಿಕ ನ್ಯಾಯ ಎನ್ನುವುದು ಮರೀಚಿಕೆಯಾಗಿದೆ’ ಎಂದು ವಿಷಾದಿಸಿದರು.

ವಕೀಲ ಜಿ.ಎಸ್.ಕುಮಾರಗೌಡ ಕಾರ್ಯಕ್ರಮ ಉದ್ಘಾಟಿಸಿದರು. ದಲಿತ ಸಾಹಿತ್ಯ ಪರಿಷತ್ತು ರಾಜ್ಯಘಟಕದ ಅಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಷರೀಫಾಬಿ, ಪ್ರಾಚಾರ್ಯೆ ಡಾ.ಡಿ.ಮಂಜುಳ, ಸೃಷ್ಟಿ ಸಾಗರ ಪ್ರಕಾಶನದ ಮುಖ್ಯಸ್ಥ ಮೇಘ ಗಂಗಾಧರನಾಯ್ಕ್, ಬೇರು ಫೌಂಡೇಷನ್ ನ ಲಲಿತಾ ಕೃಷ್ಣಮೂರ್ತಿ ಮತ್ತಿತರರು ವೇದಿಕೆಯಲ್ಲಿದ್ದರು.

ಡಿ.ಒ.ಮೊರಾರ್ಜಿ ಪ್ರಾರ್ಥಿಸಿದರು. ರಾಘವೇಂದ್ರ ಸ್ವಾಗತಿಸಿದರು. ನಿರಂಜನದೇವರಮನೆ ಕಾರ್ಯಕ್ರಮ ನಿರೂಪಿಸಿದರು.
ಇಂದು ಕೊಕ್ಕೊ ಪಂದ್ಯ ಉದ್ಘಾಟನೆ ನಗರದ ಎಸ್ಜೆಎಂ ತಾತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯ ಸಹಯೋಗದೊಂದಿಗೆ 24 ಮತ್ತು 25ರಂದು ಅಂತರ್ ಕಾಲೇಜು ಮಟ್ಟದ ಮಹಿಳೆಯರ ಕೊಕ್ಕೊ ಪಂದ್ಯಾವಳಿ ಏರ್ಪಡಿಸಲಾಗಿದೆ.
ಪಂದ್ಯಾವಳಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯ ೨೫ ತಂಡಗಳು ಪಾಲ್ಗೊಳ್ಳಲಿದ್ದಾರೆ. ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಈ.ಚಿತ್ರಶೇಖರ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.