ಮಾಜಿ ಯೋಧರ ಅಂತ್ಯಕ್ರಿಯೆಗೂ ಸರ್ಕಾರಿ ಗೌರವ ಸಲ್ಲಲಿ

ಬುಧವಾರ, ಜೂಲೈ 24, 2019
28 °C

ಮಾಜಿ ಯೋಧರ ಅಂತ್ಯಕ್ರಿಯೆಗೂ ಸರ್ಕಾರಿ ಗೌರವ ಸಲ್ಲಲಿ

Published:
Updated:

ಯೋಧರೊಬ್ಬರು ಸೇವೆಯಲ್ಲಿದ್ದಾಗ ಮೃತಪಟ್ಟರೆ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ. ಆದರೆ, ಮಾಜಿ ಯೋಧರು ಮೃತಪಟ್ಟಾಗ ಸರ್ಕಾರ ಕನಿಷ್ಠ ಗೌರವ ಸೂಚಿಸದಿರುವುದು ವಿಪರ್ಯಾಸ.ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಶಿವನಿ ಹೋಬಳಿಯ ಅನುವನಹಳ್ಳಿ ಗ್ರಾಮದ ಮಾಜಿ ಯೋಧ ಟಿ.ಜಿ. ಜಯದೇವ್ ಅವರು ಜೂನ್ 23 ರಂದು ನಿಧನರಾದರು.ಇವರ ನಿಧನ ವಾರ್ತೆಯನ್ನು ತರೀಕೆರೆಯ ಪೊಲೀಸ್ ಉಪಅಧೀಕ್ಷಕರಿಗೆ (ಡಿವೈಎಸ್ಪಿ) ತಿಳಿಸಿದಾಗ ಅವರು, `ಯಾವುದೇ ರೀತಿಯ ಗೌರವ ಸೂಚಿಸಲು ಸರ್ಕಾರ ಆದೇಶ ನೀಡಿಲ್ಲ' ಎಂದು ಉಪದೇಶಿಸಿದರು.ಚೀನಾ- ಭಾರತ ಯುದ್ಧದಲ್ಲಿ ಈ ಮಾಜಿ ಯೋಧ ಹೋರಾಡಿದ್ದರು. ಗ್ರಾಮಸ್ಥರು ಇವರನ್ನು `ಮಿಲಿಟರಿ ಜಯಣ್ಣ' ಎಂದೇ ಕರೆಯುತ್ತಿದ್ದರು.

ದೇಶ ರಕ್ಷಣೆಗೆ ಹೋರಾಡಿದ ಧೀರನಿಗೆ ಗೌರವ ಸಲ್ಲಿಸದಿದ್ದುದು ವಿಷಾದದ ಸಂಗತಿ. ಇನ್ನಾದರೂ ಮಾಜಿ ಯೋಧರು ಮೃತಪಟ್ಟಾಗ ಅಂತ್ಯಸಂಸ್ಕಾರದಲ್ಲಿ ಸರ್ಕಾರಿ ಗೌರವ ಸಲ್ಲುವಂತಾಗಬೇಕು.

-ಎ.ವಿ. ಜಯಣ್ಣ,  ಅನುವನಹಳ್ಳಿ, ತರೀಕೆರೆ ತಾಲ್ಲೂಕು .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry