ಮಹೀಂದ್ರಾ ಥಾರ್ ಮಾರುಕಟ್ಟೆಗೆ

7

ಮಹೀಂದ್ರಾ ಥಾರ್ ಮಾರುಕಟ್ಟೆಗೆ

Published:
Updated:

ಬೆಂಗಳೂರು: ಮಹೀಂದ್ರಾ ಆಂ್ಯಡ್ ಮಹೀಂದ್ರಾ ಕಂಪೆನಿಯ 4x4 ಶ್ರೇಣಿಯ ಹೊಸ ಆಫ್-ರೋಡರ್ ‘ಥಾರ್ ಸಿಆರ್‌ಡಿಇ’ ವಾಹನವನ್ನು ಬೆಂಗಳೂರಿನಲ್ಲಿ ಮಂಗಳವಾರ ಕಂಪೆನಿಯ ಮಾರುಕಟ್ಟೆ ಉಪಾಧ್ಯಕ್ಷ ವಿವೇಕ್ ನಾಯರ್ ರಾಜ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ‘ಥಾರ್-ಸಿಆರ್‌ಡಿಇ’ ಹೊಸ ಜೀವನ ಶೈಲಿಗೆ ತಕ್ಕಂತೆ ಹಳೆಯ ನೋಟ ಮತ್ತು ಶೈಲಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಮಹೀಂದ್ರಾ  ‘ಸಿಜೆ 340’ ಮತ್ತು ‘ಎಂಎಂ 540’ ಆವೃತ್ತಿಗಳ ಸುಧಾರಿತ ಮಾದರಿ ಇದಾಗಿದ್ದು, ಇದರಲ್ಲಿರುವ ‘ಸಿಆರ್‌ಡಿಇ’ಎಂಜಿನ್ ಮತ್ತು ಪವರ್ ಸ್ಟೇರಿಂಗ್ ಚಾಲಕನಿಗೆ ಅನನ್ಯ ಅನುಭವ ನೀಡಲಿದೆ. ಕಚ್ಚಾ ರಸ್ತೆಗಳಲ್ಲೂ ಉತ್ತಮ ಸಮತೋಲನ ಕಾಯ್ದುಕೊಳ್ಳಬಹುದು’ ಎಂದು ನಾಯರ್ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸದ್ಯ ಥಾರ್ ‘ಸಿಆರ್‌ಡಿಇ ಬಿಎಸ್4’ ಮತ್ತು ‘ಬಿಎಸ್3’  ವಾಹನಗಳು ರಾಜ್ಯ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇವುಗಳ ಬೆಂಗಳೂರು ಷೋರೂಂ ಬೆಲೆ ಕ್ರಮವಾಗಿ ್ಙ 6.01 ಮತ್ತು ್ಙ 4.36 ಲಕ್ಷ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry