ಮುಂಬೈ (ಪಿಟಿಐ): ಮಹೀಂದ್ರಾ ಸತ್ಯಂ, ಟೆಕ್ ಮಹೀಂದ್ರಾದಲ್ಲಿ ಬುಧವಾರ ಅಧಿಕೃತವಾಗಿ ವಿಲೀನಗೊಂಡಿದೆ.

ಈ ವಿಲೀನದಿಂದ `ಟೆಕ್-ಎಂ~ ದೇಶದ ಐದನೇ ಅತಿ ದೊಡ್ಡ ಸಾಫ್ಟ್ವೇರ್ ಸಂಸ್ಥೆಯಾಗಲಿದ್ದು, ಸಂಸ್ಥೆಯ ಮಾರುಕಟ್ಟೆ ಮೌಲ್ಯ ರೂ17,500 ಸಾವಿರ ಕೋಟಿಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಮಹೀಂದ್ರಾ ಸತ್ಯಂನ 17 ಷೇರಿಗೆ ಪ್ರತಿಯಾಗಿ ತಲಾ ಎರಡು ಟೆಕ್ ಮಹೀಂದ್ರಾ ಷೇರುಗಳು ಹೂಡಿಕೆದಾರರಿಗೆ ಲಭಿಸಲಿವೆ. ಎರಡೂ ಕಂಪೆನಿಗಳ ವಿಲೀನದ ಮೂಲಕ ವಾರ್ಷಿಕ ರೂ12 ಸಾವಿರ ಕೋಟಿಗಳಷ್ಟು ವರಮಾನ ಅಂದಾಜಿಸಲಾಗಿದೆ. ಸುಮಾರು 75 ಸಾವಿರ ಉದ್ಯೋಗಿಗಳು `ಟೆಕ್-ಎಂ~ ವ್ಯಾಪ್ತಿಗೆ ಬರಲಿದ್ದಾರೆ.

ಪ್ರತಿಕ್ರಿಯೆ ಇಲ್ಲ: ಟೆಕ್ ಮಹೀಂದ್ರಾದಲ್ಲಿ ಮಹೀಂದ್ರಾ ಸತ್ಯಂ ವಿಲೀನಕ್ಕೆ ಸಂಬಂಧಿಸಿದಂತೆ ಸತ್ಯಂ ಕಂಪ್ಯೂಟರ್ಸ್ನ ಸ್ಥಾಪಕ ರಾಮಲಿಂಗರಾಜು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಬಹು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ರಾಮಲಿಂಗ ರಾಜು, ವಿಲೀನ ಪ್ರಕ್ರಿಯೆ ಪೂರ್ಣಗೊಂಡಿರುವುದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. `ಯಾವುದೇ ಪ್ರತಿಕ್ರಿಯೆ ಇಲ್ಲ~ ಎಂದಷ್ಟೇ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.