ಗುರುವಾರ , ಜೂನ್ 24, 2021
29 °C
‌ಮತದಾನದ ಹಕ್ಕು–ಜಾಗೃತಿ ಸಮಾವೇಶದಲ್ಲಿ ಟೀಕೆ

ಮಹಿಳೆಯರ ಮತದ ಮೇಲೆ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಮತ ಚಲಾಯಿಸು­ವುದು ಪ್ರತಿ ಮಹಿಳೆಯ ಹಕ್ಕಾಗಿದೆ. ಎಷ್ಟೇ ಕಾರ್ಯ ಒತ್ತಡ ಅಥವಾ ಸಮಸ್ಯೆಯಿದ್ದರೂ ಇಚ್ಛೆ ಅನುಸಾರವಾಗಿ ಮತ ಚಲಾಯಿಸಬೇಕು. ಇನ್ನೊಬ್ಬರ ಬಲವಂತದಿಂದ ಚಲಾಯಿಸಬಾರದು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ತಿಳಿಸಿದರು.ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದಲ್ಲಿ ಭಾನುವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಆಯೋ­ಜಿಸಿದ್ದ ‘ಮಹಿಳೆಯರ ಮತದಾನದ ಹಕ್ಕು–ಜಾಗೃತಿ ಸಮಾವೇಶ’ದಲ್ಲಿ ಮಾತನಾಡಿ,

ಮಹಿಳೆಯರು ಸಂಸಾರ ನಿಭಾಯಿ­ಸುವುದರ ಜತೆಗೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಬಗ್ಗೆಯೂ ಆಸಕ್ತಿ ತೋರಬೇಕು.  ಮಹಿಳೆಯರು ಹಿಂಜರಿಕೆ ಬಿಟ್ಟು  ಅಭಿಪ್ರಾಯಗಳನ್ನು ವ್ಯಕ್ತಪಡಿಸ­ಬೇಕು ಎಂದರು.ಮಹಿಳೆಯರನ್ನು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸ­ಲಾಗು­ತ್ತಿದೆ. ಮಹಿಳೆಯರಲ್ಲಿ ಪ್ರತಿಭೆ ಮತ್ತು ಬುದ್ಧಿವಂತಿಕೆಯಿದ್ದರೂ  ಅವರದ್ದೇ ಆದ ನಿಲುವು ತಳೆಯಲು ಪುರುಷರು ಅವಕಾಶ ನೀಡುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ಚುನಾವಣೆಯಲ್ಲಿ ಯಾರ ಪರ ಮತ ಚಲಾಯಿಸಬೇಕು ಅಥವಾ ಚಲಾ­ಯಿಸಬಾರದು ಎಂಬುದನ್ನು ಕುಟುಂಬದ ಮುಖ್ಯಸ್ಥರು ಅಥವಾ ಪುರುಷರೇ ನಿರ್ಧರಿಸುತ್ತಾರೆ. ಮಹಿಳೆ­ಯರಿಗೆ ಹೆಸರಿಗೆ ಮಾತ್ರವೇ ಸ್ವಾತಂತ್ರ್ಯ ಇರುತ್ತದೆ ಹೊರತು ಅದನ್ನು ಚಲಾಯಿಸಲಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ರಾಜಕೀಯವಾಗಿ ಜಾಗೃತರಾದಲ್ಲಿ ಮಾತ್ರ  ಸಮಸ್ಯೆಗಳಿಗೆ ಏನೂ ಕಾರಣ ಎಂಬುದು ಅರಿವಿಗೆ ಬರುತ್ತದೆ ಎಂದು ಅವರು ತಿಳಿಸಿದರು.

ಸಿಪಿಎಂ ರಾಜ್ಯ ಘಟಕದ ಕಾರ್ಯ­ದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಮಾತ­ನಾಡಿ, ಇಂದಿಗೂ ಪುರುಷ ಪ್ರಧಾನ ವ್ಯವಸ್ಥೆ ಜೀವಂತವಾಗಿದೆ. ಇಂಥ ಸ್ಥಿತಿಯಲ್ಲೇ ಮಹಿಳೆಯರು ಆತಂಕ ಮತ್ತು ಅಳುಕಿನಲ್ಲೇ ಕಾಲ ಕಳೆಯ­ಬೇಕಾಗಿದೆ ಎಂದು ವಿಷಾದಿಸಿದರು.ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಕಾರ್ಯದರ್ಶಿ ಗೌರಮ್ಮ, ಜಿಲ್ಲಾ ಘಟಕದ ಅಧ್ಯಕ್ಷೆ ಬಿ.ಸಾವಿತ್ರಮ್ಮ, ಸಂಚಾಲಕರಾದ ಫಾತಿಮಾ, ಪವಿತ್ರಾ, ನಾರಾಯಣಮ್ಮ, ಮುನಿರತ್ನಮ್ಮ, ಶೋಭಾರಾಣಿ, ಶೋಭಾ, ವೀಣಾ, ಮಧುಲತಾ ಇತರರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.