ಮಹಿಳೆ ವಿರುದ್ಧ ಸಾಮಾಜಿಕ ಪಿಡುಗು: ರಾಷ್ಟ್ರಪತಿ ವಿಷಾದ
ನವದೆಹಲಿ (ಪಿಟಿಐ): ದೇಶದಲ್ಲಿ ಸಾಕಷ್ಟು ಕಾನೂನು ಕಟ್ಟಳೆಗಳಿದ್ದರೂ, ಮಹಿಳೆಯರ ವಿರುದ್ಧ ಸಾಮಾಜಿಕ ಪಿಡುಗು ಮುಂದುವರಿದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ವಿದ್ಯಾರ್ಥಿನಿಯರು ಆತ್ಮರಕ್ಷಣೆಗಾಗಿ ಜೂಡೊ- ಕರಾಟೆಯಂತಹ ಕಲೆಗಳನ್ನು ಕಲಿತುಕೊಳ್ಳಬೇಕೆಂದು ಸೂಚಿಸಿದ್ದಾರೆ.
ಅವರು ಅಂತರರಾಷ್ಟ್ರೀಯ ಮಹಿಳಾ ದಿನವಾದ ಮಂಗಳವಾರ ಇಲ್ಲಿ ಸಿಆರ್ಪಿಎಫ್ ಪ್ರಥಮ ಮಹಿಳಾ ಪಡೆಯ ರಜತ ಮಹೋತ್ಸವದ ಅಂಗವಾಗಿ ಮಹಿಳಾ ಯೋಧರಿಂದ ಪಥಸಂಚಲನ ಗೌರವ ಸ್ವೀಕರಿಸಿ ಮಾತನಾಡಿದರು.
‘ಸಮಾಜದಲ್ಲಿರುವ ವಿವಿಧ ಪಿಡುಗು ಮತ್ತು ಭೇದ-ಭಾವಗಳಿಂದ ಮಹಿಳೆಯರು ಅನೇಕ ಸವಾಲು ಮತ್ತು ತಾರತಮ್ಯಗಳನ್ನು ಎದುರಿಸಬೇಕಾಗಿದೆ. ನಮ್ಮಲ್ಲಿರುವ ಸಾಮಾಜಿಕ ಅನಿಷ್ಟಗಳಿಂದಾಗಿ ದೇಶ ಪ್ರಗತಿ ಹೊಂದುವಲ್ಲಿ ತೊಡಕಾಗಿದೆ. ಅನೇಕ ಕಾನೂನುಗಳಿದ್ದರೂ, ಈ ಸಮಸ್ಯೆಗಳು ಆಚರಣೆಯಲ್ಲಿವೆ’ಎಂದು ಆತಂಕ ಸೂಚಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.