ಬುಧವಾರ, ಆಗಸ್ಟ್ 4, 2021
21 °C

ಮಾಗಡಿ: ಮಕ್ಕಳಿಗೆ ಸಂಸ್ಕಾರ ಕಲಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ಆರ್ಯವೈಶ್ಯ ಜನಾಂಗದವರು ಹಣ ಗಳಿಕೆಯ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು ಎಂದು ರಾಜ್ಯ ಆರ್ಯವೈಶ್ಯ ಮಹಾ ಸಭಾ ಅಧ್ಯಕ್ಷ ರವಿಶಂಕರ್ ನುಡಿದರು.ಕುದೂರಿನಲ್ಲಿ ಆರ್ಯವೈಶ್ಯ ಮಂಡಳಿವತಿಯಿಂದ ನಡೆದ ಕನ್ಯಕಾಪರಮೇಶ್ವರಿ ಪುನರ್ ಪ್ರತಿಷ್ಠಾ ಕುಂಭಾಭಿಷೇಕ ಮಹೋತ್ಸವದಲ್ಲಿ ಮಾತನಾಡಿದರು.ವೈಶ್ಯ ಜನಾಂಗದವರು ಕೂಪ ಮಂಡೂಕಗಳಂತೆ ಸ್ವಜಾತಿಗೆ ಮಾತ್ರ ಸೀಮಿತರಾಗಬೇಡಿ. ಜಾತಿಯ ಸಂಕೋಲೆಯಿಂದ ಹೊರಬಂದು, ಇನ್ನಿತರೆ ಸಮಾಜದವರೊಂದಿಗೆ ಸೇರಿ ಕೆಲಸ ಮಾಡಿದಾಗ ನಾವು ಮಾಡುವ ಸಮಾಜ ಸೇವಾ ಕಾರ್ಯಗಳಿಗೆ ನೆಲೆ ಮತ್ತು ಬೆಲೆ ಲಭಿಸುತ್ತದೆ ಎಂದು ತಿಳಿಸಿದರು.ಡಾ.ಕೆ.ಎಸ್.ಮಂಜುನಾಥ್ ಮಾತನಾಡಿ. ‘ನಾವು ಬೆಳೆದಂತೆ ನಮ್ಮ ಊರು ಬೆಳೆಯಬೇಕು. ಯಾವುದೇ ಜಾತಿಯ  ನಡುವೆ ತಾರತಮ್ಯ ಮಾಡ ಬೇಡಿ, ಮಾನವರೆಲ್ಲರೂ ಒಂದೇ, ಇನ್ನೊಬ್ಬರಿಗಾಗಿ ಗಳಿಸಿದ್ದರಲ್ಲಿ ಸ್ವಲ್ಪ ದಾನ ಮಾಡಿದರೆ ದೇವರು ಮೆಚ್ಚುತ್ತಾನೆ’ ಎಂದರು.ಪೆನುಗೊಂಡೆಯ ರಾಮಮೂರ್ತಿ, ಹಿರಿಯರಾದ ಲಕ್ಷ್ಮೀನಾರಾಯಣ ಶೆಟ್ಟಿ, ಕುದೂರು ಗ್ರಾ.ಪಂ. ಅಧ್ಯಕ್ಷ ಕೆ.ಬಿ.ಬಾಲರಾಜು, ಉಪಾಧ್ಯಕ್ಷೆ ಸೌಮ್ಯ ಸತೀಶ್, ಎಸ್.ಜಿ.ರಮೇಶ್ ಗುಪ್ತ,  ವಾಸವಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ,  ಉಪಾಧ್ಯಕ್ಷ ಎಸ್.ಕೆ. ಜಗನ್ನಾಥ್‌ಶೆಟ್ಟಿ,  ವಾಸವಿ ಮಹಿಳಾ ಮಂಡಳಿ ಅಧ್ಯಕ್ಷೆ ಲತಾ ರಮೇಶ್, ವಾಸವಿ ಯುವಜನ ವೇದಿಕೆ ಅಧ್ಯಕ್ಷ ಕೆ.ಎಸ್.ರಾಜೇಶ್ ವೇದಿಕೆಯಲ್ಲಿದ್ದರು.ಸನ್ಮಾನ: ಎಸ್.ನಾಗರಾಜಶೆಟ್ಟಿ, ಡಾ.ಕೆ.ಎಸ್.ಮಂಜುನಾಥ್ ಇತರರನ್ನು ಸನ್ಮಾನಿಸಲಾಯಿತು. ರಾಜ ಬೀದಿಯಲ್ಲಿ ಭವ್ಯವಾದ ಮೆರವಣಿಗೆ ನಡೆಸಲಾಯಿತು. ಕುದೂರಿನ ಎಲ್ಲಾ ಆರ್ಯವೈಶ್ಯ ಜನಾಂಗದ ಯುವಕರು, ಮಹಿಳೆಯರು, ವರ್ತಕರು ಭಾಗವಹಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.