ನವದೆಹಲಿ(ಪಿಟಿಐ): ದೇಶದ ವಾಹನ ತಯಾರಿಕೆ ಉದ್ಯಮದ ಪ್ರಮುಖ ಕಂಪೆನಿಗಳಲ್ಲೊಂದಾದ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಜುಲೈನಲ್ಲಿ 8 ದಿನಗಳ ಕಾಲ ಕೆಲಸ ಸ್ಥಗಿತಗೊಳಿಸುವ ಸಂಭವವಿದೆ.

ಮಾರುಕಟ್ಟೆಯಲ್ಲಿ ಬೇಡಿಕೆ ಗಣನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ವಾಹನ ತಯಾರಿಕೆಗೆ ಈ ತಿಂಗಳಲ್ಲಿ ಕನಿಷ್ಠ 1ರಿಂದ ಗರಿಷ್ಠ 8 ದಿನಗಳ ರಜೆ ಘೋಷಿಸುವುದು ಅನಿವಾರ್ಯವಾಗಿದೆ ಎಂದು ಕಂಪೆನಿ `ಮುಂಬೈ ಷೇರು ವಿನಿಮಯ ಕೇಂದ್ರ'ಕ್ಕೆ(ಬಿಎಸ್ಇ) ಮಾಹಿತಿ ನೀಡಿದೆ.

`ಛಾಕನ್'ನಲ್ಲಿರುವ ಮಹೀಂದ್ರಾ ವೆಹಿಕಲ್ ಮ್ಯಾನುಫ್ಯಾಕ್ಚರರ್ಸ್ ಲಿ. ಈ ತಿಂಗಳಲ್ಲಿ `ಉತ್ಪಾದನೆ ಸ್ಥಗಿತ ದಿನ' ಕಾಣಲಿದೆ. 2012ರ ಜೂನ್ನಲ್ಲಿ 38,951 ಮಹೀಂದ್ರಾ ವಾಹನಗಳು ಮಾರಾಟವಾಗಿದ್ದರೆ, 2013ರ ಜೂನ್ನಲ್ಲಿ ವಾಹನ ಮಾರಾಟ 36,207ಕ್ಕೆ (ಶೇ 7.04) ಕುಸಿದಿದೆ.

ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್ಯುವಿ)ಗಳ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಶೇ 27ರಿಂದ ಶೇ 30ಕ್ಕೆ ಏರಿಸಿದ್ದರಿಂದ ಈ ಶ್ರೇಣಿಯ ವಾಹನಗಳ ಮಾರಾಟ ಇಳಿಮುಖವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.