‘ಗ್ರಾಹಕರಿಂದ ಗ್ರಾಹಕರಿಗಾಗಿ’ ಎನ್ನುವ ಕಲ್ಪನೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ ‘ಮೈ ಫ್ಯಾಮಿಲಿ ಬಿಝ್ಾ’. ಇದು ಇತರ ಯೋಜನೆಗಳಿಗಿಂತ ಸ್ವಲ್ಪ ಭಿನ್ನ. ಇಲ್ಲಿ ರುಚಿಕರ ತಿನಿಸುಗಳ ಖರೀದಿಯಿಂದ ಗಳಿಕೆಯನ್ನೂ ಮಾಡಬಹುದಾಗಿದೆ.
ಬಿಝ್ಾನ ಸ್ಟಾಕ್ ಪಾಯಿಂಟ್‌ನಲ್ಲಿ 500 ರೂ ನೀಡಿ ಸದಸ್ಯತ್ವ ದಾಖಲಾತಿ ಪ್ಯಾಕ್ ಖರೀದಿಸಬೇಕು. ಇದರಲ್ಲಿ 500 ರೂ ಮೌಲ್ಯದ ರೆಡಿ ರಸಂ ಪೌಡರ್, ಕೇಸರಿಬಾತ್ ಮಿಕ್ಸ್, ಬಜ್ಜಿ ಮಿಕ್ಸ್, ಪುಳಿಯೋಗರೆ ಮಿಕ್ಸ್, ವಿಟಮಿನ್‌ಯುಕ್ತ ಮಿಲ್ಕ್ ಪೌಡರ್, ಮಕ್ಕಳಿಗಾಗಿ ಸೂಪ್ ಮಿಕ್ಸ್, ಜೆಲ್ಲಿ ಹಾಗೂ ಐಸ್‌ಕ್ರೀಮ್ ಮೇಕರ್‌ಗಳಿರುತ್ತವೆ. ಜತೆಗೆ ಒಂದು ಕಿಟ್ ಹಾಗೂ ಸದಸ್ಯತ್ವದ ಅರ್ಜಿ ಇರುತ್ತದೆ.
ಅರ್ಜಿಯನ್ನು ಭರ್ತಿಮಾಡಿ, ಜೊತೆಯಲ್ಲಿ ಅಗತ್ಯವಾದ ದಾಖಲೆಗಳನ್ನು ಸ್ಟಾಕ್ ಪಾಯಿಂಟ್‌ನಲ್ಲಿ ಸಲ್ಲಿಸಬೇಕು. ನಂತರ ನಿಮಗೆ ಬಿಜ್‌ನಿಂದ ಸದಸ್ಯತ್ವದ ಗುರುತಿನ ಸಂಖ್ಯೆಯನ್ನು ನೀಡಲಾಗುವುದು. ಇಲ್ಲಿಂದ ಬಿಝ್ಾನೊಂದಿಗಿನ ನಿಮ್ಮ ಪಯಣ ಶುರು. ಮುಖ್ಯ ಸಂಗತಿ ಎಂದರೆ ಮಹಿಳೆಯರು ಮಾತ್ರ ಈ ಸ್ಕೀಮ್‌ನಲ್ಲಿ ಸದಸ್ಯತ್ವ ಪಡೆಯಲು ಸಾಧ್ಯ. ಖರೀದಿ ಜತೆ ಗಳಿಸುತ್ತ ಹೋಗಬಹುದು.
ಸಮಾಜ ಸೇವೆಯ ಜೊತೆಗೆ ಸಿದ್ಧ ಆಹಾರ ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಸ್.ಆರ್. ರಾವ್ ಸಾಹಿಬ್ ಮತ್ತು ಅವರ ಪತ್ನಿ ಲಲಿತಾರಾವ್ ಸಾಹಿಬ್ ಇದರ ಸೂತ್ರಧಾರರು. ಈ ದಂಪತಿಗಳು ಪ್ರತಿ ವರ್ಷ ಬೆಂಗಳೂರಿನಿಂದ ತಿರುಪತಿಯ ತನಕ ಪಾದಯಾತ್ರೆ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಸಂಗ್ರಹವಾಗುವ ದೇಣಿಗೆಯನ್ನು ವಿಕಲಚೇತನ ಮಕ್ಕಳು ಮತ್ತು ಬಡ ಮಕ್ಕಳ ಅಭಿವೃದ್ಧಿಗಾಗಿ ವಿನಿಯೋಗಿಸುತ್ತಿದ್ದಾರೆ. ಈಚೆಗೆ ಲಲಿತಾ ಅವರಿಗೆ ‘ಭವಿಷ್ಯದ ಮಹಿಳಾ ನಾಯಕಿ’ ಪ್ರಶಸ್ತಿಯೂ ಬಂದಿದೆ. ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ದೆಹಲಿಯಲ್ಲಿ ಪ್ರದಾನ ಮಾಡಿದ್ದಾರೆ. ಮಾಹಿತಿಗೆ: 4172 2169
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.