ಚನ್ನರಾಯಪಟ್ಟಣ: ಪುರಸಭಾ ವ್ಯಾಪ್ತಿಯ ಮಾಂಸ ಮಾರಾಟ ಮಳಿಗೆಗೆ ರೂ. 8 ಸಾವಿರ, ಕೋಳಿ ಮಾಂಸ ಮಾರಾಟ ಮಳಿಗೆಗಳಿಗೆ ರೂ. 6 ಸಾವಿರ, ಮೀನು ಮಾರಾಟಕ್ಕೆ ರೂ.4 ಸಾವಿರ ಹಾಗೂ ಹಂದಿ ಮಾಂಸ ಮಾರಾಟದ ಮಳಿಗೆಗಳಿಂದ ರೂ. 5 ಸಾವಿರ. ಹೀಗೆ ಮಾಂಸ ಮಾರಾಟ ಮಳಿಗೆಗಳಿಂದ ಪರವಾನಗಿ ಶುಲ್ಕ ವಸೂಲಿ ಮಾಡಲು ಪುರಸಭೆ ಬುಧವಾರ ತೀರ್ಮಾನಿಸಿದೆ.

ಪುರಸಭಾಧ್ಯಕ್ಷೆ ಗೀತಾ ಅವಿನಾಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಕೆ.ಜೆ. ಸುರೇಶ್, ಬಿ. ನಾಗರಾಜು, ಸಿ.ಕೆ. ಗೋಪಾಲಕೃಷ್ಣ ಅವರುಗಳು, ಪಟ್ಟಣದಲ್ಲಿ ಮಾಂಸ ಮಾರಾಟ ಮಳಿಗೆ ಸೇರಿ ಹೊರಗಡೆಯೂ ಮಾರಾಟ ಮಾಡಲಾಗುತ್ತಿದೆ. ಇವುಗಳ ತ್ಯಾಜ್ಯವನ್ನು ಪುರಸಭೆ ವಿಲೇವಾರಿ ಮಾಡುತ್ತದೆ. ಆದರೆ, ಪರವಾನಗಿ ಶುಲ್ಕ ವಸೂಲಿ ಮಾಡುವಲ್ಲಿ ಮುಖ್ಯಾಧಿಕಾರಿ ವಿಫಲರಾಗಿದ್ದಾರೆ. ಏಕೆ ಶುಲ್ಕ ವಸೂಲಿ ಮಾಡುತ್ತಿಲ್ಲ ಎಂಬುದನ್ನು ಸಭೆಗೆ ಸ್ಪಷ್ಟಪಡಿಸಬೇಕು.

ಹೊಳೆನರಸೀಪುರದಲ್ಲಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇಲ್ಲೇಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಶಾಸಕ ಸಿ.ಎಸ್. ಪುಟ್ಟೇಗೌಡ ಮಾತನಾಡಿ, ಇದೇ ಮೊದಲ ಬಾರಿಗೆ ಪರವಾನಗಿ ಶುಲ್ಕ ವಿಧಿಸಲಾಗುತ್ತಿದೆ. ಒಂದೇ ಸಲ ಶುಲ್ಕವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಗದಿ ಮಾಡಲಾಯಿತು ಎಂಬ ಭಾವನೆ ಬರುವುದು ಬೇಡ. ಹಾಗಾಗಿ ಮಾಂಸ ಮಾರಾಟಗಾರರಿಗೆ ಹೊರೆಯಾಗದಂತೆ ಶುಲ್ಕ ವಸೂಲಿ ಮಾಡಬೇಕು ಎಂದು ಹೇಳಿದಾಗ ಅದಕ್ಕೆ ಎಲ್ಲ ಸದಸ್ಯರು ಮೇಲ್ಕಂಡಂತೆ ಶುಲ್ಕ ವಿಧಿಸಲು ತೀರ್ಮಾನಿಸಿದರು.

ಸಾಮಾನ್ಯ ಸಭೆ ಕರೆಯುವ ಮುನ್ನ ಒಂದೇ ಒಂದು ಬಾರಿ ಪೂರ್ವಭಾವಿ ಸಭೆ ಕರೆದ ಉದಾಹರಣೆ ಇಲ್ಲ. ಮುಖ್ಯಾಧಿಕಾರಿ ಮನಸಿಗೆ ಬಂದಂತೆ ನಡೆದುಕೊಳ್ಳುತ್ತಾರೆ. 4 ವರ್ಷದ ಅವಧಿಯಲ್ಲಿ ವಾರ್ಡ್ಗಳಲ್ಲಿ ಸಮರ್ಪಕ ಅಭಿವೃದ್ಧಿ ಕೈಗೊಳ್ಳಲಾಗಿಲ್ಲ. ಬೇಸಿಗೆ ಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಅಗುತ್ತಿಲ್ಲ. ಪ್ರತಿವರ್ಷ ಬಜೆಟ್ನಲ್ಲಿ ತೆಗೆದಿರಿಸಿದ ಹಣ ಸಮರ್ಪಕವಾಗಿ ಖರ್ಚಾಗುತ್ತಿಲ್ಲ. ಕೊನೆ ಪಕ್ಷ ಆಯಾ ಇಲಾಖೆಯಿಂದಲಾದರೂ ಕೆಲಸ ಮಾಡಿಸಿ ಎಂದು ಸದಸ್ಯ ಎ. ಮಂಜುನಾಥ್ ಆಗ್ರಹಿಸಿದರು.

ಕುಡಿಯುವ ನೀರಿನ ಪೈಪ್ ಸಂಪರ್ಕ ಕಲ್ಪಿಸಿ ಒಂದೂವರೆ ವರ್ಷವಾದರೂ 36 ಸಾವಿರ ರೂ. ಬಿಲ್ ಬಿಡುಗಡೆ ಮಾಡಿಲ್ಲ ಎಂದು ಸದಸ್ಯ ಮಹಮದ್ಗೌಸ್ ಸಭೆಯ ಗಮನಕ್ಕೆ ತಂದರು.ಸಿ.ಟಿ. ಗಣೇಶ್ ಅವರನ್ನು ಗುತ್ತಿಗೆ ದಾರ ಎಂದು ನಮೂದಿಸಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಕೈಗೊಳ್ಳಲು 17 ಸಾವಿರ ರೂ. ಕೆಲಸ ಮಾಡಿಸಲಾಗಿದೆ. ಇವರಿಗೆ ಟೆಂಡರ್ ನೀಡಲಾಗಿದೆಯೇ ಎಂಬುದನ್ನು ಅಧಿಕಾರಿ ಗಳು ಸಭೆಗೆ ತಿಳಿಸಬೇಕು ಎಂದು ಸದಸ್ಯ ಗೋಪಾಲಕೃಷ್ಣ ಒತ್ತಾಯಿಸಿದರು.

ಶಾಸಕ ಪುಟ್ಟೇಗೌಡ ಮಾತನಾಡಿ, ಟೆಂಡರ್ ನೀಡದೇ ಕಾಮಗಾರಿ ಕೈಗೊಂಡರೆ ಇಷ್ಟೆಲ್ಲಾ ರಾದ್ಧಾಂತವಾ ಗುತ್ತದೆ. ನಿಯಮಕ್ಕೆ ಅನುಸಾರವಾಗಿ ಅಧಿಕಾರಿಗಳು ಕೆಲಸಮಾಡಬೇಕು ಎಂದು ಹೇಳಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎ. ಆರ್. ಧನಶೇಖರ್ ಮಾತನಾಡಿದರು. ಉಪಾಧ್ಯಕ್ಷ ಸಿ.ಎನ್. ಮೂರ್ತಿ, ಮುಖ್ಯಾಧಿಕಾರಿ ಎಚ್.ಎಸ್. ಚಂದ್ರ ಶೇಖರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.